ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

KSRTC ಯಿಂದ ಶಬರಿಮಲೆಗೆ ಐರಾವತ ಬಸ್ ಸೇವೆ ಆರಂಭ

ಈ ಬಸ್ ಮೈಸೂರು, ಕೋಝಿಕ್ಕೋಡ್, ತ್ರಿಶ್ಶೂರು, ಕೊಟ್ಟಾಯಂ ಹಾಗೂ ಎರುಮೇಲಿ ಮಾರ್ಗವಾಗಿ ಸಂಚರಿಸಲಿದೆ.

ಕೆಎಸ್ ಆರ್ ಟಿಸಿ ಬಸ್ಸು
Sumana Upadhyaya
Updated On : 24 Nov 2026, 9:10 am

ಬೆಂಗಳೂರು: ಅಯ್ಯಪ್ಪ ಸ್ವಾಮಿ ಭಕ್ತರು ಹಾಗೂ ಇತರ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನವೆಂಬರ್ 28ರಿಂದ ಬೆಂಗಳೂರು ಮತ್ತು ನಿಲಕ್ಕಲ್ (ಪಂಪಾ-ಶಬರಿಮಲೆ) ನಡುವೆ ಹೊಸ ಐರಾವತ ವೋಲ್ವೊ ಬಸ್ ಸೇವೆ ಆರಂಭಿಸಲಿದೆ.

ಈ ಬಸ್ ಮೈಸೂರು, ಕೋಝಿಕ್ಕೋಡ್, ತ್ರಿಶ್ಶೂರು, ಕೊಟ್ಟಾಯಂ ಹಾಗೂ ಎರುಮೇಲಿ ಮಾರ್ಗವಾಗಿ ಸಂಚರಿಸಲಿದೆ.

ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಡುವ ಬಸ್, ಮರುದಿನ ಬೆಳಗ್ಗೆ 6.45ಕ್ಕೆ ನಿಲಕ್ಕಲ್ ತಲುಪಲಿದೆ.

Advertisement

Advertisement

Also Read

KSRTC ಪ್ರಯಾಣಿಕರಿಗೆ Good News: ಇನ್ಮುಂದೆ ಟಿಕೆಟ್‌ಗಾಗಿ ಕ್ಯೂ ನಿಲ್ಲಬೇಕಾಗಿಲ್ಲ; WhatsAppನಲ್ಲೇ ಸಿಗಲಿದೆ ಬಸ್ ಟಿಕೆಟ್..!

ಹಿಂದಿರುಗುವ ಪ್ರಯಾಣದಲ್ಲಿ ನಿಲಕ್ಕಲ್‌ನಿಂದ ಸಂಜೆ 6 ಗಂಟೆಗೆ ಹೊರಡುವ ಬಸ್, ಮರುದಿನ ಬೆಳಗ್ಗೆ 7.15ಕ್ಕೆ ಮೈಸೂರು ತಲುಪಲಿದ್ದು, ಬೆಳಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ.

ಕೆಎಸ್‌ಆರ್‌ಟಿಸಿ ಮಾಹಿತಿ ಪ್ರಕಾರ, ಬೆಂಗಳೂರು-ನಿಲಕ್ಕಲ್ ಪ್ರಯಾಣಕ್ಕೆ ವಯಸ್ಕ ಪ್ರಯಾಣಿಕರಿಗೆ ಆನ್‌ಲೈನ್ ಟಿಕೆಟ್ ದರ 1,980 ರೂ. ನಿಗದಿಪಡಿಸಲಾಗಿದೆ. ಮೈಸೂರಿನಿಂದ ನಿಲಕ್ಕಲ್‌ಗೆ ಪ್ರಯಾಣಿಸುವವರಿಗೆ 1,880 ರೂ. ದರ ನಿಗದಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments