ಸಿ.ಸಿ ಪಾಟೀಲ್ 
ರಾಜ್ಯ

ಕಾಂಗ್ರೆಸ್ ಕೈಗೆ ದೇಶದ ಚುಕ್ಕಾಣಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನದಲ್ಲಿ ವಿಲೀನವಾಗುತ್ತೆ: ಸಿ.ಸಿ ಪಾಟೀಲ್

ಎಸ್‌ಐಆರ್‌, ಇವಿಎಮ್‌ ಮಷಿನ್ ಬಗ್ಗೆ ಕಾಂಗ್ರೆಸ್‌ನಿಂದ ಅಪಸ್ವರ ಕೇಳಿಬರುತ್ತಿದೆ. 133 ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಇವಿಎಮ್‌ ಮಷಿನ್ ವರ್ಕ್ ಸರಿಯಾಗಿತ್ತಾ?

ಗದಗ: ದೇಶದ ಚುಕ್ಕಾಣಿ ಕಾಂಗ್ರೆಸ್ ಕೈನಲ್ಲಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನಕ್ಕೆ ಮರ್ಜ್ ಆಗುತ್ತೆ ಎಂದು ಮಾಜಿ ಸಚಿವ ಸಿ.ಸಿ ಪಾಟೀಲ್ ಲೇವಡಿ ಮಾಡಿದ್ದಾರೆ.

ಗದಗದಲ್ಲಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ವೈಫಲ್ಯ ಮರೆಮಾಚಲು ಎಸ್‌ಐಆರ್‌, ಇವಿಎಮ್‌ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡ್ತಾರೆ. ಬರ ಪರಿಹಾರಎ ಎಂದು ರೈತರಿಗೆ 2500 ರೂ. ಬೃಹತ್ ಘೋಷಣೆ ಮಾಡಿದ್ದಾರೆ. ಇದು ಜಗತ್ತಿನಲ್ಲಿ 8ನೇ ಅದ್ಭುತ. ಇದೊಂದು ರೈತ ಪರ ಸರ್ಕಾರ ಎಂದು ಟೀಕಿಸಿದರು.

ಡಿ.ಕೆ ಶಿವಕುಮಾರ್ ಆಡಳಿತ ವೈಫಲ್ಯತೆ ಕಂಡಿದೆ. ಪ್ಲೇನ್ ಟೆಕ್‌ ಆಫ್‌ ಆಗುವ ಹಂತದಲ್ಲಿಲ್ಲ. ರನ್-ವೇಗೆ ಬಂದು ನಿಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಎಸ್‌ಐಆರ್‌, ಇವಿಎಮ್‌ ಮಷಿನ್ ಬಗ್ಗೆ ಕಾಂಗ್ರೆಸ್‌ನಿಂದ ಅಪಸ್ವರ ಕೇಳಿಬರುತ್ತಿದೆ. 133 ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಇವಿಎಮ್‌ ಮಷಿನ್ ವರ್ಕ್ ಸರಿಯಾಗಿತ್ತಾ? ಎಮ್‌ಪಿ ಎಲೆಕ್ಷನ್‌ನಲ್ಲಿ ಸೋತಾಗ ಸರಿ ಇರಲಿಲ್ವಾ? ರಾಜ್ಯ ಸರ್ಕಾರಕ್ಕೆ ಆಲೋಚನಾ ಶಕ್ತಿ ಇರಬೇಕು. ಎಲ್ಲಾ ರಾಜ್ಯದ ಸಿಎಂ ಎಲ್ಲಾ ಬಲ್ಲವರು ಇರೋದಿಲ್ಲ. ಅದಕ್ಕೆ ತಾಂತ್ರಿಕ ಸಿಬ್ಬಂದಿ ಸಮಿತಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Pneumonic Plague: ಮತ್ತೆ ವಕ್ಕರಿಸಿದ 'ಪ್ರಾಚೀನ ಮಹಾಮಾರಿ', 5 ಆಸ್ಪತ್ರೆಗಳೇ ಬಂದ್, ನೂರಾರು ಜನರಿಗೆ ಕ್ವಾರಂಟೈನ್!

ದೆಹಲಿ ಪೊಲೀಸರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪ್ರತಿಭಟನೆ ಮುಂದುವರಿಕೆ, ಹಲವರು ವಶಕ್ಕೆ!

'ಸ್ಕರ್ಟ್`ನೊಳಗೆ ಕಣ್ಣು ಹಾಕೋದ್ ಅಲ್ಲ... 5 ದಿನ ಒಪ್ಪಿ, 6ನೇ ದಿನ ಇಲ್ಲ ಎಂದರೂ.. ಅದನ್ನ ಗೌರವಿಸಬೇಕು’: ನಟಿ Janhvi Kapoor ಕೆಂಡಾಮಂಡಲ

ವೈಡ್ ಪ್ಲಸ್ ಸಿಕ್ಸರ್; ಐತಿಹಾಸಿಕ ನೋಬಾಲ್ ಎಸೆದ ಬೌಲರ್, ಕೈಕೈ ಹಿಸುಕಿಕೊಂಡ ನಾಯಕ! ಅಂಪೈರ್ ತೀರ್ಪು ಅಚ್ಚರಿ-video

'ಓವರ್‌ ಆ್ಯಕ್ಟಿಂಗ್‌ ಅನ್ಕೊಂಡ್ರೆ ನಾನೇನ್ ಮಾಡೋಕೆ ಆಗಲ್ಲ, ನಾನು ಹೀಗೇ ಇರಲು ಇಷ್ಟಪಡುತ್ತೇನೆ': ಟ್ರೋಲರ್ಸ್`ಗೆ ಬಟ್ಟೆ ಸುತ್ತಿ ಹೊಡೆದ ನಟಿ Rashmika Mandanna