ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭಯಲ್ಲಿ ನೀತಿ ಆಯೋಗದ ಉಪಾಧ್ಯಕ್ಷ ಡಾ. ಅಶೋಕ್ ಕುಮಾರ್ ಲಾಹಿರಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ Online Desk
ರಾಜ್ಯ

ರಾಜ್ಯಕ್ಕೆ ಬರಲಿದೆಯಾ 'ಎರಡನೇ ಬೆಂಗಳೂರು'! ಮತ್ತೊಂದು ಮೆಗಾ ಸಿಟಿಗೆ ನೀತಿ ಆಯೋಗದ ಸಲಹೆ; ಹಾಗಾದ್ರೆ, ಎಲ್ಲಿ ತಲೆಯೆತ್ತಲಿದೆ ಹೊಸ ನಗರ?

ಸಿಲಿಕಾನ್ ಸೀಟಿಯಲ್ಲಿ ಜನಸಂಖ್ಯೆ, ಸಂಚಾರ ಒತ್ತಡ ಕಡಿಮೆ ಮಾಡಲು ‘ಎರಡನೇ ಬೆಂಗಳೂರು’ ಎಂಬ ನೀತಿ ಆಯೋಗದ ಪ್ರಸ್ತಾವನೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ಸಿಲಿಕಾನ್ ಸೀಟಿಯಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದು ಅಂದಾಜಿನ ಪ್ರಕಾರ, ಬೆಂಗಳೂರಿನ ಜನಸಂಖ್ಯೆ ಸುಮಾರು 1.47 ಕೋಟಿಯಿಂದ 1.55 ಕೋಟಿಯಷ್ಟಿದೆ. ಇದರ ಪರಿಣಾಮ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಜೊತೆಗೆ, ನೀರಿನ ಅಭಾವ ಮತ್ತು ಕಸ ವಿಲೇವಾರಿ ಸಮಸ್ಯೆಗಳು ನಗರವನ್ನು ಕಾಡುತ್ತಿವೆ. ಅದರಲ್ಲೂ,  ಬೆಂಗಳೂರಿನಲ್ಲಿ ಪ್ರಸ್ತುತ ಸುಮಾರು 26 ಲಕ್ಷ ಐಟಿ ವೃತ್ತಿಪರರಿದ್ದಾರೆ ಎನ್ನಲಾಗಿದ್ದು, ಈ ಸಂಖ್ಯೆ ಶೀಘ್ರದಲ್ಲೇ ಇನ್ನಷ್ಟು ಹೆಚ್ಚಾಗಬಹುದು. ಯಾಕಂದ್ರೆ, ಐಟಿ ಕಾರಣದಿಂದ ದೇಶದಾದ್ಯಂತ ಜನರು ಇಲ್ಲಿಗೆ ದೊಡ್ಡ ಮಟ್ಟದಲ್ಲಿ ಬಂದು ನೆಲೆಸುತ್ತಿದ್ದಾರೆ.

ಹಾಗಾಗಿಯೇ, ಈ ಭಾರವನ್ನು ಕಡಿಮೆ ಮಾಡಲು ಮುಂಬೈ-ಪುಣೆ ಮಾದರಿಯಲ್ಲಿ, ರಾಜ್ಯದಲ್ಲಿ ಮತ್ತೊಂದು ಪ್ರಮುಖ ಆರ್ಥಿಕ ಕೇಂದ್ರವನ್ನು ಅಭಿವೃದ್ಧಿಪಡಿಸಬೇಕು ಎಂಬ ಚರ್ಚೆ ತೀವ್ರಗೊಂಡಿದೆ. ಅದರಂತೆ, ಇತ್ತೀಚೆಗೆ ನೀತಿ ಆಯೋಗದ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಲಾಹಿರಿ ಅವರು ಕರ್ನಾಟಕ ಸರ್ಕಾರದೊಂದಿಗೆ ನಡೆಸಿದ ಸಭೆಯಲ್ಲಿ, ಬೆಂಗಳೂರಿನ ಮೇಲಿನ ಜನಸಂಖ್ಯೆ ಮತ್ತು ಮೂಲಸೌಕರ್ಯದ ಒತ್ತಡವನ್ನು ಕಡಿಮೆ ಮಾಡಲು "ಎರಡನೇ ಬೆಂಗಳೂರು" ನಿರ್ಮಿಸುವ ಗಂಭೀರ ಸಲಹೆಯನ್ನು ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ನೀತಿ ಆಯೋಗದ ಉಪಾಧ್ಯಕ್ಷರು ಹೇಳಿದ್ದೇನು?

ನೀತಿ ಆಯೋಗದ ಉಪಾಧ್ಯಕ್ಷರಾದ ಡಾ. ಅಶೋಕ್ ಕುಮಾರ್ ಲಾಹಿರಿ ಅವರು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರೊಂದಿಗೆ ಬೆಂಗಳೂರಿನಲ್ಲಿ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ, ರ್ನಾಟಕದ ಅಭಿವೃದ್ಧಿಯ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ ಪ್ರಸ್ತುತ ರಾಜಧಾನಿ ಬೆಂಗಳೂರಿನ ಧಾರಣಾ ಸಾಮರ್ಥ್ಯ ಮಿತಿಮೀರುತ್ತಿದೆ. ನಗರದ ಮೇಲಿನ ತೀವ್ರ ಜನಸಂಖ್ಯೆ ಮತ್ತು ಮೂಲಸೌಕರ್ಯಗಳ ಒತ್ತಡವನ್ನು ಕಡಿಮೆ ಮಾಡಲು ರಾಜ್ಯದಲ್ಲಿ 'ಎರಡನೇ ಬೆಂಗಳೂರು' ನಗರವನ್ನು ನಿರ್ಮಿಸುವ ಅಗತ್ಯವಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನೇರ ಸಲಹೆ ನೀಡಿದ್ದಾರೆ.

ಇದೇ ವೇಳೆ, ನೀತಿ ಆಯೋಗದ ಈ ಸಲಹೆ ಅನ್ವಯ, ಇತರ ರಾಜ್ಯಗಳು ಅಳವಡಿಸಿಕೊಂಡಿರುವ ಯಶಸ್ವಿ ನಗರಾಭಿವೃದ್ಧಿ ಮಾದರಿಗಳನ್ನು ಅಧ್ಯಯನ ಮಾಡಿ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದು ಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.

ಎರಡನೇ ಬೆಂಗಳೂರಿನ ಅಗತ್ಯವೇನು?

  • ಅತಿಯಾದ ಜನದಟ್ಟಣೆ: 1991ರಲ್ಲಿ ಕೇವಲ 40 ಲಕ್ಷದಷ್ಟಿದ್ದ ಬೆಂಗಳೂರಿನ ಜನಸಂಖ್ಯೆ ಈಗ 1.3 ಕೋಟಿ ದಾಟಿದೆ. ಇದು ನಗರದ ರಸ್ತೆ, ನೀರು ಮತ್ತು ವಸತಿ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಹೇರುತ್ತಿದೆ.

  • ಆರ್ಥಿಕ ಕೇಂದ್ರೀಕರಣ: ಕರ್ನಾಟಕದ ಒಟ್ಟು ಜಿಡಿಪಿಗೆ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಸೇವಾ ವಲಯವೇ ಸಿಂಹಪಾಲು ಕೊಡುಗೆ ನೀಡುತ್ತದೆ. ಆದರೆ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಈ ಆರ್ಥಿಕ ಬೆಳವಣಿಗೆ ಇತರ ಭಾಗಗಳಿಗೂ ಹಂಚಿಕೆಯಾಗಬೇಕಿದೆ.

  • ಸಂಪನ್ಮೂಲಗಳ ಕೊರತೆ: ಪ್ರತಿ ವರ್ಷ ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆ ಮತ್ತು ಸಂಚಾರ ದಟ್ಟಣೆ ನಗರದ ಜೀವನ ಮಟ್ಟವನ್ನು ಕುಗ್ಗಿಸುತ್ತಿದೆ.

ಹಾಗಾದ್ರೆ, ಈ ಹೊಸ ನಗರ ಎಲ್ಲಿ ಬರಲಿದೆ?

ಸದ್ಯಕ್ಕೆ ಎರಡನೇ ಬೆಂಗಳೂರು ಕೇವಲ ಒಂದು ಕಲ್ಪನೆಯ ಹಂತದಲ್ಲಿದ್ದು, ನಿರ್ದಿಷ್ಟ ಸ್ಥಳ, ಕಾಲಮಿತಿ ಅಥವಾ ಹಣಕಾಸಿನ ನೆರವು ಇನ್ನು ಅಂತಿಮಗೊಂಡಿಲ್ಲ. ಈ ಕುರಿತು ಸಮಗ್ರ ಯೋಜನಾ ವರದಿ ಸಿದ್ಧವಾದ ನಂತರವೇ ಹೊಸ ನಗರ ತಲೆಯೆತ್ತುವ ಜಾಗದ ಸ್ಪಷ್ಟ ಚಿತ್ರಣ ಸಿಗಲಿದೆ. ಆದರೆ, ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಈ ಕೆಳಗಿನ ನಗರಗಳನ್ನು ಎರಡನೇ ರಾಜಧಾನಿ ಅಥವಾ ಉಪಗ್ರಹ ನಗರಗಳಾಗಿ ಅಭಿವೃದ್ಧಿಪಡಿಸಲು ತಜ್ಞರು, ಎರಡು ರೀತಿಯ ಪರಿಕಲ್ಪನೆಯನ್ನು ಮುಂದಿಡುತ್ತಿದ್ದಾರೆ. ಅವು,

  • ಮಾದರಿ 1 (ಉಪಗ್ರಹ ನಗರ ವಿಸ್ತರಣೆ): ಮುಂಬೈಗೆ ಪರ್ಯಾಯವಾಗಿ ನವಿ ಮುಂಬೈ ಅಥವಾ ದೆಹಲಿಗೆ ನೋಯ್ಡಾ/ಗುರುಗ್ರಾಮ್ ಬೆಳೆದಂತೆ, ಬೆಂಗಳೂರಿನ ಸಮೀಪದಲ್ಲೇ ಮತ್ತೊಂದು ವ್ಯವಸ್ಥಿತ ನಗರವನ್ನು ಕಟ್ಟುವುದು. (ಉದಾಹರಣೆಗೆ: ಬಿಡದಿ ಬಳಿ ಉದ್ದೇಶಿತ AI ಸಿಟಿ ಅಥವಾ ತುಮಕೂರು/ರಾಮನಗರ ಭಾಗದ ವಿಸ್ತರಣೆ). 

  • ಮಾದರಿ 2 (ಟಯರ್-2 ನಗರಗಳ ಸಬಲೀಕರಣ): ಬೆಂಗಳೂರಿನಿಂದ ದೂರವಿರುವ ನಗರಗಳನ್ನು ಬೆಂಗಳೂರಿಗೆ ಸಮಾನಾಂತರವಾಗಿ ದೊಡ್ಡ ಮಟ್ಟದಲ್ಲಿ ಬೆಳೆಸುವುದು. ಇದನ್ನೇ ಸರ್ಕಾರ ಬಿಯಾಂಡ್ ಬೆಂಗಳೂರು ಯೋಜನೆಯಡಿ ಪ್ರಯತ್ನಿಸುತ್ತಿದೆ. ಅದರಂತೆ, 

    • ಹುಬ್ಬಳ್ಳಿ-ಧಾರವಾಡ: ಉತ್ತರ ಕರ್ನಾಟಕದ ಪ್ರಮುಖ ಕೇಂದ್ರವಾಗಿದ್ದು, ಈಗಾಗಲೇ ಅವಳಿ ನಗರವಾಗಿ ಬೆಳೆಯುತ್ತಿದೆ.

    • ಮೈಸೂರು: ಬೆಂಗಳೂರಿಗೆ ಹತ್ತಿರದಲ್ಲಿದೆ ಮತ್ತು ಸಾಂಸ್ಕೃತಿಕ ಹಾಗೂ ಪ್ರವಾಸಿ ಕೇಂದ್ರವಾಗಿದೆ. ಐಟಿ ಕಂಪನಿಗಳು ಇಲ್ಲಿಗೂ ವಿಸ್ತರಿಸುತ್ತಿವೆ.

    • ಬೆಳಗಾವಿ: ಇಲ್ಲಿ ಈಗಾಗಲೇ ಸುವರ್ಣಸೌಧ ಇರುವುದರಿಂದ ತಾಂತ್ರಿಕವಾಗಿ ಎರಡನೇ ರಾಜಧಾನಿಯ ಅರ್ಹತೆ ಹೊಂದಿದೆ.

    • ಮಂಗಳೂರು: ಬಂದರು ನಗರಿಯಾಗಿದ್ದು, ಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮುಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೆ. 9ರಂದು ಗೃಹ ಸಚಿವಾಲಯದೊಂದಿಗೆ ಮಾತುಕತೆಗೆ ಮುನ್ನ ಹೋರಾಟ ತೀವ್ರ: ಲಡಾಖ್ ಉನ್ನತ ಮಂಡಳಿ ಎಚ್ಚರಿಕೆ

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

ಪ್ರಧಾನಿ ಮೋದಿ ಮೆಚ್ಚಿದ ಇಡ್ಲಿ ನಿಂಗಮ್ಮನಿಗೆ ಸಂಕಷ್ಟ: ಅಂಗಡಿ ನಡೆಸದಂತೆ GBA ಅಧಿಕಾರಿಗಳ ವಾರ್ನಿಂಗ್!

CJP ಪ್ರತಿಭಟನೆ ವೇಳೆ ಹೆಸರು ದುರುಪಯೋಗ: 'ಬಲಪಂಥೀಯ' ಇನ್‌ಫ್ಲ್ಯುಯೆನ್ಸರ್ ವಿರುದ್ಧ ಕೇಸ್ ದಾಖಲಿಸಿದ ಚಿರಾಗ್ ಪಾಸ್ವಾನ್