ಸಿಎಂ ಡಿ ಕೆ ಶಿವಕುಮಾರ್  
ರಾಜ್ಯ

‘ದೃಢ ಕರ್ನಾಟಕ’: ಮುಂದಿನ 500 ದಿನಗಳು ಮಹತ್ವದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: CM ಡಿ ಕೆ ಶಿವಕುಮಾರ್; Video

ಕರ್ನಾಟಕ ಮುಖ್ಯಮಂತ್ರಿಯಾಗಿ ತಮ್ಮ ಮೊದಲ 100 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಇಂದು ಸಾರ್ವಜನಿಕರಿಗೆ ಬರೆದ ಪತ್ರದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಕರ್ನಾಟಕದ ಜನರ ಸೇವೆಯ ಬದ್ಧತೆಯನ್ನು ಪುನರುಚ್ಚರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್,, ನನ್ನ ಉಸಿರು ಇರುವವರೆಗೂ ಕರ್ನಾಟಕ ಮತ್ತು ಕನ್ನಡಿಗರ ಸೇವೆಯೇ ನನ್ನ ಸಂಕಲ್ಪವಾಗಿರುತ್ತದೆ ಎಂದು ಹೇಳಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿಯಾಗಿ ತಮ್ಮ ಮೊದಲ 100 ದಿನಗಳನ್ನು ಪೂರೈಸಿದ ಸಂದರ್ಭದಲ್ಲಿ ಇಂದು ಸಾರ್ವಜನಿಕರಿಗೆ ಬರೆದ ಪತ್ರದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

ಜನರ ಆಶೋತ್ತರಗಳಿಗೆ ಸ್ಪಂದಿಸುವುದು, ಅವರ ಧ್ವನಿಯಾಗುವುದು. ಬಲಿಷ್ಠ ಕರ್ನಾಟಕ ನಿರ್ಮಾಣಕ್ಕೆ ನಾವು ಹೆಜ್ಜೆ ಇಟ್ಟು 100 ದಿನಗಳು ಪೂರ್ಣಗೊಂಡಿವೆ. ಈ ಶತಕದ ಪಥವು ಮುಂದಿನ ದಿನಗಳಲ್ಲಿ ಸಮೃದ್ಧ, ಸ್ಥಿರ ಮತ್ತು ಅಭಿವೃದ್ಧಿ ಹೊಂದಿದ ಕರುನಾಡಿನತ್ತ ಕರೆದೊಯ್ಯಲಿದೆ. ಜನರ ನಿರೀಕ್ಷೆಗಳನ್ನು ಈಡೇರಿಸಿ, ಅವುಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ನವ ಕರ್ನಾಟಕ ನಿರ್ಮಾಣದ ಪಯಣ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಕಳೆದ 100 ದಿನಗಳಲ್ಲಿ ತಮ್ಮ ಸರ್ಕಾರ ಕೈಗೊಂಡ ಪ್ರಮುಖ ಕ್ರಮಗಳು ಮತ್ತು ಸಾಧನೆಗಳನ್ನು ಡಿ ಕೆ ಶಿವಕುಮಾರ್ ಪಟ್ಟಿ ಮಾಡಿದ್ದಾರೆ. ವೃತ್ತಿಪರ ಕೋರ್ಸ್‌ಗಳಿಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ 7.5% ಮೀಸಲಾತಿ, ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌, ಸುಮಾರು 66,000 ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ 29,679 ಕೋಟಿ ರೂ ಮೊತ್ತದ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ಹಾಗೂ 10,000 ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ ಇವುಗಳಲ್ಲಿ ಸೇರಿವೆ.

ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ AI ವಿಶ್ವವಿದ್ಯಾಲಯ ಸ್ಥಾಪನೆ, ಪ್ರೌಢಶಾಲಾ ಪೂರ್ವ ಹಂತದಿಂದಲೇ AI ಶಿಕ್ಷಣ ಪರಿಚಯಿಸುವುದು, ಮೋಡ ಬಿತ್ತನೆ (Cloud Seeding) ಹಾಗೂ ಉದ್ಯೋಗ ನಿಧಿ ಯೋಜನೆಯನ್ನೂ ಸರ್ಕಾರದ ಪ್ರಮುಖ ಸಾಧನೆಗಳಾಗಿ ಅವರು ಉಲ್ಲೇಖಿಸಿದ್ದಾರೆ.

ರಾಜ್ಯದ ಭವಿಷ್ಯದ ತಮ್ಮ ದೃಷ್ಟಿಕೋನವನ್ನು ‘ದೃಢ ಕರ್ನಾಟಕ’ ಎಂದು ಬಣ್ಣಿಸಿರುವ ಡಿ ಕೆ ಶಿವಕುಮಾರ್, ಆ ಮೂಲಕ ರಾಜ್ಯವನ್ನು ಆರ್ಥಿಕವಾಗಿ ಬಲಿಷ್ಠ, ಸಾಮಾಜಿಕವಾಗಿ ಸಬಲ ಹಾಗೂ ತಂತ್ರಜ್ಞಾನದಲ್ಲಿ ಮುಂದುವರಿದ ರಾಜ್ಯವನ್ನಾಗಿ ರೂಪಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ. ಮುಂದಿನ 500 ದಿನಗಳಿಗೆ ಹೆಚ್ಚಿನ ಸಂಕಲ್ಪ ಮತ್ತು ಪರಿಶ್ರಮದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಜನರಿಗೆ ಭರವಸೆ ನೀಡಿರುವ ಮುಖ್ಯಮಂತ್ರಿ, ನನ್ನ ಸಚಿವ ಸಂಪುಟ ಹಾಗೂ ನಾನು ನಿರಂತರವಾಗಿ ಜನರ ನಡುವೆ ಇರುತ್ತೇವೆ. ಕೆಲಸ ಮಾಡುತ್ತಲೇ ಇರುತ್ತೇವೆ. ನನ್ನ ಉಸಿರು ಇರುವವರೆಗೂ ಕರ್ನಾಟಕ ಮತ್ತು ಕನ್ನಡಿಗರ ಸೇವೆಯೇ ನನ್ನ ಸಂಕಲ್ಪವಾಗಿರುತ್ತದೆ ಎಂದು ಪುನರುಚ್ಚರಿಸಿದ್ದಾರೆ.

ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ‘ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಜನರ ಮುಂದಿಟ್ಟ ಅವರು, ಕರ್ನಾಟಕದ ಈ ಗ್ಯಾರಂಟಿ ಮಾದರಿಯು ಇಡೀ ದೇಶಕ್ಕೇ ಮಾದರಿಯಾಗಿದ್ದು, ಇತರ ರಾಜ್ಯಗಳು ಹಾಗೂ ದೇಶಗಳು ಇದನ್ನು ಅನುಕರಿಸುತ್ತಿವೆ ಎಂದರು.

ಇದೇ ವೇಳೆ ಸಾರಿಗೆ ಸಚಿವರಾಗಿದ್ದಾಗ ‘ಶಕ್ತಿ’ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದ ಹಾಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರ ಸೇವೆಯನ್ನು ಸ್ಮರಿಸಿದ ಸಿಎಂ, ಇದೀಗ ಮಹಿಳೆಯರಿಗೆ ‘ಸ್ಮಾರ್ಟ್ ಕಾರ್ಡ್’ ವಿತರಿಸುವ ಹೊಣೆಯನ್ನು ಸಚಿವ ಸುರೇಶ್ ಅವರಿಗೆ ವಹಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ 100 ದಿನಗಳನ್ನು ಪೂರ್ಣಗೊಳಿಸಿದೆ. ಹೀಗಾಗಿ ಇಂದು ನಾವು ಸಂಭ್ರಮಾಚರಣೆ ನಡೆಸುವುದಿಲ್ಲ. ಬದಲಾಗಿ, ಕರ್ನಾಟಕದ ಜನರಿಗೆ ನಮ್ಮ ಮುಂದಿನ ಯೋಜನೆಗಳೇನು, ಈ 100 ದಿನಗಳಲ್ಲಿ ನಾವು ಹೇಗೆ ಕಾರ್ಯನಿರ್ವಹಿಸಿದ್ದೇವೆ ಮತ್ತು ಯಾವ ಗುರಿಗಳನ್ನು ನಿಗದಿಪಡಿಸಿಕೊಂಡಿದ್ದೇವೆ ಎಂಬುದನ್ನು ತಿಳಿಸುತ್ತೇವೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ವಿಧಾನಸೌಧ ಮತ್ತು ಅದರ ಬ್ಯಾಂಕ್ವೆಟ್ ಹಾಲ್‌ಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಡಾ ಪರಮೇಶ್ವರ ತಿಳಿಸಿದರು.

ಈ ಅವಧಿಯಲ್ಲಿ ಸರ್ಕಾರ ಆರಂಭಿಸಿದ ಅಥವಾ ಮುಂದುವರಿಸಿದ ಹಲವು ಯೋಜನೆಗಳು ಮತ್ತು ಉಪಕ್ರಮಗಳನ್ನು ವಿವಿಧ ಸಚಿವರು ಪ್ರಸ್ತಾಪಿಸಿದರು.

ರೈತರಿಗಾಗಿ ರೈತ ಚೈತನ್ಯ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ಗಳನ್ನು ಸಚಿವ ಅಜಯ್ ಸಿಂಗ್ ಪ್ರಸ್ತಾಪಿಸಿದರು. 2023ರ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು 2028ರೊಳಗೆ ಕಾಂಗ್ರೆಸ್ ಸರ್ಕಾರ ಈಡೇರಿಸಲಿದೆ ಹಾಗೂ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಯುವ ಉದ್ಯಮಿ ಸೇತು, ಸರ್ಕಾರಿ ಆಸ್ಪತ್ರೆಗಳನ್ನು ವೈದ್ಯಕೀಯ ಕಾಲೇಜುಗಳೊಂದಿಗೆ ಸಂಪರ್ಕಿಸುವ ಕಾರ್ಯಕ್ರಮ, ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ಉದ್ಯೋಗಾವಕಾಶಗಳು ಹಾಗೂ ಭಾರತ್ ಜೋಡೋ ಯುವ ಸಂಘ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಚಿವ ಶರಣ್ ಪ್ರಕಾಶ್ ಪಾಟೀಲ್ ಉಲ್ಲೇಖಿಸಿದರು.

ಇದು ಕೇವಲ ಆರಂಭ: ಸಚಿವ ಪ್ರಿಯಾಂಕ್ ಖರ್ಗೆ

ಡಿ ಕೆ ಶಿವಕುಮಾರ್ ಸರ್ಕಾರದ 100 ದಿನಗಳ ಪೂರ್ಣಗೊಂಡ ಸಂದರ್ಭವನ್ನು ಕಾಂಗ್ರೆಸ್ ತನ್ನ ನೀತಿ ಆದ್ಯತೆಗಳನ್ನು ಒತ್ತಿಹೇಳಲು ಹಾಗೂ 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೀರ್ಘಾವಧಿಯ ರಾಜಕೀಯ ಕಾರ್ಯತಂತ್ರವನ್ನು ಸೂಚಿಸಲು ಬಳಸಿಕೊಂಡಿತು.

ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದ ಮೊದಲ 100 ದಿನಗಳು ಕೇವಲ ಆರಂಭ ಎಂದು ಹೇಳಿದ್ದು, 2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇದು ಕೇವಲ ಆರಂಭ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಉತ್ತಮ ಕೆಲಸಗಳನ್ನು ಡಿ.ಕೆ. ಶಿವಕುಮಾರ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರ ಉದ್ದೇಶ ಸ್ಪಷ್ಟವಾಗಿದೆ. ನೀತಿ, ಆರ್ಥಿಕತೆ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ವೇಗದ ಬೆಳವಣಿಗೆ ನಡೆಯಲಿದೆ ಎಂದು ಹೇಳಿದ್ದಾರೆ.

ಸರ್ಕಾರ ಕೇವಲ ಎರಡು ವರ್ಷಗಳ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ ದೀರ್ಘಾವಧಿಯ ಯೋಜನೆಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಇದು ಕೇವಲ ಎರಡು ವರ್ಷಗಳ ಮಾರ್ಗಸೂಚಿಯಲ್ಲ. ಮುಂದಿನ ಚುನಾವಣೆಯನ್ನೂ ಒಳಗೊಂಡ ಏಳು ವರ್ಷಗಳ ಮಾರ್ಗಸೂಚಿಯಾಗಿದೆ. ಹೀಗಾಗಿ 2028ರಲ್ಲೂ ಕಾಂಗ್ರೆಸ್‌ಗೆ ಜನರ ಬೆಂಬಲ ದೊರೆಯಲಿದೆ ಎಂದರು.

ದೊಡ್ಡ ಪ್ರಮಾಣದ ಸಂಭ್ರಮಾಚರಣೆ ನಡೆಸುವ ಬದಲು, ಸರ್ಕಾರದ ಸಾಧನೆಗಳು ಮತ್ತು ಮುಂದಿನ ಯೋಜನೆಗಳನ್ನು ಜನರ ಮುಂದಿಡಲು 100 ದಿನಗಳ ಮೈಲಿಗಲ್ಲನ್ನು ಬಳಸಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ ಜಿ. ಪರಮೇಶ್ವರ ಹೇಳಿದರು.

ಬಿಜೆಪಿಯ ‘ಚಾರ್ಜ್‌ಶೀಟ್’

ಇದೇ ವೇಳೆ ವಿಧಾನಸೌಧದಲ್ಲಿ ಇಂದು ಸರ್ಕಾರ 100 ದಿನಗಳ ಕಾರ್ಯಕ್ರಮ ನಡೆಸಿರುವುದನ್ನು ಬಿಜೆಪಿ ಪ್ರಶ್ನಿಸಿದೆ.

ವಿಪಕ್ಷ ನಾಯಕ ಆರ್. ಅಶೋಕ್ ಅವರು ಕಾರ್ಯಕ್ರಮವನ್ನು “100 ದಿನಗಳ ಚಾರ್ಜ್‌ಶೀಟ್” ಎಂದು ವ್ಯಂಗ್ಯವಾಡಿದ್ದು, ಡಿ ಕೆ ಶಿವಕುಮಾರ್ ಸರ್ಕಾರ ಹಲವು ಕ್ಷೇತ್ರಗಳಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಅಶೋಕ್ ಅವರು 33 ಸದಸ್ಯರ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲದಿರುವುದು, ಸರ್ಕಾರಿ ನೇಮಕಾತಿಗಳಲ್ಲಿ ಅಕ್ರಮಗಳ ಆರೋಪ, ಬರ ಪರಿಹಾರ ಹಾಗೂ ಕಲ್ಯಾಣ ಯೋಜನೆಗಳ ಹಣ ಪಾವತಿಯಲ್ಲಿ ವಿಳಂಬ, ಬೆಂಗಳೂರಿನ ನಾಗರಿಕ ಸಮಸ್ಯೆಗಳು, ಬಿಡದಿ ಟೌನ್‌ಶಿಪ್ ಕುರಿತ ಆತಂಕಗಳು ಹಾಗೂ ಪಾರ್ಕ್‌ಗಳ ತಿದ್ದುಪಡಿ ಮಸೂದೆಯನ್ನು ಸರ್ಕಾರ ಹಿಂಪಡೆದಿರುವುದನ್ನು ಪ್ರಸ್ತಾಪಿಸಿದ್ದಾರೆ.

ಇದು 100 ದಿನಗಳ ಸಾಧನಾ ಸಮಾವೇಶವಲ್ಲ. ಇದು 100 ದಿನಗಳ ಚಾರ್ಜ್‌ಶೀಟ್” ಎಂದು ಅಶೋಕ್ ಹೇಳಿದ್ದಾರೆ. ರೈತರು, ಮಹಿಳೆಯರು, ಉದ್ಯೋಗ ಮತ್ತು ಬೆಂಗಳೂರಿನ ಮೂಲಸೌಕರ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸರ್ಕಾರವನ್ನು ಪ್ರತ್ಯೇಕವಾಗಿ “ಯೂ-ಟರ್ನ್ ಸರ್ಕಾರ” ಎಂದು ಟೀಕಿಸಿದ್ದಾರೆ. ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡ ಬಳಿಕ ಅವುಗಳನ್ನು ಬದಲಾಯಿಸಿರುವುದು ಅಥವಾ ಹಿಂಪಡೆದಿರುವುದನ್ನು ಅವರು ಇದಕ್ಕೆ ಉದಾಹರಣೆಯಾಗಿ ನೀಡಿದ್ದಾರೆ.

ಕರ್ನಾಟಕ ಸರ್ಕಾರದ ಪಾರ್ಕ್‌ಗಳ (ಸಂರಕ್ಷಣೆ) ಕಾಯ್ದೆಗೆ ಮಾಡಿದ್ದ ತಿದ್ದುಪಡಿಗಳನ್ನು ಹಿಂಪಡೆದಿರುವುದು ಹಾಗೂ ಟೀಕೆಗಳ ಬಳಿಕ ಬರಪೀಡಿತ ತಾಲೂಕುಗಳ ಸಂಖ್ಯೆಯನ್ನು ಹೆಚ್ಚಿಸಿರುವುದನ್ನು ವಿಜಯೇಂದ್ರ ಪ್ರಸ್ತಾಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಡವರಿಗೆ 5 ಲಕ್ಷ ಉಚಿತ ಸೈಟ್, ರೈತ ಚೈತನ್ಯ: 100 ದಿನಗಳ ಆಡಳಿತ ಪೂರೈಸಿದ ಡಿ ಕೆ ಶಿವಕುಮಾರ್ ಸರ್ಕಾರದಿಂದ ಬಂಪರ್ ಗಿಫ್ಟ್ ಘೋಷಣೆ; Video

‘ಭಾರತ ನಡೆಯುವುದು ಸಂವಿಧಾನದಿಂದಲೇ ಹೊರತು ಬಹಿಷ್ಕಾರದಿಂದಲ್ಲ’: ಹಿಂದು-ಮುಸ್ಲಿಂ ಒಗ್ಗಟ್ಟಿಗೆ ಅಠಾವಳೆ ಕರೆ, ಗರ್ಬಾ ಉತ್ಸವದಲ್ಲಿ ಮುಸ್ಲಿಮರ ನಿಷೇಧಕ್ಕೆ ವಿರೋಧ..!

'ಟ್ರೋಲ್ ಕಟೆಂಟ್ ಆಗಿ ಬಳಕೆ'..!; ‘ಗರ್ಬಾ, ನವರಾತ್ರಿ ಎಲ್ಲರ ಹಬ್ಬ.. ಮುಸ್ಲಿಮರಿಗೆ ಆಕ್ಷೇಪವೇಕೆ?': Amruta Fadnavis ಸಮರ್ಥನೆ, Video

ಬರದನಾಡು ಚಿತ್ರದುರ್ಗಕ್ಕೆ ಐತಿಹಾಸಿಕ ಕ್ಷಣ; ಗೊನೂರು ಕೆರೆ ತಲುಪಿದ ಭದ್ರಾ ಮೇಲ್ದಂಡೆ ಯೋಜನೆಯ ನೀರು, Video

ರೇಣುಕಾಸ್ವಾಮಿ ಪ್ರಕರಣದ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ; ಫಾರ್ಮ್‌ಹೌಸ್ ಪಕ್ಷಿ ವಿವಾದದಲ್ಲಿ ಕೋರ್ಟ್‌ನಿಂದ ಸಮನ್ಸ್ ಜಾರಿ