ಹೊತ್ತಿ ಉರಿದ ಕ್ಲಾಸ್​ರೂಮ್ 
ರಾಜ್ಯ

ರಾಮನಗರ: KPS ಶಾಲೆಯಲ್ಲಿ ಭಾರೀ ಅಗ್ನಿ ಅವಘಡ; ಹೊತ್ತಿ ಉರಿದ ಕ್ಲಾಸ್​ರೂಮ್, ಪೀಠೋಪಕರಣ ಭಸ್ಮ!

ಬೆಂಕಿ ಅವಘಡದಲ್ಲಿ ಶಾಲಾ ಕೊಠಡಿಯಲ್ಲಿದ್ದ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣಗಳು ಹಾಗೂ ಇತರೆ ಕಲಿಕಾ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ.

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಕುದೂರು ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಯಲ್ಲಿ ಬುಧವಾರ ತಡರಾತ್ರಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಶಾಲೆಯ ಕೊಠಡಿಯೊಂದು ಸಂಪೂರ್ಣವಾಗಿ ಹೊತ್ತಿ ಉರಿದಿದೆ.

ಬೆಂಕಿ ಅವಘಡದಲ್ಲಿ ಶಾಲಾ ಕೊಠಡಿಯಲ್ಲಿದ್ದ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣಗಳು ಹಾಗೂ ಇತರೆ ಕಲಿಕಾ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಶಾಲೆಯ ಹೊಸ ಕಟ್ಟಡ ನಿರ್ಮಾಣವಾದ ನಂತರ ಈ ಹಳೆಯ ಕೊಠಡಿಯನ್ನು ಖಾಲಿ ಬಿಡಲಾಗಿತ್ತು ಎನ್ನಲಾಗಿದೆ.

ನಿನ್ನೆ ತಡರಾತ್ರಿ ಇದ್ದಕ್ಕಿದ್ದಂತೆ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಕೊಠಡಿ ಹೊತ್ತಿ ಉರಿಯಲಾರಂಭಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬೆಂಕಿ ಅವಘಡವು ಆಕಸ್ಮಿಕವಾಗಿ ಸಂಭವಿಸಿದೆಯೇ ಅಥವಾ ಯಾರಾದರೂ ಕಿಡಿಗೇಡಿಗಳು ಎಸಗಿದ ಕೃತ್ಯವೇ ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.

ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಡವರಿಗೆ 5 ಲಕ್ಷ ಉಚಿತ ಸೈಟ್, ರೈತ ಚೈತನ್ಯ: 100 ದಿನಗಳ ಆಡಳಿತ ಪೂರೈಸಿದ ಡಿ ಕೆ ಶಿವಕುಮಾರ್ ಸರ್ಕಾರದಿಂದ ಬಂಪರ್ ಗಿಫ್ಟ್ ಘೋಷಣೆ; Video

‘ಭಾರತ ನಡೆಯುವುದು ಸಂವಿಧಾನದಿಂದಲೇ ಹೊರತು ಬಹಿಷ್ಕಾರದಿಂದಲ್ಲ’: ಹಿಂದು-ಮುಸ್ಲಿಂ ಒಗ್ಗಟ್ಟಿಗೆ ಅಠಾವಳೆ ಕರೆ, ಗರ್ಬಾ ಉತ್ಸವದಲ್ಲಿ ಮುಸ್ಲಿಮರ ನಿಷೇಧಕ್ಕೆ ವಿರೋಧ..!

'ಟ್ರೋಲ್ ಕಟೆಂಟ್ ಆಗಿ ಬಳಕೆ'..!; ‘ಗರ್ಬಾ, ನವರಾತ್ರಿ ಎಲ್ಲರ ಹಬ್ಬ.. ಮುಸ್ಲಿಮರಿಗೆ ಆಕ್ಷೇಪವೇಕೆ?': Amruta Fadnavis ಸಮರ್ಥನೆ, Video

ಬರದನಾಡು ಚಿತ್ರದುರ್ಗಕ್ಕೆ ಐತಿಹಾಸಿಕ ಕ್ಷಣ; ಗೊನೂರು ಕೆರೆ ತಲುಪಿದ ಭದ್ರಾ ಮೇಲ್ದಂಡೆ ಯೋಜನೆಯ ನೀರು, Video

ರೇಣುಕಾಸ್ವಾಮಿ ಪ್ರಕರಣದ ಬೆನ್ನಲ್ಲೇ ನಟ ದರ್ಶನ್‌ಗೆ ಮತ್ತೊಂದು ಕಾನೂನು ಸಂಕಷ್ಟ; ಫಾರ್ಮ್‌ಹೌಸ್ ಪಕ್ಷಿ ವಿವಾದದಲ್ಲಿ ಕೋರ್ಟ್‌ನಿಂದ ಸಮನ್ಸ್ ಜಾರಿ