ಸಾಂದರ್ಭಿಕ ಚಿತ್ರ 
ರಾಜ್ಯ

ಪೂರ್ಣಗೊಂಡ ಸಮೀಕ್ಷೆ ಕಾರ್ಯ: ರಾಜ್ಯದಲ್ಲಿ ಎಷ್ಟು ಕೆರೆಗಳಿವೆ ಗೊತ್ತಾ?

ಸಮೀಕ್ಷೆಯು ರಾಜ್ಯಾದ್ಯಂತ 14,18,894 ಅಂತರ್ಜಲ ಯೋಜನೆಗಳು, 77,573 ಮೇಲ್ಮೈ ಜಲ ಯೋಜನೆಗಳು ಮತ್ತು 38,960 ಜಲಮೂಲ(ಕೆರೆಗಳು) ದಾಖಲಿಸಿದೆ

ಬೆಂಗಳೂರು: ರಾಜ್ಯದಲ್ಲಿನ ಕೆರೆಗಳ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮ ಸಿಂಗ್ ತಿಳಿಸಿದ್ದಾರೆ.

ರಾಜ್ಯದಲ್ಲಿನ 30,671 ಹಳ್ಳಿಗಳು, 300 ನಗರ ಸ್ಥಳೀಯ ಸಂಸ್ಥೆಗಳು ಮತ್ತು 7,128 ನಗರ ವಾರ್ಡ್‌ ಒಳಗೊಂಡಂತೆ ಏಳನೇ ಸಣ್ಣ ನೀರಾವರಿ ಗಣತಿ ಮತ್ತು ಎರಡನೇ ಜಲಮೂಲಗಳ (ಕೆರೆಗಳ) ಸಮೀಕ್ಷೆಯ ಕ್ಷೇತ್ರ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಮೀಕ್ಷೆಯು ರಾಜ್ಯಾದ್ಯಂತ 14,18,894 ಅಂತರ್ಜಲ ಯೋಜನೆಗಳು, 77,573 ಮೇಲ್ಮೈ ಜಲ ಯೋಜನೆಗಳು ಮತ್ತು 38,960 ಜಲಮೂಲ(ಕೆರೆಗಳು) ದಾಖಲಿಸಿದೆ. ಕೇಂದ್ರ ಜಲಶಕ್ತಿ ಸಚಿವಾಲಯದ ಸಂಪೂರ್ಣ ಆರ್ಥಿಕ ನೆರವಿನೊಂದಿಗೆ ಈ ಬೃಹತ್ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಇದರ ಕ್ಷೇತ್ರ ಕಾರ್ಯವು ಆಗಸ್ಟ್ 2026ರಲ್ಲಿ ಪೂರ್ಣಗೊಂಡಿತು.

ಸಣ್ಣ ನೀರಾವರಿ ಸಮೀಕ್ಷೆಯು 2,000 ಹೆಕ್ಟೇರ್‌ವರೆಗೆ ನೀರಾವರಿ ಸಾಮರ್ಥ್ಯವಿರುವ ಯೋಜನೆಗಳನ್ನು ಒಳಗೊಂಡಿದ್ದರೆ, ಜಲಮೂಲಗಳ ಸಮೀಕ್ಷೆಯು ಕೆರೆಗಳು, ಕಟ್ಟೆಗಳು ಮತ್ತು ಇತರ ಜಲಮೂಲಗಳ ವಿವರಗಳನ್ನು ಸಂಗ್ರಹಿಸಿದೆ.

ಕರ್ನಾಟಕವು ಬರಗಾಲ, ಅಂತರ್ಜಲ ಕುಸಿತ ಮತ್ತು ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಎದುರಿಸುತ್ತಿರುವುದರಿಂದ, ನಿಖರ ಮತ್ತು ನವೀಕೃತ ಜಲ ದತ್ತಾಂಶವು ಅತ್ಯಗತ್ಯವಾಗಿದೆ. ಈ ಸಮೀಕ್ಷೆಯ ಫಲಿತಾಂಶಗಳು, ತುರ್ತು ಜಲ ಸಂರಕ್ಷಣಾ ಕ್ರಮಗಳ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಲು ಮತ್ತು ಸಣ್ಣ ನೀರಾವರಿ ಮೂಲಸೌಕರ್ಯವನ್ನು ಬಲಪಡಿಸಲು ಸರ್ಕಾರಕ್ಕೆ ಸಹಕಾರಿಯಾಗಲಿವೆ ಎಂದು ಅವರು ತಿಳಿಸಿದರು.

ಸಮೀಕ್ಷೆಯ ದತ್ತಾಂಶವು ಕೇವಲ ವರದಿಗೆ ಸೀಮಿತವಾಗದೆ ಸಕ್ರಿಯವಾಗಿ ಬಳಕೆಯಾಗಬೇಕು. ಇದು ವಿಶೇಷವಾಗಿ ಬರಪೀಡಿತ ಪ್ರದೇಶಗಳಲ್ಲಿ ಕೆರೆಗಳ ಪುನರುಜ್ಜೀವನ, ಅಂತರ್ಜಲ ಮರುಪೂರಣ, ತಡೆಗೋಡೆ ಅಣೆಕಟ್ಟುಗಳ (ಚೆಕ್ ಡ್ಯಾಮ್) ನಿರ್ಮಾಣ ಮತ್ತು ಕೆರೆ ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡಲು ನೆರವಾಗುತ್ತದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ತೀವ್ರ ಧ್ರುವೀಕರಣಗೊಂಡ ಜಗತ್ತು, ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಬ್ರಿಕ್ಸ್ ಶೃಂಗಸಭೆ ಯಶಸ್ವಿ-ಎಸ್ ಜೈಶಂಕರ್

ಬೆಳಗಾವಿ: ಬೈಕ್- ಸಾರಿಗೆ ಬಸ್ ನಡುವೆ ಅಪಘಾತ: ಮೂವರು ಸ್ಥಳದಲ್ಲೇ ಸಾವು!

ಸಮುದ್ರ ಅಡ್ಡವಿರದಿದ್ದರೆ ನೆಹರೂ- ಗಾಂಧಿ ಕುಟುಂಬ ಅರಬ್‌ ದೇಶಗಳಲ್ಲೂ ಚುನಾವಣೆಗೆ ನಿಲ್ತಿತ್ತು: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್!

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ