ಅನಂತ್ ನಾಗ್ 
ರಾಜ್ಯ

“ಹೊರಗಿನ ಬರಗಾಲ ಚರ್ಚಿಸಲು ಬಂದರೆ, ಸದನದಲ್ಲೇ ಶಾಸಕರ ಬರಗಾಲ”: ಅನಂತ್ ನಾಗ್ ‘ಅಭಿನಂದನಾ ನುಡಿ’ ವೇಳೆ ಖಾಲಿ ಹೊಡೆದ ಆಡಳಿತ ಪಕ್ಷದ ಬೆಂಚುಗಳು, ಪ್ರತಿಪಕ್ಷಗಳ ಲೇವಡಿ..!

ಕನ್ನಡ ಚಿತ್ರರಂಗದ ಧ್ರುವತಾರೆ, ಮಾಜಿ ಸಚಿವರೂ ಆಗಿರುವ ಅನಂತ್ ನಾಗ್ ಅವರಂತಹ ಹಿರಿಯ ಚೇತನಕ್ಕೆ ಇಂತಹ ಖಾಲಿ ಸದನದಲ್ಲಿ ಅಭಿನಂದನೆ ಸಲ್ಲಿಸುವುದು ಅವರಿಗೆ ಮಾಡುವ ಅಪಮಾನ. ಆಡಳಿತ ಪಕ್ಷದ ಶಾಸಕರಿಗೆ ಕನಿಷ್ಠ ಗೌರವವೂ ಇಲ್ಲವೇ?

ಬೆಂಗಳೂರು: ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಬುಧವಾರ ವಿಧಾನಸಭೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಅಭಿನಂದನಾ ನುಡಿ’ ನಿರ್ಣಯದ ವೇಳೆ ತೀವ್ರ ರಾಜಕೀಯ ಹೈಡ್ರಾಮಾ ನಡೆದಿದೆ.

ನಿರ್ಣಯ ಮಂಡನೆಯ ಸಂದರ್ಭದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರ ಗೈರುಹಾಜರಿ ಮತ್ತು ಖಾಲಿ ಬೆಂಚುಗಳು ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರು ಪ್ರಸ್ತಾವನೆಯನ್ನು ಮಂಡಿಸಲು ಸಿದ್ಧರಾಗುತ್ತಿದ್ದಂತೆ, ಆಡಳಿತ ಪಕ್ಷದ ಗ್ಯಾಲರಿಯಲ್ಲಿ ಕೇವಲ ಇಬ್ಬರು ಸಚಿವರು ಮತ್ತು ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಉಪಸ್ಥಿತರಿದ್ದರು. ಇದನ್ನು ಗಮನಿಸಿದ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದವು.

ಖಾಲಿ ಸದನದಲ್ಲಿ ಅನಂತ್ ನಾಗ್ ಅವರನ್ನು ಅಭಿನಂದಿಸಬೇಕಾದ ಪರಿಸ್ಥಿತಿ ಬಂದಿರುವುದು ಹಿರಿಯ ನಟನಿಗೆ ಮಾಡಿದ ಅವಮಾನ. ಇದು ಸರಿಯಲ್ಲ” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದರು.

"ಕನ್ನಡ ಚಿತ್ರರಂಗದ ಧ್ರುವತಾರೆ, ಮಾಜಿ ಸಚಿವರೂ ಆಗಿರುವ ಅನಂತ್ ನಾಗ್ ಅವರಂತಹ ಹಿರಿಯ ಚೇತನಕ್ಕೆ ಇಂತಹ ಖಾಲಿ ಸದನದಲ್ಲಿ ಅಭಿನಂದನೆ ಸಲ್ಲಿಸುವುದು ಅವರಿಗೆ ಮಾಡುವ ಅಪಮಾನ. ಆಡಳಿತ ಪಕ್ಷದ ಶಾಸಕರಿಗೆ ಕನಿಷ್ಠ ಗೌರವವೂ ಇಲ್ಲವೇ?" ಎಂದು ಪ್ರಶ್ನಿಸಿದರು.

ಮತ್ತೊಂದೆಡೆ, ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್ ಅವರು ಸರ್ಕಾರದ ವಿರುದ್ಧ ವ್ಯಂಗ್ಯಬಾಣ ಬಿಟ್ಟು, "ನಾವು ಹೊರಗಡೆ ಇರುವ ಬರಗಾಲದ ಬಗ್ಗೆ ಚರ್ಚಿಸಲು ಇಲ್ಲಿ ಸೇರಿದ್ದೇವೆ. ಆದರೆ, ಆಡಳಿತ ಪಕ್ಷದವರನ್ನು ನೋಡಿದರೆ ಸದನದಲ್ಲೇ ಶಾಸಕರ ಬರಗಾಲ ಇರುವಂತಿದೆ ಎಂದು ಲೇವಡಿ ಮಾಡಿದರು.

ಪ್ರತಿಪಕ್ಷಗಳ ಆಕ್ರೋಶದಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾದಾಗ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು.

ಇನ್ನುಳಿದ ಸದಸ್ಯರು ಶೀಘ್ರದಲ್ಲೇ ಸದನಕ್ಕೆ ಬರಲಿದ್ದಾರೆ. ದಯವಿಟ್ಟು ನಿರ್ಣಯವನ್ನು ಮುಂದುವರಿಸಿ, ಸರ್ಕಾರದ ಪರವಾಗಿ ನಾನೇ ಮಾತನಾಡುತ್ತೇನೆ ಎಂದು ವಿನಂತಿಸಿಕೊಂಡರು.

ಬಳಿಕ ಹೆಚ್ಚಿನ ಶಾಸಕರು ಸದನಕ್ಕೆ ಆಗಮಿಸುವವರೆಗೆ ಕಲಾಪವನ್ನು ಮುಂದೂಡುವಂತೆ ಅಶೋಕ್ ಅವರು ಸಭಾಧ್ಯಕ್ಷ ಜಿ.ಎಸ್. ಪಾಟೀಲ್ ಅವರನ್ನು ಒತ್ತಾಯಿಸಿದರು.

ಅನಂತ್ ನಾಗ್ ಅವರು ಕೇವಲ ಚಿತ್ರರಂಗಕ್ಕೆ ಸೀಮಿತರಾದವರಲ್ಲ, ಬದಲಿಗೆ ಕರ್ನಾಟಕ ರಾಜಕಾರಣದಲ್ಲೂ ಸಕ್ರಿಯರಾಗಿದ್ದವರು. ಅವರು ಈ ಹಿಂದೆ ಕರ್ನಾಟಕದ ಉಭಯ ಸದನಗಳ (ವಿಧಾನಸಭೆ ಮತ್ತು ವಿಧಾನಪರಿಷತ್) ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, 1990 ರ ದಶಕದ ಕೊನೆಯಲ್ಲಿ ಜೆ.ಹೆಚ್. ಪಟೇಲ್ ಅವರ ಸಂಪುಟದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು ಎಂಬುದು ಗಮನಾರ್ಹ.

ಆರಂಭಿಕ ರಾಜಕೀಯ ವಾಕ್ಸಮರ ಮತ್ತು ಆಡಳಿತ ಪಕ್ಷದ ಗೈರುಹಾಜರಿಯ ವಿವಾದದ ನಡುವೆಯೂ, ಅಂತಿಮವಾಗಿ ವಿಧಾನಸಭೆಯು ಹಿರಿಯ ನಟ ಅನಂತ್ ನಾಗ್ ಅವರಿಗೆ ರಾಜ್ಯದ ಪರವಾಗಿ ಅಧಿಕೃತ ಅಭಿನಂದನೆಗಳನ್ನು ಸಲ್ಲಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗ್ರೇಟರ್ ನೋಯ್ಡಾದಲ್ಲಿ ಪ್ರವಾಸಿ ಬಸ್‌ಗೆ ಬೆಂಕಿ: 9ಮಂದಿ ಸಜೀವ ದಹನ; ಜಿಗಿದು ಪ್ರಾಣ ಉಳಿಸಿಕೊಂಡ ಜನ

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿಯಾಗುತ್ತಿದ್ದಂತೆ Xi Jinping ಶಾಂತಿ ಮಂತ್ರ; US-China ನಡುವೆ ಶುರುವಾಯ್ತಾ ಹೊಸ ಸ್ನೇಹ ಪರ್ವ?

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಆತಂಕ; ನಾವಿಕರು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಲಿ: ಕ್ಷಿಪಣಿ ದಾಳಿ ಬೆನ್ನಲ್ಲೇ ವಿಶ್ವಕ್ಕೆ ಭಾರತ ಖಡಕ್ ಸಂದೇಶ..!

ಬರಗಾಲ ಕುರಿತು ಮುಗಿಯದ ಚರ್ಚೆ: ರಾಜ್ಯ ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

ಪ್ರಧಾನಿ ಮೋದಿಗೆ ಸಿಎಂ ಡಿಕೆ ಶಿವಕುಮಾರ್ ಪತ್ರ: ಬರ ನಿರ್ವಹಣೆಗಾಗಿ ಶೇ. 50ರಷ್ಟು ಮಧ್ಯಂತರ ಪರಿಹಾರ ಬಿಡುಗಡೆಗೆ ಒತ್ತಾಯ!