ಹರ್ಷಬೀರ್ ಸಂಘ 
ರಾಜ್ಯ

ಕರ್ನಾಟಕದ ಬ್ರಿಟಿಷ್ ಉಪ ಹೈಕಮಿಷನರ್ ಆಗಿ ಹರ್ಷಬೀರ್ ಸಂಘ ನೇಮಕ

ಕರ್ನಾಟಕದಲ್ಲಿ ಯುಕೆಯೊಂದಿಗಿನ ಎಲ್ಲಾ ರೀತಿಯ ಸಂಪರ್ಕ ಮತ್ತು ಸಹಕಾರದ ಜವಾಬ್ದಾರಿ ಸಂಘ ಅವರದ್ದಾಗಿರಲಿದೆ.

ಬೆಂಗಳೂರು: ಕರ್ನಾಟಕದ ಬ್ರಿಟಿಷ್ ಉಪ ಹೈಕಮಿಷನರ್ ಆಗಿ ಹರ್ಷಬೀರ್ ಸಂಘ ಅವರನ್ನು ನೇಮಕ ಮಾಡಿರುವುದಾಗಿ ಯುನೈಟೆಡ್ ಕಿಂಗ್‌ಡಮ್ (UK) ಅಧಿಕೃತವಾಗಿ ಘೋಷಿಸಿದೆ.

ಕರ್ನಾಟಕದಲ್ಲಿ ಯುಕೆಯೊಂದಿಗಿನ ಎಲ್ಲಾ ರೀತಿಯ ಸಂಪರ್ಕ ಮತ್ತು ಸಹಕಾರದ ಜವಾಬ್ದಾರಿ ಸಂಘ ಅವರದ್ದಾಗಿರಲಿದೆ. ರಾಜ್ಯದಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಗಳನ್ನು ಉತ್ತೇಜಿಸುವುದು, ವಿಜ್ಞಾನ, ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿನ ಸಹಕಾರವನ್ನು ಬಲಪಡಿಸುವುದು ಮತ್ತು ಹವಾಮಾನ ಬದಲಾವಣೆಯನ್ನು ಎದುರಿಸಲು ಪಾಲುದಾರರೊಂದಿಗೆ ಕಾರ್ಯನಿರ್ವಹಿಸುವುದು ಅವರ ಜವಾಬ್ದಾರಿಗಳಲ್ಲಿ ಸೇರಿವೆ.

ಇದಲ್ಲದೆ, ದಕ್ಷಿಣ ಏಷ್ಯಾದಲ್ಲಿ ಹೂಡಿಕೆಗಾಗಿ ಯುಕೆಯ ಉಪ ವ್ಯಾಪಾರ ಆಯುಕ್ತರಾಗಿಯೂ ಅವರು ಕಾರ್ಯನಿರ್ವಹಿಸಲಿದ್ದಾರೆ. ಭಾರತ ಮತ್ತು ದಕ್ಷಿಣ ಏಷ್ಯಾದ ಇತರ ದೇಶಗಳಿಂದ ವಿದೇಶಿ ನೇರ ಹೂಡಿಕೆಗೆ (FDI) ಯುಕೆಯನ್ನು ಆದ್ಯತೆಯ ತಾಣವನ್ನಾಗಿ ಮತ್ತಷ್ಟು ಬಲಪಡಿಸುವುದು ಮತ್ತು ಉತ್ತೇಜಿಸುವುದು ಅವರ ಪ್ರಮುಖ ಹೊಣೆಗಾರಿಕೆಯಾಗಿರಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಭಾರತದಲ್ಲಿ ಈ ಹುದ್ದೆಯನ್ನು ವಹಿಸಿಕೊಳ್ಳುವ ಮುನ್ನ ಸಂಘ ಅವರು ಯುಕೆ ಬಾಹ್ಯಾಕಾಶ ಸಂಸ್ಥೆಯಲ್ಲಿ ಉಪಗ್ರಹ ಸಂವಹನ ಮತ್ತು PNT (ಸ್ಥಾನ ನಿರ್ಣಯ, ನ್ಯಾವಿಗೇಶನ್ ಮತ್ತು ಸಮಯ) ವಿಭಾಗದ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ಕರ್ನಾಟಕವು ಭಾರತದ ಅತ್ಯಂತ ಕ್ರಿಯಾಶೀಲ ರಾಜ್ಯಗಳಲ್ಲಿ ಒಂದಾಗಿದ್ದು, ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಶಿಕ್ಷಣ ಮತ್ತು ಹವಾಮಾನ ಬದಲಾವಣೆ ವಿರುದ್ಧದ ಕ್ರಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಯುಕೆಯ ಪ್ರಮುಖ ಪಾಲುದಾರವಾಗಿದೆ ಎಂದು ಸಂಘ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾಪ: ಡೊನಾಲ್ಡ್ ಟ್ರಂಪ್ ತಿರಸ್ಕೃತ

Nepal flood: ಇನ್ನೂ ಪತ್ತೆಯಾಗದ ತಮಿಳು ನಾಡಿನ 85 ಯಾತ್ರಿಕರು; ಕುಟುಂಬಸ್ಥರ ಅರಣ್ಯರೋಧನ

ನಂದಿನಿ ಹಾಲಿನ ದರ ಪ್ರತಿ ಲೀ.ಗೆ 10ರೂ. ಏರಿಕೆ? ಇಂದು ಸಿಎಂ ಮಹತ್ವದ ಸಭೆ, ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ

'ಅಮಾಯಕ ಜೀವ ಬಲಿಯಾಗುತ್ತಿವೆ, ಇದು ಸಂಪೂರ್ಣ ಅಸಮರ್ಥನೀಯ’; ಹಡಗು, ನಾವಿಕರ ಮೇಲಿನ ದಾಳಿ ಖಂಡಿಸಿದ EAM Jaishankar

'ಲಂಚ'ದ ಹೇಳಿಕೆ: ಅಬಕಾರಿ ಸಚಿವ ಶಿವಲಿಂಗೇಗೌಡರ ವಿರುದ್ಧ ದೂರು ದಾಖಲು!