ನಟ ದರ್ಶನ್  
ರಾಜ್ಯ

ಮಾಫಿ ಸಾಕ್ಷಿ ತಡೆಯಲು ದರ್ಶನ್ ಹಲವು ಕಸರತ್ತು: ಪ್ರದೋಷ್ ಹೇಳಿಕೆ ದಾಖಲು ಮುಂದೂಡಿಕೆ ಕೋರಿ ಮತ್ತೊಂದು ಅರ್ಜಿ!

ಪ್ರದೋಷ್ ಮಾಫಿ ಸಾಕ್ಷಿಯಾಲು ಒಪ್ಪಿಗೆ ನೀಡಿರುವ 59ನೇ ಸಿಸಿಹೆಚ್ ಕೋರ್ಟ್, ಇದೀಗ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ಸೆಪ್ಟೆಂಬರ್ 28ರಂದು ದಿನಾಂಕ ನಿಗದಿ ಮಾಡಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರು ತಮ್ಮ ವಿರುದ್ಧವೇ ತಿರುಗಿಬಿದ್ದು, ಮಾಫಿ ಸಾಕ್ಷಿ ಹೇಳಲು ನಿರ್ಧರಿಸಿರುವ ಪ್ರದೋಷ್ ರಾವ್ ನನ್ನು ತಡೆಯಲು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಒಂದಾದ ಮೇಲೊಂದರಂತೆ ಪ್ರಯತ್ನ ನಡೆಸುತ್ತಿದ್ದು, ಇದೀಗ ಮಾಫಿ ಸಾಕ್ಷಿ ಹೇಳಿಕೆ ದಾಖಲು ಒಂದು ವಾರ ಮುಂದೂಡುವಂತೆ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ.

ಪ್ರದೋಷ್ ಮಾಫಿ ಸಾಕ್ಷಿಯಾಲು ಒಪ್ಪಿಗೆ ನೀಡಿರುವ 59ನೇ ಸಿಸಿಹೆಚ್ ಕೋರ್ಟ್, ಇದೀಗ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ಸೆಪ್ಟೆಂಬರ್ 28ರಂದು ದಿನಾಂಕ ನಿಗದಿ ಮಾಡಿದೆ. ಇದರಿಂದ ತೀವ್ರ ಆತಂಕಕ್ಕೆ ಒಳಗಾದ ದರ್ಶನ್, ಮಾಫಿ ಸಾಕ್ಷಿ ಅದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೋರಿದ್ದೇವೆ. ಹೀಗಾಗಿ ಮಾಫಿ ಸಾಕ್ಷಿ ಹೇಳಿಕೆ ದಾಖಲು ದಿನಾಂಕವನ್ನು ಒಂದು ವಾರ ಮುಂದೂಡಿಕೆ ಮಾಡುವಂತೆ ಕೋರಿ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

ಇದಕ್ಕೂ ಮುನ್ನ ಮಾಫಿ ಸಾಕ್ಷಿ ಹೇಳಿಕೆ ವಿಚಾರವಾಗಿ ಸೆಷನ್ಸ್ ಕೋರ್ಟ್‌ನ ಆದೇಶ ಪ್ರಶ್ನೆ ಮಾಡಿ, ದರ್ಶನ್ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದರು. ವಾದ, ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಮಾಫಿ ಸಾಕ್ಷಿ ಹೇಳಿಕೆ ಪ್ರಶ್ನೆ ಮಾಡುವಂತಿಲ್ಲ, ಬದಲಾಗಿ ಆ ಪ್ರಕ್ರಿಯೆಯಲ್ಲಿ ಲೋಪ ಕಂಡು ಬಂದ್ರೆ ಮಾತ್ರ ಪ್ರಶ್ನೆ ಮಾಡಬಹುದು ಎಂದು ಹೇಳಿ ಅರ್ಜಿ ವಜಾ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್‌ರನ್ನು ತಕ್ಷಣ ವಜಾಗೊಳಿಸಿ, ಕ್ರಿಮಿನಲ್ ಕೇಸ್ ದಾಖಲಿಸಿ: ರಾಷ್ಟ್ರಪತಿಗೆ ಸಿದ್ದರಾಮಯ್ಯ ಆಗ್ರಹ

ವಿನೋದ್‌ ಕಾಂಬ್ಳಿ ಈಗ ಏಕಾಂಗಿ; ವೃದ್ದಾಶ್ರಮದಿಂದಲೇ ವಿಡಿಯೋ ಹಂಚಿಕೊಂಡ ಮಾಜಿ ಕ್ರಿಕೆಟಿಗ; ಅಭಿಮಾನಿಗಳಿಗೆ ಆತಂಕ!

ಬ್ಯಾಂಕ್ ಮುಷ್ಕರದ ನಡುವೆ ಗ್ರಾಹಕರಿಗೆ ಬಿಗ್ ರಿಲೀಫ್; ಎಟಿಎಂ ವಹಿವಾಟು ಶುಲ್ಕ ಸಂಪೂರ್ಣ ರದ್ದು, ಎಷ್ಟು ಬಾರಿಯಾದರೂ ಉಚಿತವಾಗಿ ಹಣ ಡ್ರಾ ಮಾಡಿ

ವಿರಾಜಪೇಟೆ ಗಣೇಶ ವಿಸರ್ಜನೆ ವೇಳೆ ಕರೆಂಟ್ ಶಾಕ್: ಐವರಿಗೆ ಗಾಯ,ಇಬ್ಬರ ಸ್ಥಿತಿ ಗಂಭೀರ; ತಪ್ಪಿದ ದೊಡ್ಡ ಅನಾಹುತ!

'ಪದ್ಮಭೂಷಣ ಸಣ್ಣ ವಿಷಯ, ಅವರನ್ನು ಪ್ರಧಾನಿಯನ್ನಾಗಿ ಮಾಡಿ': ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ ಹೇಳಿಕೆಗೆ ಕಾಂಗ್ರೆಸ್ ಲೇವಡಿ