ಕೋಡಿಹಳ್ಳಿ ಚಂದ್ರಶೇಖರ್ 
ರಾಜ್ಯ

2013ರ ಪ್ರಕರಣಕ್ಕೆ ಮರು ಜೀವ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬಂಧನ

ಈ ಪ್ರಕರಣಕ್ಕೆ ಸಂಬಂಧಿಸಿ ವಾರೆಂಟ್ ಮೇಲೆ ಹುಬ್ಬಳ್ಳಿ ರೈಲ್ವೆ ಪೊಲೀಸರು ಶಿರಸಿ ಪೊಲೀಸರ ಸಹಕಾರ ಪಡೆದು ಕೋಡಿಹಳ್ಳಿ ಚಂದ್ರಶೇಖರ್​ ಅವರನ್ನು ಇಂದು ಬಂಧಿಸಿದ್ದಾರೆ.

ಹುಬ್ಬಳ್ಳಿ: 2013ರಲ್ಲಿ ರೈಲು ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಹುಬ್ಬಳ್ಳಿ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಅವರನ್ನು ಸೋಮವಾರ ಬೆಳ್ಳಂಬೆಳಗ್ಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ಶಿರಸಿಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಲು ಹಾಗೂ ತದ ನಂತರ 11.30ಕ್ಕೆ ದಾಸನಕೊಪ್ಪದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸಲು ರೈತ ಸಂಘ ಉದ್ದೇಶಿಸಲಾಗಿತ್ತು.

ಅದಕ್ಕಾಗಿ ಕೋಡಿಹಳ್ಳಿ ಚಂದ್ರಶೇಖರ್ ಶಿರಸಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ 2013ರಲ್ಲಿ ಸುಮಾರು ಆರು ಗಂಟೆ ಎಲ್ಲಾ ರೈಲುಗಳನ್ನು ತಡೆದು ರೈತರು ಹೋರಾಟ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ವಾರೆಂಟ್ ಮೇಲೆ ಹುಬ್ಬಳ್ಳಿ ರೈಲ್ವೆ ಪೊಲೀಸರು ಶಿರಸಿ ಪೊಲೀಸರ ಸಹಕಾರ ಪಡೆದು ಕೋಡಿಹಳ್ಳಿ ಚಂದ್ರಶೇಖರ್​ ಅವರನ್ನು ಇಂದು ಬಂಧಿಸಿದ್ದಾರೆ.

ಇನ್ನು ರೈತ ಹೋರಾಟಗಾರ ಕೋಡಿಹಳ್ಳಿ ಅವರನ್ನು ನ್ಯಾಯಾಲಯದ ವಾರಂಟ್​ ಮೇಲೆ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧನದ ಬಳಿಕ ಕೋಡಿಹಳ್ಳಿ ಅವರನ್ನು ಹುಬ್ಬಳ್ಳಿಗೆ ಕರೆದೊಯ್ಯಲಾಗಿದ್ದು ಜೆಎಂಎಫ್​ಸಿ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ನಂತರ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೂ. 2,000ಕ್ಕಿಂತ ಹೆಚ್ಚಿನ UPI ವಹಿವಾಟಿಗೆ ಶುಲ್ಕ: ತಡೆ ನೀಡಲು ಸುಪ್ರೀಂಕೋರ್ಟ್ ನಕಾರ, ಕೇಂದ್ರ ಸರ್ಕಾರಕ್ಕೆ ನೋಟಿಸ್..!

ಲಾಭದಲ್ಲಿ 11 ಹಾಲು ಒಕ್ಕೂಟಗಳು, ನಷ್ಟದಲ್ಲಿ ಚಿಕ್ಕಬಳ್ಳಾಪುರ ದಾಖಲೆ: ಸಚಿವ ಸಂಪುಟದಲ್ಲಿ ತೀರ್ಮಾನಿಸಿದ ನಂತರ ದರ ಏರಿಕೆ ನಿರ್ಧಾರ; ಸಿಎಂ

ಬರ ನೆರವು: ಸರ್ವಪಕ್ಷ ನಿಯೋಗದ ಜತೆ ದೆಹಲಿಗೆ ಬರದಿದ್ದರೆ BJP ಕಪಟ ನಾಟಕ ಸಾಬೀತು; ಸಿಎಂ ಡಿ ಕೆ ಶಿವಕುಮಾರ್

'ಡಕೌಟ್‌ನಿಂದ ನಾಲ್ಕು ಸೆಂಚುರಿವರೆಗೆ, ಇದು ವಿರಾಟ್ ಕೊಹ್ಲಿ ಹೊಸ ಅವತಾರ': ನೀವೆಲ್ಲ ಕಲಿಯಬೇಕಿರುವುದು ಸಾಕಷ್ಟಿದೆ; ಮೊಹಮ್ಮದ್ ಕೈಫ್

ಚಲಿಸುವ ಬಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ನಿರ್ಭಯಾ ಪ್ರಕರಣ ಕಣ್ಣಮುಂದೆ ಬರುತ್ತಿದೆ: ಸ್ವಯಂಪ್ರೇರಿತವಾಗಿ ಕೇಸ್ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್..!