ದರ್ಶನ್-ಪವಿತ್ರಾ ಗೌಡ 
ರಾಜ್ಯ

'ಪವಿತ್ರಾ ನನ್ನ ಹೆಂಡತಿ, ಆಕೆಗೆ ಅಸಹ್ಯ ಆಗುವಂತ ಮೆಸೇಜ್‌ ಮಾಡ್ತೀಯಾ?'; ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದ ದರ್ಶನ್‌: ನಟನ ಕ್ರೂರತ್ವ ಬಿಚ್ಚಿಟ್ಟ ಪ್ರದೋಷ್‌!

ದರ್ಶನ್‌ ಹೇಗೆ ಪರಿಚಯವಾದರೂ ಎಂಬ ಪ್ರಾಥಮಿಕ ಮಾಹಿತಿಯಿಂದ ಹಿಡಿದು ರೇಣುಕಾಸ್ವಾಮಿ ಹತ್ಯೆಗೈದು, ಆತನ ಮೃತ ದೇಹವನ್ನು ಹೇಗೆ ಕಾಮಾಕ್ಷಿಪಾಳ್ಯದ ಚರಂಡಿ ಬಳಿ ಬಿಸಾಡಲಾಯಿತು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ (14ನೇ ಆರೋಪಿ) ಪ್ರದೋಷ್‌ ರಾವ್‌ ಅವರ ಮಾಫಿ ಸಾಕ್ಷಿ ಹೇಳಿಕೆಯನ್ನು ಸೋಮವಾರ‌ (ಸೆ.28) 59ನೇ ಸೆಷನ್ಸ್‌ ಕೋರ್ಟ್‌ನಲ್ಲಿ ಇನ್‌ ಕ್ಯಾಮೆರಾ ಪ್ರಕ್ರಿಯೆ ಮೂಲಕ ದಾಖಲಿಸಿಕೊಳ್ಳಲಾಗಿದೆ.

ಈ ಮೂಲಕ ಸಹ ಆರೋಪಿಯಾಗಿದ್ದ ಪ್ರದೂಷ್‌ ಹೇಳಿಕೆ ವಿಡಿಯೋ ಕಾನ್ಫರೆನ್ಸ್‌ನಲ್ಲಿದ್ದ ದರ್ಶನ್‌ ಹಾಗೂ ಇತರ ಆರೋಪಿಗಳಿಗೆ ನೇರವಾಗಿ ಆತಂಕಕ್ಕೀಡು ಮಾಡಿತು. ಮಾಫಿ ಸಾಕ್ಷಿ ಹೇಳಿಕೆಯಲ್ಲಿ ಪ್ರದೋಷ್ ‌ʼಡಿʼಗ್ಯಾಂಗ್‌ನ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.

ಸುಮಾರು 4 ಗಂಟೆಗಳ ಕಾಲ ಪ್ರದೂಷ್‌ ರಾವ್‌ ಮಾಫಿ ಸಾಕ್ಷಿ ಹೇಳಿಕೆ ನೀಡಿದ್ದು ಸಂಪೂರ್ಣವಾಗಿ ವಿಡಿಯೋ ರೆಕಾರ್ಡ್‌ ಮಾಡಿಕೊಳ್ಳಲಾಯಿತು. ದರ್ಶನ್‌ ಹೇಗೆ ಪರಿಚಯವಾದರೂ ಎಂಬ ಪ್ರಾಥಮಿಕ ಮಾಹಿತಿಯಿಂದ ಹಿಡಿದು ರೇಣುಕಾಸ್ವಾಮಿ ಹತ್ಯೆಗೈದು, ಆತನ ಮೃತ ದೇಹವನ್ನು ಹೇಗೆ ಕಾಮಾಕ್ಷಿಪಾಳ್ಯದ ಚರಂಡಿ ಬಳಿ ಬಿಸಾಡಲಾಯಿತು ಎಂಬ ಬಗ್ಗೆ, ಮೊದಲ ಆರೋಪಿ ಪವಿತ್ರಾಗೌಡ, 2ನೇ ಆರೋಪಿ ದರ್ಶನ್‌, ಪವಿತ್ರಾಗೌಡ ಸಹಾಯಕ ಪವನ್‌ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ರೇಣುಕಾಸ್ವಾಮಿ ನಮ್ಮ ಕೈಗೆ ಸಿಕ್ಕಿದ್ದು ಹೇಗೆ? ಆತನನ್ನು ಕೊಂದಿದ್ದು ಹೇಗೆ? ದರ್ಶನ್‌ಗೆ ಪವಿತ್ರಾ ಗೌಡ ಏನಾಗಬೇಕು ಎಂಬುವ ಎಲ್ಲ ಮಾಹಿತಿಯನ್ನು ಪದರ ಪದರವಾಗಿ ಬಿಚ್ಚಿಟ್ಟಿದ್ದಾರೆ. ಪವಿತ್ರಾ ಗೌಡಗೆ ಮೆಸೇಜ್‌ ಮಾಡಿದ್ದ ರೇಣುಕಾಸ್ವಾಮಿಯನ್ನು ಸುಳ್ಳು ಹೇಳಿ ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ಮೊದಲು ವಾರ್ನಿಂಗ್‌ ಕೊಟ್ಟು, ನಾಲ್ಕು ಬಾರಿಸಿ ಕಳಿಸುವ ಇರಾದೆ ಇತ್ತು ಎಂದು ಹೇಳಿದ್ದಾರೆ.

ದರ್ಶನ್‌ ಶೆಡ್‌ ಬಳಿ ಬರುತ್ತಿದ್ದಂತೆಯೇ ಅವನನ್ನು ನೋಡಿ ಕೆಂಡಾಮಂಡಲವಾದರು. ಸರಿಯಾಗಿ ಬಾರಿಸಿದರು, ಕೆಟ್ಟ ಕೆಟ್ಟ ಪದಗಳಿಂದ ಬೈದರು. ತದನಂತರ ಪವಿತ್ರಾರನ್ನು ತೋರಿಸಿ ಇವಳು ಯಾರು ಗೊತ್ತಾ? ಎಂದು ರೇಣುಕಾಸ್ವಾಮಿಯನ್ನು ಪ್ರಶ್ನಿಸಿದರು.

ರೇಣುಕಾಸ್ವಾಮಿ ಕ್ಷಮಿಸಿ ಸರ್‌ ಎಂದು ಕೈಮುಗಿದು ಕೇಳಿಕೊಂಡ. ಆಗ ದರ್ಶನ್‌ ಮತ್ತೊಮ್ಮೆ ಏರುಧ್ವನಿಯಲ್ಲಿ ಇವಳು ಯಾರು ಗೊತ್ತಾ? ಎಂದು ಪ್ರಶ್ನಿಸಿದರು. ರೇಣುಕಾಸ್ವಾಮಿ ಅಳುತ್ತಿದ್ದ. ಪವಿತ್ರಾರನ್ನು ಹತ್ತಿರ ಎಳೆದು ಅವರ ಹೆಗಲ ಮೇಲೆ ಕೈ ಹಾಕಿ ಇವಳು ನನ್ನ ಹೆಂಡತಿ. ನನ್ನ ಹೆಂಡತಿಗೆ ಕೆಟ್ಟ ಮೆಸೇಜ್‌ ಮಾಡುವಷ್ಟು ಧೈರ್ಯನಾ? ಎಂದು ಗದರಿ ಆತನ ಮರ್ಮಾಂಗಕ್ಕೆ ಜೋರಾಗಿ ಒದ್ದರು ಎಂದು ಪ್ರದೋಷ್ ಹೇಳಿಕೊಂಡಿದ್ದಾರೆ.

ದರ್ಶನ್, ಪಟ್ಟಣಗೆರೆ ಶೆಡ್​​​ನಲ್ಲಿ ಹಲವಾರು ಬಾರಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ವಿಚಾರ, ಪವಿತ್ರಾ ಗೌಡ ಸಹ ಚಪ್ಪಲಿಯಲ್ಲಿ ಹೊಡೆದಿರುವುದು ಹಾಗೂ ರೇಣುಕಾಸ್ವಮಿ ಅಗಲಾಚಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿಚಾರ ಸೇರಿದಂತೆ, ರೇಣುಕಾ ಸ್ವಾಮಿಯ ಬಟ್ಟೆ ಬಿಚ್ಚಿಸಿ ನಗ್ನಗೊಳಿಸಿ, ಅವನ ಮೇಲೆ ಉಗುಳಿಸಿದರು ಎಂದು ಅಂದು ನಡೆದ ಘಟನೆಗಳ ಸಂಪೂರ್ಣವಾದ ವಿಷಯಗಳನ್ನು ಪ್ರದೋಷ್‌ ನ್ಯಾಯಾಲಯದ ಮುಂದೆ ಹೇಳಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನಥಿಂಗ್ ನೈಸ್​': ಯೋಜನೆ ಹೆಸರಲ್ಲಿ ಹಕ್ಕ-ಬುಕ್ಕರ ಆಟ; AK ಆ್ಯಂಡ್​ DK ಅವರದ್ದು 2ಜಿ ಸ್ಕ್ಯಾಮ್ ಗಿಂತ ದೊಡ್ಡ​ ಹಗರಣ- HD ಕುಮಾರಸ್ವಾಮಿ

ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ ರದ್ದು: ತೀರ್ಪು ಕೇಳಿ ಕಣ್ಣೀರಿಟ್ಟ ಡ್ರೋನ್ ಪ್ರತಾಪ್! ವಿಡಿಯೋದಲ್ಲಿ ಹೇಳಿಕೊಂಡಿದ್ದೇನು?

ಮಾಫಿ ಸಾಕ್ಷಿ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ D Boss: ದರ್ಶನ್-ವಿಜಯಲಕ್ಷ್ಮಿಯಿಂದ ಮೂರು ಅರ್ಜಿ ಸಲ್ಲಿಕೆ!

ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ದಾಖಲೆ: ಟ್ರ್ಯಾಪ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ನೀರೂ ಧಾಂಡಾ

NSA ಅಡಿ ಸಂಭಲ್ ಹಿಂಸಾಚಾರದ ಆರೋಪಿಯ ಬಂಧನ ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ದಂಡ!