ಖುಷಿ

ನಿಮ್ಮ ಭಾನುವಾರದ ಓದಿನ ‘ಖುಷಿ’ಯನ್ನು ನಾವೇ ಬುಕ್ ಮಾಡಿದ್ದೇವೆ!

ಇಷ್ಟು ದಿನ ಬರುತ್ತಿದ್ದ ಆರು ಪುಟಗಳ’ಸಾಪ್ತಾಹಿಕ ಪ್ರಭ’ ಇನ್ನು ಮುಂದೆ ಮೂವತ್ತೆರಡು ಪುಟಗಳಲ್ಲಿ ಮ್ಯಾಗಝಿನ್ ರೂಪದಲ್ಲಿ ಬರಲಿದೆ...

ಇಷ್ಟು ದಿನ ಕಾಪಾಡಿಕೊಂಡ ರಹಸ್ಯವನ್ನು ಬಿಚ್ಚಿಡುವ ಕಾಲ ಹತ್ತಿರ ಬರುತ್ತಿದೆ.ಕಳೆದ ಓಂದು ತಿಂಗಳಿನಿಂದ ನಾವು ‘ಕನ್ನಡ ಪ್ರಭ’ದ ಮುಖಪುಟದಲ್ಲಿ ಜಾಹೀರಾತನ್ನು ನೀಡುತ್ತಲೇ ಇದ್ದೆವು. ಅದರ ಬಗ್ಗೆ ಓದುಗರಲ್ಲಿ ಒಂದು ವಿಚಿತ್ರ ಕುತೂಹಲ ಮೂಡುತ್ತಲೇ ಇತ್ತು.

ಪತ್ರಿಕೆಯ ಪುಟಗಳ ಸಂಖ್ಯೆ ಜಾಸ್ತಿ ಮಾಡ್ತೀರಾ, ಪತ್ರಿಕೆಯ ವಿನ್ಯಾಸ ಬದಲಾಯಿಸ್ತೀರಾ, ಹೆಚ್ಚು ಕಲರ್ ಪುಟಗಳನ್ನು ಕೊಡ್ತೀರಾ… ಹೀಗೆ ಹತ್ತಾರು ಪ್ರಶ್ನೆಗಳನ್ನು ಓದುಗರು ಕೇಳುತ್ತಲೇ ಇದ್ದರು. ನಾವು ಅವರ ಕುತೂಹಲವನ್ನು ಕಾದಿಡಲು ಹಲವಾರು ಕಾರಣಗಳನ್ನು ಕೊಡುತ್ತಲೇ ಬಂದೆವು. ಈಗ ಅವನ್ನು ತೆರೆದಿಡುವ ಕಾಲ ಸನಿಹವಾಗುತ್ತಿದೆ.

ಇನ್ನು ಮುಂದೆ ನಿಮ್ಮ ಭಾನುವಾರ ಡಿಫೆರೆಂಟ್ ಆಗಿರುತ್ತದೆ.ನಮ್ಮ ‘ಕನ್ನಡ ಪ್ರಭ’ ಪತ್ರಿಕೆಯನ್ನು ಖರೀದಿಸಿದರೆ ನಿಮಗೆ ಉಚಿತವಾಗಿ ಒಂದು ಮ್ಯಾಗಝಿನ್ ಸಹ ಸಿಗಲಿದೆ.

ಇದು ಕನ್ನಡ ಪತ್ರಿಕೋದ್ಯಮದಲ್ಲಿಯೇ ಹೊಸ ಪ್ರಯೋಗ !

ಇಷ್ಟು ದಿನ ಬರುತ್ತಿದ್ದ ಆರು ಪುಟಗಳ’ಸಾಪ್ತಾಹಿಕ ಪ್ರಭ’ ಇನ್ನು ಮುಂದೆ ಮೂವತ್ತೆರಡು ಪುಟಗಳಲ್ಲಿ ಮ್ಯಾಗಝಿನ್ ರೂಪದಲ್ಲಿ ಬರಲಿದೆ.

ಇಂದೇ ಬುಕ್ ಮಾಡಿ ಎಂದು ನಿಮಗೆ ಹೇಳುವುದಿಲ್ಲ. ಯಾಕೆಂದರೆ ನಿಮ್ಮ ಭಾನುವಾರದ ಓದಿನ ‘ಖುಷಿ’ಯನ್ನು ನಾವೇ ಬುಕ್ ಮಾಡಿದ್ದೇವೆ. ಅಂದ ಹಾಗೆ ಇನ್ನು ಮುಂದೆ ಸಾಪ್ತಾಹಿಕ ಬುಕ್ ರೂಪದಲ್ಲಿ ಬರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ