ಉತ್ತಾಧಿಕಾರಿ
- ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿ ಮಠ
'ಅಧಿಕಾರ'ವೆಂಬುದು ವಿಷವೇ?
ರಾಜಕಾರಣಿಗಳ ಪಾಲಿಗೆ ಅದು ಅಮೃತ!
- ಕೆ.ಎಂ. ಲಿಂಗರಾಜು, ನಂಜನಗೂಡು
ದೇವರನ್ನು ನಂಬಿದರೆ ಆಸ್ತಿಕ, ಬುದ್ಧಿಜೀವಿಗಳನ್ನು ನಂಬಿದರೆ?
ಬರೀ ಪುಸ್ತಕ!
- ಪೇಂಟರ್ ಪಾಪು, ಸಂತೇಮರಹಳ್ಳಿ
ಯಾರೋ ಮಾಡಿದ ತಪ್ಪಿಗೆ ಯಾರೋ ಶಿಕ್ಷೆ ಅನುಭವಿಸುತ್ತಾರಲ್ಲ, ಯಾಕೆ ಸಾರ್?
ಅದು ದೇವರು ಮಾಡಿದ ಲೆಡ್ಜರ್ ಮಿಸ್ಟೇಕ್!
- ಬರ್ಕ್‌ಲಿ ರಮೇಶ್ ಕಿರಂಗದೂರ್, ಮಂಡ್ಯ
ಮಾರಿ ಕಣ್ಣು ಹೋರಿ ಮ್ಯಾಗೆ, ನಿಮ್ಮ ಕಣ್ಣು ಯಾರ ಮ್ಯಾಗೆ?
ಪೋರಿ ಮ್ಯಾಗೆ ಅಂತ ಉತ್ತರಿಸೋದು ಕಷ್ಟ!
- ಹೇಮಂತ್‌ಕುಮಾರ್, ಬೆಂಗಳೂರು
ದೇವಕನ್ನಿಕೆಗೂ, ಕಾವ್ಯಕನ್ನಿಕೆಗೂ ವ್ಯತ್ಯಾಸವೇನು?
- ದೇವಕನ್ನಿಕೆ ಭ್ರಮೆ, ಕಾವ್ಯಕನ್ನಿಕೆ ವಾಸ್ತವ!
- ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
ಸೂಜಿಗೂ, ಗುಂಡು ಸೂಜಿಗೂ ವ್ಯತ್ಯಾಸವೇನು?
ಒಂದು ಸ್ತ್ರೀಲಿಂಗ ಮತ್ತೊಂದು ಪುಲ್ಲಿಂಗ!
- ರವೀಂದ್ರ ಶಿ. ಯಡಹಳ್ಳಿ, ಬೀಳಗಿ
ಗೋಲ್ ಕೀಪರ್‌ಗೂ ಗೇಟ್ ಕೀಪರ್‌ಗೂ ವ್ಯತ್ಯಾಸವೇನು?
ಗೋಲ್ ಕೀಪರ್ ಹಿಂದೆ ನಿಂತಿರ್ತಾನೆ, ಗೇಟ್ ಕೀಪರ್ ಎದುರಿಗೇ ನಿಂತಿರ್ತಾನೆ!
- ಪಿ.ಜೆ. ರಾಘವೇಂದ್ರ ಮೈಸೂರು
ಬಿದರಿ, ಎಚ್‌ಡಿಕೆ ಒಬ್ಬರಿಗೊಬ್ಬರು ಗುಂಡಿಕ್ಕಿಕೊಂಡರಾ?
ಅದೂ ನಕಲಿ ಎನ್‌ಕೌಂಟರ್!
- ಸ್ವಾಮಿ ನಿರ್ಮಲಾ, ಉಡಿಗಾಲ
ಕಾಣಿಕೆ ಎಂದರೆ ಉಚಿತ, ಆದರೂ ಉಚಿತ ಕಾಣಿಕೆ ಎನ್ನುವುದೇಕೆ?
ಉಚಿತವಾದರೂ ಕೆಲವೊಮ್ಮೆ ಭಾರಿ ಬೆಲೆ ತೆರಬೇಕಾಗುತ್ತದೆ!
- ಬಿ.ಎಂ. ಪರಶಿವಮೂರ್ತಿ, ಬೆಂಗಳೂರು.
ಆದರ್ಶಪತಿ ಅಂತ ಕರೆಸಿಕೊಳ್ಳೋದಕ್ಕೆ ಏನು ಮಾಡಬೇಕು?
ಬೇರೆಯವರ ಸತಿಯರ ಹತ್ತಿರ ಸರ್ಟಿಫಿಕೇಟ್ ತರಬೇಕು!
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.