ಪೂರ್ಣಚಂದ್ರ ತೇಜಸ್ವಿ ಕನ್ನಡದ ಕಣ್ಣು. ಪ್ರಕೃತಿಯ ಎಂಥ ರಹಸ್ಯವನ್ನೂ ಕ್ಯಾಮೆರಾದಿಂದ ಬಗೆಯುವ ಅವರ ತಾಕತ್ತನ್ನು ಮೆಚ್ಚಿಕೊಂಡವರು, ಅವರ ಆ ಸಾಹಸಕ್ಕೆ ಬೆರಗಾಗಿ ಪ್ರಭಾವಿತರಾದವರು ಅನೇಕರು. ಈ ಸಾಲಿನಲ್ಲಿ ಅವರ ಒಡನಾಡಿ ಧನಂಜಯ ಜೀವಾಳ ಕೂಡ ಒಬ್ಬರು. ಮಲೆನಾಡಿನ ಗುಡ್ಡದಿಂದ ಹಿಮಾಲಯದ ನೆತ್ತಿಯೇರಿ ಜೀವಾಳ ತೆಗೆದ ಚಿತ್ರಗಳಲ್ಲಿ ಜೀವಂತಿಕೆ ಇದೆ. ನೋಡುಗನ ಕಣ್ಣುಗಳಿಗೆ ಕುಂತಲ್ಲೇ ಪ್ರವಾಸ. ಆ ಹಸಿರು ಉಸಿರಾಡುವುದು ಕೇಳುತ್ತದೆ; ಎಲೆಯ ಅಂಚಿನಲ್ಲಿನ ಇಬ್ಬನಿಯ ಸೊಗಸು ನಮ್ಮೆದೆಗೆ ತಂಪೆರೆಯುತ್ತದೆ. ಇವೆಲ್ಲ ಬೆರಗುಗಳನ್ನು ಜೀವಾಳ ತಮ್ಮ 'ಹೇಳದೇ ಉಳಿದ ಕಥೆಗಳು' ಎಂಬ ದೃಶ್ಯಕಾವ್ಯದ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. 'ಟೋಟಲ್ ಕನ್ನಡ' ಇದನ್ನು ಹೊರತಂದಿದೆ. ಅದರ ಪುಟ್ಟ ಸ್ಯಾಂಪಲ್ ಇಲ್ಲಿ...