ಮದುವೆ ಲಾಟರಿ ಅಲ್ಲ, ಯಾಕೆಂದ್ರೆ ಲಾಟರಿಯಲ್ಲಿ ಅಪರೂಪಕ್ಕಾದರೂ ಗೆಲ್ಲುವ ಅವಕಾಶ ಇರುತ್ತೆ.
- ಮದುವೆಯಾದವರು, ಆಗದವರಿಗಿಂತ ಹೆಚ್ಚು ವರ್ಷ ಬದುಕುತ್ತಾರೆ ಎನ್ನುವುದು ಸುಳ್ಳು; ಅವರಿಗೆ ಹಾಗನ್ನಿಸುತ್ತೆ ಅಷ್ಟೇ.
- ಮದುವೆಯೆಂಬುದು ಇಲಿ ಬೋನು ಇದ್ಹಂಗೆ. ಒಳಗೆ ಹೋಗುವುದು ಸುಲಭ, ಹೊರಗೆ ಬರುವುದು ಕಷ್ಟ.
- ಚಡಪಡಿಸುವ ಹೆಂಡತಿ ಅಡುಗೆಮನೆಯಲ್ಲಿ, ಹರಿದಾಡುವ ಹೇನು ಅಂಗಿಯಲ್ಲಿ ಇದ್ದರೆ, ಗಂಡ ಎಂಬ ಪ್ರಾಣಿಗೆ ನಿದ್ದೆ ಎಲ್ಲಿ ಬರುತ್ತೆ?
- ಅವನ ಹೆಂಡ್ತಿ ಪಾಕಪ್ರವೀಣೆ. ಮುಂಬಾಗಿಲಿನಲ್ಲಿ ಕಿವಿಗೆ ಪೋನ್ ಆನಿಸಿಕೊಂಡು ನಿಂತಿರುವಾಗಲೇ 'ಅಡುಗೆಮನೆಯಲ್ಲಿ ಏನೋ ಸೀಯ್ತಾ ಇದೆ, ಆಫ್ ಮಾಡಿ' ಅಂತ ಗಂಡನಿಗೆ ಸೂಚನೆ ಕೊಡ್ತಾಳೆ.
- ಮದುವೆಯ ಅನುಕೂಲಗಳು: ನಿಮ್ಮ ಮನೆಯಲ್ಲಿ ಕಾಲು ಚಾಚಿ, ಆರಾಮವಾಗಿ ಕೂತ್ಕೊಂಡು, ಉಳಿದಿರುವುದನ್ನು ಬಿಸಿಮಾಡಿಕೊಂಡು ಬಾಯಿಗೆ ಎಸೆದುಕೊಳ್ಳುತ್ತಾ ಸೂರ್ಯ ಮುಳುಗಿದ ಕ್ಷಣದಿಂದ, ನಾಲ್ಕು ಗಂಟೆ ನಿಶ್ಚಿಂತೆಯಿಂದ ನಿಮ್ಮ ಹೆಂಡತಿಗೆ ಇಷ್ಟವಾದ ಟಿವಿ ಕಾರ್ಯಕ್ರಮಗಳನ್ನು (ಮೂಗು ತೂರಿಸದೆ) ನೋಡಬಹುದು.
- ಮದುವೆಯಾದವರು ಒಳ್ಳೆಯ ಮಾರಾಟಗಾರರು. ಯಾಕೆಂದ್ರೆ ಅವರಿಗೆ ಆರ್ಡರ್ಗಳನ್ನು ತೆಗೆದುಕೊಂಡು ಅಭ್ಯಾಸ ಇರುತ್ತೆ.
- ಶಾಲೆಯಲ್ಲಿ ಕಲಿಸಲಾಗದ್ದನ್ನು, ಕಲಿಸುವ ವ್ಯವಸ್ಥೆಯೇ ಹೆಂಡತಿ ಎಂಬ ಸ್ಕೂಲು.
- ಅವನಿಗೆ ಮದುವೆಯಾಗಿ ಐದು ವರುಷವಾದರೂ, ಅವನು ಯಾರಿಗೂ ಹೇಳಲಿಲ್ಲ. ತನ್ನ ತೊಂದರೆ- ತಾಪತ್ರಯಗಳನ್ನು ಹಂಚಿಕೊಳ್ಳಲು ಅವನಿಗೆ ಇಷ್ಟವಿಲ್ಲ.
- ಅವರದು ಕೊಟ್ಟು ತೆಗೆದುಕೊಳ್ಳುವ ಅಪರೂಪ ದಾಂಪತ್ಯ. ಅವನು ಕೊಡುತ್ತಾನೆ, ಅವಳು ತೆಗೆದುಕೊಳ್ಳುತ್ತಾಳೆ.
- ಸಂಪಟೂರು ವಿಶ್ವನಾಥ್