ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಮಲ್ಲಿಕಾ ಭಿಕ್ಷೆ!

Vishwanath S
Updated On : 7 Dec 2013, 4:00 am

ಮಲ್ಲಿಕಾ ಶೆರಾವತ್ ಕಾರಲ್ಲಿ ಹೋಗ್ತಾ ಇರ್ಬೇಕಾದ್ರೆ ಟ್ರಾಫಿಕ್ ಜಾಮ್ ಆಯ್ತು. ಅಷ್ಟರಲ್ಲೇ ಒಬ್ಬ ಭಿಕ್ಷುಕ ಬಂದ.
ಭಿಕ್ಷುಕ: ಅಕ್ಕಾ ಅಕ್ಕ, 1 ರುಪಾಯಿ ಹಾಕಿ.
ಮಲ್ಲಿಕಾ 1000 ರುಪಾಯಿ ಹಾಕಿದಳು.
ಭಿಕ್ಷುಕ: ಇದೇನಕ್ಕಾ, 1 ರು. ಕೇಳಿದ್ರೆ 1000 ರು. ಹಾಕಿದ್ಯಲ್ಲ?
ಮಲ್ಲಿಕಾ: ಹೌದು, ನನ್ನ ಲೈಫ್‌ನಲ್ಲಿ ಮೊದಲನೇ ಬಾರಿಗೆ 'ಅಕ್ಕ' ಅಂತ ಕರೆದವನು ನೀನು.


ಸರ್ವೇ ಸಾಮಾನ್ಯ
ಲೇಡಿ ಟೇಸ್ಟ್

ಭಾರತೀಯ ನಾರಿ ಬದಲಾಗಿದ್ದಾಳೆ. ಆಕೆಗೀಗ ಸಂಸ್ಕಾರವಂತ ಹುಡುಗ ಬೇಡ. ಮಹಾನಗರಗಳಲ್ಲಿ ಹುಡುಗಿಯರ ಆಯ್ಕೆಯೇ ವಿಚಿತ್ರವಾಗಿದೆ ಎಂದು ದೆಹಲಿ ಮೂಲದ 'ಗ್ರೇಟ್‌ವಾಕ್‌' ಸಂಸ್ಥೆ ಹೇಳಿದೆ. ಪ್ರತಿ ಮೆಗಾಸಿಟಿಗಳಲ್ಲೂ 100 ಹುಡುಗಿಯರನ್ನು ಸಂದರ್ಶಿಸಿದ ಸಂಸ್ಥೆ, ಈ ಕೆಳಗಿನ ರಿಪೋರ್ಟ್ ನೀಡ್ತು.
-    ಶೇ.35ರಷ್ಟು ಹುಡುಗಿಯರು ಕೇಳೋದು ಹುಡುಗನಿಗೆ ಸ್ವಂತ ಮನೆ ಇದ್ಯಾ?
-    ಶೇ. ಶೇ.26 ಹುಡುಗಿಯರು ಫೇಸ್‌ಬುಕ್‌ನಲ್ಲಿ ಗೆಳತಿಯರು ಕಡಿಮೆ ಇರುವ ಹುಡುಗನನ್ನು ಬಯಸ್ತಾರೆ.
-    ಶೇ.22.5 ಹುಡುಗಿಯರು ರತಿಕ್ರೀಡೆಯಲ್ಲಿ ಪಾಲ್ಗೊಂಡು ಅವನ ಸಾಮರ್ಥ್ಯ ನೋಡಿ, ಮದುವೆಯ ವಿಚಾರದ ಬಗ್ಗೆ ಚಿಂತಿಸುತ್ತಾರೆ.
-    ಶೇ.9 ಹುಡುಗಿಯರು ಹುಡುಗನ ಬಳಿ ವಾಹನ ಇದೆಯಾ ಅಂತ ನೋಡ್ತಾರೆ.
-    ಶೇ.5 ಹುಡುಗಿಯರು ಹುಡುಗ ವಿದ್ಯಾವಂತನಾಗಿದ್ದಾರೆ ಸಾಕು ಅಂತಾರೆ.
-    ಶೇ.2.5 ಹುಡುಗಿಯರು 'ಆ ಬಗ್ಗೆ ಯೋಚ್ನೆ ಮಾಡಿಲ್ಲ' ಅಂತಾರಂತೆ.

ಬಿಟ್ಟೆ ಬಿಟ್ಟೆ
ಹುಡುಗಿ: ಸಿಗರೇಟ್ ಸೇದೋದನ್ನು ಬಿಟ್ಬಿಡು.
ಕೋಲ್ಯ: ಬಿಟ್ಟೆ.
ಹುಡುಗಿ: ಬಿಯರ್ ಕುಡಿಯೋದನ್ನು ಬಿಟ್ಬಿಡು.
ಕೋಲ್ಯ: ಹ್ಞಾಂ, ಅದನ್ನೂ ಬಿಟ್ಟೆ.
ಹುಡುಗಿ: ನಾಳೆಯಿಂದ ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ, ಪ್ರದಕ್ಷಿಣೆ ಹಾಕಿ ಬಾ.
ಕೋಲ್ಯ: ಆಯ್ತು. ದೇವಸ್ಥಾನಕ್ಕೆ ಹೋಗಿಬಂದೆ.
ಹುಡುಗಿ: ಓ ಸ್ವೀಟ್... ಈಗ ನನ್ನ ಮದ್ವೆ ಆಗ್ತೀಯಾ?
ಕೋಲ್ಯ: ಹೋಗ್ ಹೋಗು, ಇಷ್ಟೆಲ್ಲ ಒಳ್ಳೆ ಕ್ವಾಲಿಟಿ ಇರೋ ನನ್ಗೆ ನಿಂಗಿಂತ ಚೆನ್ನಾಗಿರೋ ಹುಡ್ಗೀನೆ ಸಿಕ್ತಾಳೆ ಬಿಡು.

ಸಾಲ್ ಪನಿಕ
-    ಇಲ್ಲಿಯ ತನಕ ಯಾವ ಬ್ಲ್ಯೂ ಫಿಲ್ಮಿಗೂ ಆಸ್ಕರ್ ಪ್ರಶಸ್ತಿ ಬಂದಿಲ್ಲ!
-    ಜಗತ್ತಿನಲ್ಲಿ ಅತಿ ಹೆಚ್ಚು ಗುಂಡಿಗಳನ್ನು ನೀವು ಟೈಲರ್ ಅಂಗಡಿಗಳಲ್ಲಿ ಕಾಣಬಹುದು!
-    ಜಗತ್ತಿನ ಜನ ಅತಿ ಹೆಚ್ಚು ಒತ್ತುವುದು 'ಲೈಕ್‌' ಬಟನ್ ಅನ್ನು!
-    'ಇಲ್ಲಿ ವಿಮಾನದ ಚಕ್ರಗಳಿಗೆ ಪಂಕ್ಚರ್ ಹಾಕಲಾಗುವುದು' ಎಂಬ ಒಂದೇ ಒಂದು ಫಲಕ ನಮ್ಮ ಗ್ಯಾರೇಜುಗಳ ಮುಂದಿಲ್ಲ!
-    ಹೆಚ್ಚು ಚಿಲ್ಲರೆಯನ್ನು ಕೊಟ್ಟು ಸಹಕರಿಸುವುದು ದೇವಸ್ಥಾನಗಳಲ್ಲಿ ಮಾತ್ರ!

ಹಾಡು ಪಾಡು
ಫಂಟಾ: ಹೌದು, ನಾನು ಪ್ರತಿ ಸಲ ಹಾಡು ಶುರುಮಾಡ್ದಾಗ್ಲೂ ನೀನು ಹೊರಗ್ಯಾಕೆ ಓಡಿ ಹೋಗ್ತೀಯಾ?
ಕೋಲ್ಯ: ಹೊರಗೊಂದು ಭಿಕ್ಷೆ ಪಾತ್ರೆ ಹಿಡಿದ್ರೆ ಒಂದಿಷ್ಟು ಕಲೆಕ್ಷನ್ ಆಗುತ್ತೆ. ನಿನ್ನೆ, ಮೊನ್ನೆ 20 ರುಪಾಯಿ ಆಗಿತ್ತು!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement