ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಸುಂದರ ಬದುಕಿನ ಕಲೆ

Vishwanath S
Updated On : 7 Dec 2013, 3:31 am

ರಾಮಾಯಣ, ಮಹಾಭಾರತದಂಥ ಪುರಾಣ, ಕಥೆಗಳಲ್ಲಿ 'ವಾಸ್ತು'ವು ದೈವೀಸ್ವರೂಪಗೊಂಡ ಕಥೆಗಳಿವೆ. ಹಿರಿಯರು ಕಟ್ಟಿಸಿದ ಮನೆಗಳ ವಿನ್ಯಾಸ, ಕೋಣೆಗಳ ಅಳತೆ, ಕಿಟಕಿಗಳ ರಚನೆ, ಬಾಗಿಲುಗಳ ದಿಕ್ಕು, ಚರಂಡಿ ನಿರ್ಮಾಣ ಇತ್ಯಾದಿ ವಾಸ್ತುವಿಗೆ ಹಿಡಿದ ಕೈಗನ್ನಡಿ.
ಮನೆಯ ಯಜಮಾನ ದಕ್ಷಿಣ ದಿಕ್ಕಿಗೆ ತಲೆಯಿಟ್ಟು ಮಲಗಿದರೆ ಸಾವು ನಿಶ್ಚಿತ. ಮನೆಯ ದಿಕ್ಕು ಉತ್ತರಕ್ಕೆ ಬರಲೇಬೇಕು. ಇಲ್ಲದಿದ್ದರೆ ಮನೆಯಲ್ಲಿ ಜಗಳವಾಗುತ್ತವೆ ಎಂಬಿತ್ಯಾದಿಗಳು ವಾಸ್ತವವಾಗಿ ವಾಸ್ತುವೇ ಅಲ್ಲ. ಅಲ್ಪವಾಸ್ತು ತಜ್ಞರಿಂದಾದ ಅವಘಡ. ಹೀಗಾಗಿ ವಾಸ್ತುವಿನ ಮೇಲೆ ನಂಬಿಕೆ ಅಷ್ಟಿಲ್ಲ.
ಆದರೆ 'ಸರಳವಾಸ್ತು' ಎಂಬುದು ಸತ್ಯಕ್ಕೆ ನಿಲುಕುವ ವಾಸ್ತು. ಅಧ್ಯಯನದ ಮೂಲಕ ನಂಬಲಾಗಿದೆ. ಸರಳ ವಾಸ್ತು ಎಂದರೆ ಸುಖ ಸಮೃದ್ಧಿಯಿಂದ ಬದುಕುವ ಕಲೆ ಎನ್ನಲೂಬಹುದು. ಆರ್ಥಿಕ, ಶೈಕ್ಷಣಿಕ, ಸಂಬಂಧ, ಆರೋಗ್ಯ, ಸಾಮಾಜಿಕ, ವ್ಯಾವಹಾರಿಕ ಸಮಸ್ಯೆಗಳನ್ನು ಮನೆಯ ನಕ್ಷೆಯ ಮೂಲಕ ತಿಳಿದುಕೊಳ್ಳುವ ವಿಧಾನವೇ ಸರಳವಾಸ್ತು.
ಸರಳವಾಸ್ತುವಿನ ಪ್ರಕಾರ ಹಿಂದಿನ ಅಥವಾ ಈಗಿನ ಜನ್ಮದಲ್ಲಿ ಮಾಡಿದ ಕರ್ಮಫಲಿತ ಅದೃಷ್ಟ ಮತ್ತು ಮನದ ನೆರಳಾದ ಮನೆಯ ಅದೃಷ್ಟ ಎಂಬ ಎರಡು ವರಗಳಿವೆ. ಇದರೊಂದಿಗೆ 4 ಒಳ್ಳೆಯ ದಿಕ್ಕು ಮತ್ತು 4 ಕೆಟ್ಟ ದಿಕ್ಕುಗಳು ಪ್ರಭಾವ ಬೀರುತ್ತವೆ. ಮನೆಯಲ್ಲಿರುವ ಒಂಬತ್ತು ಸ್ಥಾನಗಳು ಒಂದೊಂದು ದಿಕ್ಕುಗಳನ್ನು ಹೊಂದಿರುವುದಲ್ಲದೆ ತನ್ನದೇ ವಿಶೇಷತೆ ಹೊಂದಿವೆ. ಮನೆಯ ಪ್ರತಿಯೊಂದು ಮೂಲೆಯೂ ತನ್ನದೇ ಆದ ವೈಶಿಷ್ಟ್ಯತೆ ಹೊಂದಿರುವುದನ್ನು ಪ್ರತ್ಯೆಕ್ಷವಾಗಿ ಕಾಣಬಹುದು. ಸಮಸ್ಯೆಗಳಿಂದ ಹೊರಬರಲು ಸರಳವಾಸ್ತು ನೆರವಾಗಿರುತ್ತದೆ. ಸರಳವಾಸ್ತುವು ಮನೆ ಸ್ವಂತ ಅಥವಾ ಬಾಡಿಗೆ ಆಗಿದ್ದರೂ ವಾಸಿಸುವಾಗ ಸಮಸ್ಯೆ ಹುಡುಕಿ ತೋರಿಸುತ್ತದೆ. ಸರಳವಾಸ್ತು ಬಗೆಗಿನ ಅಭಿಪ್ರಾಯದ ತಳಹದಿಯ ಮೇಲೆ ಸಮಸ್ಯೆಯಿಂದ ಪಾರುಮಾಡಬಹುದು.
ಸರಳವಾಸ್ತು ಸಲಕರಣೆಗಳು ಡಾ. ಚಂದ್ರಶೇಖರ ಗುರೂಜಿಯ ಪ್ರತಿಫಲಿತ ಸಾಧನಗಳಾಗಿವೆ. ಮನೆಯ ಋಣಾತ್ಮಕ ಶಕ್ತಿಗಳ ನಿರ್ಮೂಲನೆಗೆ ವಿಶೇಷ ಶಕ್ತಿಗಳಾಗಿ ಪರಿವರ್ತನೆಗೊಳ್ಳುವುದನ್ನು ಮನೆಯ ವಾಸ್ತುವಿನ ಮೂಲಕ ತಿಳಿದುಕೊಳ್ಳಬಹುದು. ಧನಾತ್ಮಕ ಶಕ್ತಿಯ ಹೆಚ್ಚುವಿಕೆಯೂ ಮನೆಯ ಮನದಲ್ಲಿರುವ ಸಮಸ್ಯೆಗಳಿಂದ ಮುಕ್ತಿ ನೀಡಿ ನಿಮ್ಮನ್ನು ಸುಖದಿಂದ ಬಾಳುವ ಹಾಗೆ ಮಾಡುವುದಲ್ಲದೆ ಸಮೃದ್ಧಿಯ ಪಥದತ್ತ ತೆಗೆದುಕೊಂಡು ಹೋಗುವವು. ಸಂಸಾರದ ಜಂಜಾಟದಲ್ಲಿ ಸಿಲುಕಿರುವ ಎಷ್ಟೋ ಕುಟುಂಬಗಳಿಗೆ ಸಮಾಧಾನ ಸಿಗುವುದು.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ವಿದೇಶಿಯರೂ ಸರಳವಾಸ್ತುವಿನಿಂದ ಸುಖಿ.
ಆಚಾರ- ವಿಚಾರ, ಜಾತಿ- ಮತ, ಉಡುಗೆ- ತೊಡುಗೆ, ನಡೆ- ನುಡಿ, ನೀತಿ- ಸಂಯಮ, ಬಾಂಧವ್ಯ- ಸಂಬಂಧ, ತಿಂಡಿ- ತಿನಿಸುಗಳು ಬೇರೆ ಬೇರೆಯಾದರೂ ಸರಳವಾಸ್ತು ಉಪಯೋಗದ ಮೂಲಕ ವಿವಿಧತೆಯಲ್ಲಿ ಏಕತೆ ಕಂಡುಕೊಂಡಿದ್ದಾರೆ. ಅಭಿವೃದ್ಧಿಶೀಲ ಕುಟುಂಬಗಳಾಗಿವೆ. ದೇಶದ 25ಕ್ಕೂ ಹೆಚ್ಚಿನ ಸರಳವಾಸ್ತು ಕಚೇರಿ ಜನರ ಸಮಸ್ಯೆ ನಿವಾರಣೆಗೆ ಹಗಲಿರುಳು ಚಾಲನೆಯಲ್ಲಿವೆ.
ಸರಳವಾಸ್ತು ಇಂದು ಜನಮಾನಸದಲ್ಲಿ ಸಂತೋಷ ನೀಡುತ್ತಿರುವುದರ ಹಿಂದೆ ಚಂದ್ರಶೇಖರ ಗುರೂಜಿಯ ಅಧ್ಯಯನ, ವಿಷಯಾಂಶದ ಅಳತೆ, ಆವಿಷ್ಕಾರ, ಪರಿಶ್ರಮವಿದೆ. ಕಷ್ಟವೆಂದು ಬಳಿಬಂದವರಿಗೆ ಆಶ್ರಯ ಕಲ್ಪಿಸುವ ವಿಶೇಷ ಕಟ್ಟಡ ನಿರ್ಮಾಣ ಯೋಜನೆಗೆ ಸರಳವಾಸ್ತು ಸಂಸ್ಥೆ ಮುಂದಾಗಿದೆ. ನಿರ್ದಿಷ್ಟ ಅವಧಿಯವರೆಗೆ ಜನ್ಮ ದಿನಾಂಕದ ಆಧಾರದ ಮೇಲೆ ನಿರ್ಮಿಸಿರುವ ಆಶ್ರಯ ಮನೆಗಳನ್ನು ಮನೆ ಯಜಮಾನನ ಜನ್ಮ ದಿನಾಂಕದ ಪ್ರಕಾರ ಸರಿ ಹೊಂದುವ ಮನೆಯಲ್ಲಿ ಆಶ್ರಯ ಕಲ್ಪಿಸಿಕೊಡುವ ಯೋಜನೆ ಹೊಂದಿದೆ. ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಯ ಸಾಗಿದೆ.



-ಡಾ. ಚಂದ್ರಶೇಖರ ಗುರೂಜಿ
gurujiparivar@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement