ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಅವನು ಚಿನ್ನಸ್ವಾಮಿ ಸ್ಟೇಡಿಯಮ್ಮಿನ ಚೆಂಡುಗಳ್ಳ!

Rashmi Kasaragodu
Updated On : 14 Dec 2013, 6:38 am

ಅವನ ಬಳಿ 27 ಕ್ರಿಕೆಟ್ ಆಟಗಾರರು ಸಿಕ್ಸರ್ ಹೊಡೆದ ಚೆಂಡುಗಳಿವೆ. ನೀವು ಚಿನ್ನಸ್ವಾಮಿ ಸ್ಟೇಡಿಯಮ್ಮಿನ ಅಕ್ಕಪಕ್ಕ ಓಡಾಡುತ್ತಿದ್ದರೆ ಅಲ್ಲಿ ರಿಚರ್ಡ್ ಎಂಬ ಈ ವ್ಯಕ್ತಿ ಕಾಣಿಸುತ್ತಾನೆ. ಚೆಂಡುಗಳನ್ನು ರಾಶಿ ಹರವಿ ವ್ಯಾಪಾರ ಮಾಡುವುದಿಲ್ಲ ಈತ. ಜೋಳಿಗೆಯಲ್ಲೇ ಒಂದಿಷ್ಟು ಚೆಂಡುಗಳನ್ನಿಟ್ಟುಕೊಂಡಿರುತ್ತಾನೆ. ಈ ಸ್ಟೇಡಿಯಮ್ಮಿನಲ್ಲಿ 1979ರಿಂದ ನಡೆದ ಪ್ರತಿ ಪಂದ್ಯದಲ್ಲೂ ರಿಚರ್ಡ್ ಪ್ರೇಕ್ಷಕರಾಗಿದ್ದಾರೆ. ಆಟಗಾರರು ಸಿಕ್ಸರ್ ಬಾರಿಸಿದಾಗ, ಗ್ಯಾಲರಿಗೆ ಬರುವ ಚೆಂಡನ್ನು ಕದಿಯುವುದರಲ್ಲಿ ಇವರು ನಿಸ್ಸೀಮರು. ಅನೇಕ ಸಲ ಪೊಲೀಸರಿಗೆ ಸಿಕ್ಕಿಬಿದ್ದರೂ ಅವರಿಗೆ ಹಣ ಕೊಟ್ಟು ಹೇಗೋ ಬಚಾವಾಗಿದ್ದಾರೆ. ಈ ಚೆಂಡನ್ನು ಅವರು ಯಾರಿಗೂ ಮಾರುವುದಿಲ್ಲವಂತೆ. ಸಚಿನ್ ತೆಂಡೂಲ್ಕರ್ ಬಾರಿಸಿದ 3 ಚೆಂಡುಗಳು, ಗ್ಯಾರಿ ಕರ್ಸ್ಟನ್, ಸುನೀಲ್ ಗವಾಸ್ಕರ್, ಕ್ರಿಸ್ ಗೇಲ್, ಕೊಹ್ಲಿ, ಮೊನ್ನೆ ಡಬಲ್ ಸೆಂಚುರಿ ಬಾರಿಸಿದ ರೋಹಿತ್ ಶರ್ಮಾ ಸಿಕ್ಸರ್ ಬಾರಿಸಿದ ಚೆಂಡುಗಳು ಈತನ ಬಳಿ ಇವೆ. ಅಂದಹಾಗೆ, ರಿಚರ್ಡ್‌ನ ವಯಸ್ಸು 50. ಸಾಯುವುದರೊಳಗೆ ನೂರು ಚೆಂಡುಗಳನ್ನಾದರೂ ಕದಿಯಬೇಕೆನ್ನುತ್ತಾರೆ ಅವರು.  (ವಿ.ಸೂ.: ಪೊಲೀಸರು ಹಿಡಿಯುತ್ತಾರೆ ಎಂಬ ಕಾರಣಕ್ಕೆ ಅವರ ಅರ್ಧ ಚಿತ್ರವನ್ನು ಕೊಡಲಾಗಿದೆ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement