ಫೇಸ್ಬುಕ್ನಲ್ಲಿ ಪ್ರಶು ರಾಜ್ ಅಂಟಿಸಿದ ಪೋಸ್ಟ್...
ಒಂದು ವೇಳೆ ಕೊಲಂಬಸ್ ಮದ್ವೆ ಆಗಿದ್ದಿದ್ದರೆ ಅಮೆರಿಕವನ್ನು ಕಂಡುಹಿಡಿಯಲಾಗುತ್ತಿರಲಿಲ್ಲ. ಯಾಕೆ ಅಂತೀರಾ? ಈ ಕೆಳಗಿನ ಪ್ರಶ್ನೆಗಳು ಆತನ ಸಾಧನೆಗೆ ಬ್ರೇಕ್ ಹಾಕುತ್ತಿದ್ದವು.
- ಎಲ್ಲಿಗೆ ಹೋಗುತ್ತಿದ್ದೀರಿ?
- ಯಾಕೆ ಹೋಗುತ್ತಿದ್ದೀರಿ?
- ಯಾರ ಜೊತೆ ಹೋಗ್ತಿದ್ದೀರಿ?
- ವಾಪಸು ಯಾವಾಗ ಬರ್ತೀರಾ?
- ಮನೆಯಲ್ಲಿದ್ದೇ ಕಂಡುಹಿಡೀಬಹುದಲ್ವಾ?
- ವಾಪಸು ಬರ್ತಾ ತರಕಾರಿ ತನ್ನಿ.
- ತಲುಪಿದ ಕೂಡಲೇ ಫೋನ್ ಮಾಡಿ.
- ಪ್ರತಿ ಸಾರಿ ನೀವೇ ಯಾಕೆ ಕಂಡುಹಿಡೀಬೇಕು? ಬೇರೆಯವರು ಕಂಡುಹಿಡಿಯೋಕ್ಕೆ ಆಗಲ್ವಾ?