ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಮಂಡ್ಯ ರಮೇಶ್ ಕಂಡದ್ದು

ಮಂಡ್ಯ ರಮೇಶ್ ರಂಗಭೂಮಿ ಕುರಿತಾದ ತಮ್ಮ ಆಲೋಚನೆಗಳನ್ನು ಲೇಖನಗಳಲ್ಲಿ ದಾಖಲಿಸಿದ್ದಾರೆ. ಅವು ಆಗಾಗ ಪತ್ರಿಕೆಗಳಲ್ಲಿ...

Rashmi Kasaragodu
Updated On : 14 Dec 2013, 6:34 am

ಮಂಡ್ಯ ರಮೇಶ್ ರಂಗಭೂಮಿ ಕುರಿತಾದ ತಮ್ಮ ಆಲೋಚನೆಗಳನ್ನು ಲೇಖನಗಳಲ್ಲಿ ದಾಖಲಿಸಿದ್ದಾರೆ. ಅವು ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೆ ಇನ್ನು ಕೆಲವು ವೇದಿಕೆಗಳಲ್ಲಿ ಮಂಡನೆಯಾಗಿವೆ. ಅವೆಲ್ಲ ಈಗ 'ಕನವರಿಕೆ' ಹೆಸರಿನಲ್ಲಿ ಕೃತಿಯಾಗಿವೆ. ಇದರಲ್ಲಿ ಅವರು ರಂಗಭೂಮಿಯ ನಟನೆ, ಮಕ್ಕಳ ರಂಗಭೂಮಿಯಲ್ಲಿ ವಹಿಸಬೇಕಾದ ಎಚ್ಚರಿಕೆಯ ಕುರಿತು ಅಮೂಲ್ಯವಾದ ವಿಚಾರಗಳನ್ನು ಹೇಳಿದ್ದಾರೆ. ರಂಗಭೂಮಿಗೆ ದುಡಿದ ಕೆಲವರ ವ್ಯಕ್ತಿಚಿತ್ರಗಳೂ ಇದರಲ್ಲಿವೆ.
ಪ್ರ: ಅಂಕುರ ಪ್ರಕಾಶನ, ಮೈಸೂರು, ಪುಟಗಳು 112, ಬೆಲೆ ರು. 80


ಆರೋಗ್ಯ ಕೈಪಿಡಿ
ತಜ್ಞ ವೈದ್ಯೆಯಾಗಿರುವ ಡಾ. ಲೀಲಾವತಿ ದೇವದಾಸ್ 'ನಮ್ಮ ಆರೋಗ್ಯ ನಮ್ಮ ಕೈಯಲ್ಲಿ' ಎಂಬ ಕೃತಿಯಲ್ಲಿ ಶುದ್ಧ ಆರೋಗ್ಯಕ್ಕೆ ಸಿದ್ಧ ಸೂತ್ರಗಳನ್ನು ಸರಳವಾಗಿ ವಿವರಿಸಿದ್ದಾರೆ. ಬಿಳುಪು ಸ್ರಾವ ಅಪಾಯಕರವೆ? ಏನಿದು ಥೈರಾಯ್ಡ್?  ಮುಟ್ಟು, ಏನಿದರ ಗುಟ್ಟು? ಎಂಥಾ ಆಹಾರ ಬೇಕು? ತಾಯ್ತನ ತಡವೇಕೆ? ಹೀಗೆ ಹಲವು ವಿಷಯಗಳ ಬಗ್ಗೆ ಇದರಲ್ಲಿ ಮಾಹಿತಿ ಇದೆ.
ಪ್ರ: ಸೃಷ್ಟಿ ಪಬ್ಲಿಕೇಷನ್ಸ್, ಬೆಂಗಳೂರು, ಪುಟಗಳು 296, ಬೆಲೆ ರು. 200


ವಿಜ್ಞಾನಿ  ಕೈಪಿಡಿ
ಸಂಪಟೂರು ವಿಶ್ವನಾಥ್ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು 'ಜಗತ್ತಿನ 365 ಶ್ರೇಷ್ಠ ವಿಜ್ಞಾನಿಗಳು' ಕೃತಿಯನ್ನು ರಚಿಸಿದ್ದಾರೆ. ಕ್ರಿಸ್ತಪೂರ್ವದಲ್ಲೇ ವಿಜ್ಞಾನ ಒಂದು ಶಾಸ್ತ್ರದಂತೆ ಬೆಳೆದಿತ್ತು. ಇಲ್ಲಿ ವಿಜ್ಞಾನಿಗಳನ್ನು ಅವರು ಕೆಲಸ ಮಾಡಿದ ಕ್ಷೇತ್ರದಂತೆ ವಿಂಗಡಿಸಿಲ್ಲ. ಮನುಕುಲಕ್ಕೆ ಅವರ ಒಟ್ಟಾರೆ ಕೊಡುಗೆಯನ್ನು ಪರಿಗಣಿಸಿ ವಿವರ ನೀಡಲಾಗಿದೆ.
ಪ್ರ: ಸಪ್ನ ಬುಕ್ ಹೌಸ್, ಬೆಂಗಳೂರು, ಪುಟಗಳು 239, ಬೆಲೆ ರು. 150


ಶ್ರೀಲಂಕಾದಲ್ಲಿ ಶಾಂತಿಸೇನೆ
ನಿವೃತ್ತ ಸೇನಾಧಿಕಾರಿ ಲೆ.ಜ. ಎಸ್.ಸಿ. ಸರದೇಶಪಾಂಡೆ ಶ್ರೀಲಂಕಾದಲ್ಲಿ ಭಾರತೀಯ ಶಾಂತಿಸೇನೆ ನಡೆಸಿದ ಕಾರ್ಯಾಚರಣೆಯ ವಿವರಗಳನ್ನು ಒಳಗೊಂಡ 'ಭಾರತೀಯ ಶಾಂತಿಸೇನೆಯ ಶ್ರೀಲಂಕಾ ಅಧ್ಯಾಯ' ಎಂಬ ಕೃತಿಯನ್ನು ರಚಿಸಿದ್ದಾರೆ. ಇದು ಸಂವೇದನಾಶೀಲ ಬರೆಹ. ಸೈನಿಕರ ಅನುಭವ ಕಥನ ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ಕೊಡುಗೆ.
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಪುಟಗಳು 120, ಬೆಲೆ ರು. 120

- ಡಾ. ವಾಸುದೇವ ಶೆಟ್ಟಿ
vasudevs@sify.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments