ಖುಷಿ

ಸತ್ಯವನ್ನೇ ಹೇಳುತ್ತಿದ್ದ ಸತ್ಯಹರಿಶ್ಚಂದ್ರನಿಗೆ ಸ್ಮಶಾನ ಕಾಯುವ ಗತಿ ಏಕೆ ಬಂತು?

-     ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ.
    ಸತ್ಯವನ್ನೇ ಹೇಳುತ್ತಿದ್ದ ಸತ್ಯಹರಿಶ್ಚಂದ್ರನಿಗೆ ಸ್ಮಶಾನ ಕಾಯುವ ಗತಿ ಏಕೆ ಬಂತು?
    - ನೂರಕ್ಕೆ ನೂರಾಒಂದರಷ್ಟು ಸತ್ಯ ಹೇಳಿದ್ದಕ್ಕೆ!
-      ಕಾಳಿಹುಂಡಿ ಶಿವಕುಮಾರ್, ಮೈಸೂರು.
    ಮೋಕ್ಷಕ್ಕೂ, ಕಪಾಳ ಮೋಕ್ಷಕ್ಕೂ ವ್ಯತ್ಯಾಸವೇನು?
    - ಮೋಕ್ಷಕ್ಕೆ ಭಾರಿ ಪುಣ್ಯದ ಕೆಲಸ ಮಾಡಬೇಕು, ಕಪಾಳ ಮೋಕ್ಷಕ್ಕೆ ಒಂದು 'ಸಣ್ಣ' ಕೆಲಸ ಮಾಡಿದ್ರೂ ಸಾಕು!
-     ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.
    ಪ್ರೀತಿಸುವ ಪ್ರತಿಯೊಬ್ಬರೂ ಕವಿಗಳಂತೆ, ಪ್ರೀತಿಸದವರು?
    - ಕಟು ವಿಮರ್ಶಕರು!
-     ಜೆ.ಆರ್. ಆದಿನಾರಾಯಣಮುನಿ, ಶ್ರಿಕೋಡಿಹಳ್ಳಿಮಠ
    ನಾವು ಕೋರುವ ಶಾಂತಿ, ಶ್ರದ್ಧಾಂಜಲಿಗಳು ನಿಜಕ್ಕೂ ಮೃತರ ಆತ್ಮ ಮುಟ್ಟುತ್ತವೆಯೇ?
    - ಪತ್ರಿಕೆ, ಟಿವಿಯವರನ್ನು ಮುಟ್ಟಿದ್ರೆ ಸಾಕು!
-     ವಿ. ಹೇಮಂತಕುಮಾರ್, ಬೆಂಗಳೂರು.
    ಕತ್ತೆ ಮೇಯ್ದ ಜಾಗದಲ್ಲಿ ಕುದುರೆಗೆ ಮೇವು ಸಿಗುತ್ತದೆಯೇ?
    - ನೀವು ಯಾವ ಅಧಿಕಾರಿ, ರಾಜಕಾರಣಿ ಬಗ್ಗೆ ಈ ಪ್ರಶ್ನೆ ಕೇಳ್ತಿದ್ದೀರಿ?
ಟ     ಪೇಂಟರ್ ಪಾಪು, ಸಂತೇಮರಹಳ್ಳಿ.
    ಹಿರಿತಲೆಯೊಂದು ಮನೆಯಲ್ಲಿ ಇರಬೇಕಂತೆ ಯಾಕೆ?
    - ಮನೆಗೊಂದು ಅಜ್ಜಿ, ಒಲೆಗೊಂದು ಕುಂಟೆ ಇರಬೇಕೂಂತ ಗಾದೆನೇ ಇಲ್ವೇ!
-ಟ      ವಿ. ಹೇಮಂತಕುಮಾರ್, ಬೆಂಗಳೂರು.
    ಇಷ್ಟಪಟ್ಟವಳ ಹೃದಯ ಕದ್ದರೆ ಎಷ್ಟು ವರ್ಷ ಶಿಕ್ಷೆ?
    - ಮದುವೆಯಾದರೆ ಜೀವಾವಧಿ ಶಿಕ್ಷೆ!
-    ಪಿ.ಜೆ. ರಾಘವೇಂದ್ರ, ಮೈಸೂರು.
    ನಾವು ಅವರಿಗೆ ಮತ ನೀಡುವುದೂ ಮೂಢನಂಬಿಕೆಯೇ?
    - ಅದಕ್ಕಾಗಿ ಅವರು 'ಉರುಳು ಸೇವೆ' ಮಾಡ್ತಾರಲ್ಲ!
-     ಅಂದಾನಯ್ಯ ತಿಗರಿಮಠ, ಅಳವಂಡಿ
    ಸಿದ್ರಾಮಣ್ಣ ರೈತರಿಗೆ ಕಬ್ಬಿನ ಸಿಹಿ ಕೊಡುವುದು ಯಾವಾಗ?
    - ಅವರ ಮಂತ್ರಿಗಳೇ 'ಬೆಂಬಲ ಬೆಲೆ' ಕೊಟ್ಟಾಗ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ಬೆಂಗಳೂರಿನಲ್ಲಿ SIR ಪ್ರತಿಭಟನೆ ವೇಳೆ ಪೊಲೀಸ್ ಕ್ರಮ: ಮರು ಪರಿಶೀಲನೆಗೆ ಪ್ರಿಯಾಂಕ್ ಖರ್ಗೆ ಆದೇಶ!

ಪುಣೆ ಟೆಕ್ಕಿ ಆತ್ಮಹತ್ಯೆ: ಡೆತ್‌ನೋಟ್‌ ಪತ್ತೆ; ಸಂಬಳ, ತವರು ಮನೆಯ ಫ್ಲಾಟ್ ವರ್ಗಾಯಿಸುವಂತೆ ಅತ್ತೆ-ಮಾವ ಒತ್ತಡ!