ಹಮೇ ಬಹುಮತ ದೋ
ತಿಮ್ಮ: ಈ ಜಗತ್ತಿನ್ಯಾಗ ಶಾಶ್ವತ ಯಾವುದು ಅಂತ ಗೊತ್ತೇನಲೇ ತಮ್ಮಾ?
ತಮ್ಮ: ಇಲ್ಲ ತಿಮ್ಮಾ.
ತಿಮ್ಮ: ಒಂದು ಭಗವತ್ಗೀತದಾಗಿನ 'ಆತ್ಮ' ಇನ್ನೊಂದು 'ಅತ್ತೆ'!
ತಮ್ಮ: ಅಂದರ..?
ತಿಮ್ಮ: ಅತ್ತೆ ಅಂದರ ಗಂಡನ ತಾಯಿ ಅಥವಾ ಹೆಂಡತಿ ತಾಯಿಲೇ. ಮಕ್ಕಳ ಮದುವಿ ಮಾಡಿದರು ಅಂದರ ಮನಿಯೊಳಗ ನಂಬರ್ ಒನ್ ವೈರಿ ಆಗ್ತಾರ ಇವರು.
ತಮ್ಮ: ಹಂಗ್ಯಾಕ?
ತಿಮ್ಮ: ಯಾಕಂದರ 'ಅತ್ತೆ' ಲಾಂಗ್ಫಾರ್ಮ್ ಗೊತ್ತೈತಿಲ್ಲೋ?
ತಮ್ಮ: ಇಲ್ಲ...
ತಿಮ್ಮ: 'ಅ'ನಾದಿ ಕಾಲದಿಂದಲೂ 'ತೆ'ಪ್ಪಗಿರದವಳು ಅಂದಂಗಾತು. ಇದು ಹಿಂಗಾತು ಅಂತ ಸೌಂಡ್ ಮಾಡಕೋತ ಇರಾಕಿ- ಅತ್ತೆ!
ತಮ್ಮ: 'ಸೊಸೆ' ಅಂದರ?
ತಿಮ್ಮ: "ಸೋಲನ್ನೇ 'ಸೆ'ದೆ ಬಡಿದವಳು" ಅಂತ. ಅಂದರ ಯಾವ ಕಾಲಕ್ಕೂ ಸೋಲನ್ನ ಒಪ್ಪದವಳು ಅಂತ.
ತಮ್ಮ: ಅಂದರ ಅನಾದಿಕಾಲದಿಂದ ತೆಪ್ಪಗಿರದವಳು ಮತ್ತು ಸೋಲನ್ನು ಒಪ್ಪದವಳು. ಇವರ ನಡುವ ಇರೋದ ಜೀವನ ಅಂತಿಯೇನು?
ತಿಮ್ಮ: ಮತ್ತ ಟೀವಿ ಚಾನೆಲ್ನವರ ಹೊಟ್ಟೆ ತುಂಬೋದು ಇವರಿಬ್ಬರ ಸ್ಟೋರಿಗಳಿಂದ, ಕಥೆ, ಕಾದಂಬರಿಗಳು ಸಾವಿರಗಟ್ಟಲೆ ಕಾಪಿ ಮಾರಾಟ ಆಗೋದ ಇವರಿಬ್ಬರ ಕಂಟೆಂಟ್ನಿಂದ, ಬೀಸಿ ಪಾರ್ಟಿ, ಕಿಟ್ಟಿ ಪಾರ್ಟಿ ನಡೆಯೋದು ಇವರ ಸಬ್ಜೆಕ್ಟ್ಗಳಿಂದ, ಮತ್ತಡ ಮನೆಕೆಲಸದ ಆಳುಗಳ ಗಾಸಿಪ್ ಚಾಲ್ತಿ ಒಳಗಿರೋದು ಇವರಿಬ್ಬರಿಂದ!
ತಮ್ಮ: ಹೌದ ನೋಡು, ಮನ್ನೆ ನಮ್ಮ ದೇಶದ ನಂಬರ್ ಒನ್ ಕುಟುಂಬ ಬಚ್ಚನ್ ಮನಿಯೊಳಗೂ ಏನೋ 'ಅತ್ತೆ ಸೊಸೆ' ಹೊಗಿ ಆಡಕತ್ತೈಂತ?
ತಿಮ್ಮ: ನಂಬರ್ ಒನ್ ಕುಟುಂಬ ರಾಹುಲ್ ಬಾಬಾ ಸೋನಿಯಾಜಿ ಅವರದಲ್ಲೇನು?
ತಮ್ಮ: ಹೌದೌದು, ಅವರು ನಮ್ಮ ದೇಶದ ಸೊಸೆಯಾಗಿ ಬಂದು ಈಗ ತಮಗೊಬ್ಬ ಸೊಸೆ ಬರಬೇಕು ಅಂತ ವಿಚಾರ ಮಾಡಾಕತ್ತಾರಪ್!
ತಿಮ್ಮ: ಆದರ ಯಾಕ ಹುಡುಕಿ ತರವಲ್ಲರಂತ?
ತಮ್ಮ: ಇದ ವಿಚಾರಕ್ಕ ತಾಯಿ ಮಗನ ನಡುವೆ ಕಿರಿಕಿರಿನೂ ಆಗೈತಂತ.
ತಿಮ್ಮ: ಏನು? ಏನಾಗೆತಂತ!!
ತಮ್ಮ: ಆ ತಾಯಿ ಹೋದಲ್ಲೆಲ್ಲ 'ಹಮೇ ಬಹುಮತ ದೋ' 'ಹಮೇ ಬಹುಮತ ದೋ' ಅಂತ ಭಾಷಣದಾಗ ಹೇಳ್ತಾರಂತ.
ತಿಮ್ಮ: ಬರೋಬ್ಬರಿ ಐತಿ, ನಮ್ಮನ್ನ ಇಲೆಕ್ಷನ್ನಾಗ ಬಹುಮತದಿಂದ ಆರಿಸಿ ಗೆಲ್ಲಸರಿ ಅಂತ ಹೇಳತಾಳ ಆ ತಾಯಿ.
ತಮ್ಮ: ಆದರ ಜನಾ ಅದನ್ನ ಹಮೇ 'ಬಹು' ಮತ್ ದೋ ಅಂತ ತಿಳಕೊಂಡರಡ! ಅಂದರ ನಮಗ ಸೊಸೆ ಕೊಡಬ್ಯಾಡರಿ ಅಂತಾಗೇತಿ.
ತಿಮ್ಮ: ಓಹೋ ಅದಕ್ಕ... ತಾಯಿ ಮಗನ ನಡುವ ತಿಕ್ಕಾಟ ನಡದೈತೇನು?
ತಮ್ಮ: ಇಲ್ಲ, ಒಳಒಳಗಡ ರಾಹುಲ್ಬಾಬಾ ಖುಶ್ ಅಗ್ಯಾರಂತ ಒಳಗಿನ ಕೆಲವು ಮಂದಿ ಅಂತಾರ.
ತಿಮ್ಮ: ಯಾಕ?
ತಮ್ಮ: ಅವರಪ್ಪರ ಹಾಂಗ ಅವರೂ ಫಾರಿನ್ನದ್ದ ನೋಡಕತ್ತಾರಂತ.
- ಯಶವಂತ ಸರದೇಶಪಾಂಡೆ
allthebest01@gmail.com