ಉತ್ತರಾಧಿಕಾರಿ
- ಹೇಮಂತ್ ಕುಮಾರ್, ಬೆಂಗಳೂರು
ಹುಡುಗಿಯರ ಕನಸುಗಳಿಗೂ ಆಂಟಿಯರ ಕನಸುಗಳಿಗೂ ವ್ಯತ್ಯಾಸವೇನು?
ಹುಡುಗಿಯರ ಕನಸುಗಳು ಹಾರುತ್ತವೆ, ಆಂಟಿಯರಿಗೆ ಕನಸುಗಳು ಬೀಳುತ್ತವೆ!
- ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಹೆಣ್ಣಿಗೆ ಕಣ್ಣುಕುಕ್ಕುವ ಸೌಂದರ್ಯವಿದ್ದರೆ ಯಾರಿಗೆ ಪ್ರಯೋಜನ?
ಕನ್ನಡಕದ ಅಂಗಡಿಯವರಿಗೆ!
- ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
ಜೀವನದಲ್ಲಿ ಬರೀ ಸುಖವನ್ನೇ ಬಯಸುವವರಿಗೆ ನಿಮ್ಮ ಸಲಹೆ?
ಬರೀ ಸಿಹಿ ತಿಂದರೆ ಡಯಾಬಿಟೀಸ್ ಬರುತ್ತೆ!
- ಪಿ.ಜೆ. ರಾಘವೇಂದ್ರ, ಮೈಸೂರು.
ಜಾಮೀನುಭಾಗ್ಯ ಯೋಜನೆ ಜಾರಿಗೆ ತರ್ತಾರಂತೆ?
ಇದಕ್ಕೆ ಹಿರೇಮಠರ ತೀವ್ರ ವಿರೋಧವಿದೆಯಂತೆ!
- ಸ್ವಾಮಿ ನಿರ್ಮಲಾ, ಉಡಿಗಾಲ
ನೀವು ಕಂಡ ಅತ್ಯಂತ ಅತಿರೇಕದ ಜಗಳ ಯಾವುದು?
ಹೇಳಿದ್ರೆ ಅಕ್ಕಪಕ್ಕದ ಮನೆಯವರು ನನ್ನ ಹತ್ತರವೇ ಜಗಳಕ್ಕೆ ಬರ್ತಾರೆ!
- ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
ಪೂರ್ವಜನ್ಮದಲ್ಲಿ ಪುಣ್ಯ ಮಾಡಿದವರಿಗೆ ಒಳ್ಳೆ ಹೆಂಡ್ತಿ ಸಿಗ್ತಾಳಂತೆ, ಪಾಪ ಮಾಡಿದವರಿಗೆ?
ಒಳ್ಳೆಯ ಗೆಳತಿ ಸಿಗಬಹುದು!
- ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಭಿಕ್ಷುಕನ ಕೈಯಲ್ಲೂ ಮೊಬೈಲ್ ರಿಂಗಣಿಸುತ್ತಿದೆಯಲ್ಲಾ?
ಇನ್ಕಮ್ ಕಾಲ್ ಹಾಗಿದೆ!
- ಪೆಂಟರ್ಪಾಪು, ಸಂತೇಮರಹಳ್ಳಿ
ಸಾವಿರ ಸುಳ್ಳು ಹೇಳಿ ಯಾಕೆ ಒಂದು ಮದುವೆ ಮಾಡಿಸುತ್ತಾರೆ?
ಮದುವೆ ನಂತರ ಸತ್ಯವಂತರಾಗಿ ಬಾಳಲಿ ಅಂತ!
- ಕಾಳಿದಾಸ, ರಾಮಕೃಷ್ಣನಗರ
ಅಳಿದಮೇಲೂ ಉಳಿಯುವುದು ಯಾವುದು?
ಖ್ಯಾತಿ, ಕುಖ್ಯಾತಿ!
ರಜನಿಕಾಂತ್ ಬಲ್ಬ್ ಉರಿಸಿಕೊಂಡೇ ನಿದ್ದೆ ಮಾಡುತ್ತಾರೆ. ಕತ್ತಲಲ್ಲಿ ಅವರಿಗೆ ಹೆದರಿಕೆಯಾಗುತ್ತದೆ ಎಂದಲ್ಲ, ಬಲ್ಬಿಗೆ ಹೆದರಿಕೆಯಾಗುತ್ತದಂತ. - ರಜನಿ ಫ್ಯಾನ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.