ಜೋಕ್ಸ್
ಬೈ ಮಿಸ್ಟೇಕ್
ಅಪ್ಪ: ಅಮ್ಮ ಯಾಕೋ ಇವತ್ತು ಇಷ್ಟೊಂದು ಸೈಲೆಂಟಾಗಿದಾರೆ?
ಪುಟ್ಟ: ಗೊತ್ತಿಲ್ಲ ಅಪ್ಪಾ... ಲಿಪ್ಸ್ಟಿಕ್ ಕೊಡು ಅಂದ್ರು. ನಾನು ಬೈ ಮಿಸ್ಟೇಕ್ ಫೆವಿಸ್ಟಿಕ್ ಕೊಟ್ಟೆ. ಅದಕ್ಕೆ ಕೋಪ ಬಂದಿರಬೇಕು.
ಅಪ್ಪ: (ಕಣ್ಣೀರು ತುಂಬಿಕೊಂಡು) ನಿಂಗೆ ದೇವ್ರು ತುಂಬಾ ಒಳ್ಳೇದ್ ಮಾಡ್ಲಿ ಕಂದಾ..!
===
ಮರೆತ ದುಃಖ
ಕುಡಿದು ಟೈಟಾಗಿ ಕೂತ ಗಂಡನೆದುರು ಹೆಂಡ್ತಿ ಬರ್ತಾಳೆ.
ಗಂಡ: ಹಲೋ ಯಾರ್ರೀ ನೀವು?
ಹೆಂಡ್ತಿ: ಕುಡಿದು ಬಿಟ್ರೆ ಕಟ್ಕೊಂಡ್ ಹೆಂಡ್ತೀನೂ ಗುರುತು ಸಿಗೋಲ್ವ ನಿಮಗೆ?
ಗಂಡ: ಹಂಗಲ್ಲ ಮೇಡಂ. ಈ ಡ್ರಿಂಕ್ಸೇ ಹೀಗೆ... ಎಲ್ಲಾ ದುಃಖವನ್ನೂ ಮರೆಸಿಬಿಡುತ್ತೆ. ಅಂದಹಾಗೆ, ನೀವು ಯಾರ ಹೆಂಡ್ತಿ?
===
ಎರಡು ಹನಿಮೂನ್
ಫಂಟಾ: ನಾನು ಸಿಕ್ಕಾಪಟ್ಟೆ ಜಿಪುಣ. ಹೆಂಡ್ತಿಯನ್ನು ಮನೆಯಲ್ಲಿ ಬಿಟ್ಟು ನಾನೊಬ್ಬನೆ ಹನಿಮೂನಿಗೆ ಹೋಗಿಬಂದಿದ್ದೆ.
ಕೋಲ್ಯ: ನಾನು ನಿನಗಿಂತ ಜಿಪುಣ. ಹನಿಮೂನಿಗೆ ನನ್ನ ಹೆಂಡ್ತಿಯನ್ನು ಗೆಳೆಯನ ಜೊತೆ ಕಳುಹಿಸಿಕೊಟ್ಟಿದ್ದೆ.
===
ಒಳ್ಳೇ ಹವಾ
ಕೊಲ್ಯ: ಮನೇಲಿ ನನ್ನ ಮಾತೇ ನಡೆಯೋದು ಗೊತ್ತಾ?
ಗೆಳೆಯ: ಹೌದಾ!?
ಕೊಲ್ಯ: ಹ್ಞೂಂ. ನಾನು ಬಿಸಿ ನೀರು ತಗೊಂಡ್ ಬಾರೇ.. ಅಂತ ಕೂಗಿದರೆ ಅವ್ಳು ತಿರುಗಿ ಮಾತಾಡದೆ ತಂದು ಕೊಡ್ತಾಳೆ.
ಗೆಳೆಯ: ಅಬ್ಬಬ್ಬಾ! ಒಳ್ಳೇ ಹವಾ ಮಡ್ಗಿದೀಯ ಕಣೋ!
ಕೋಲ್ಯ: ಹೌದು ಮತ್ತೆ. ಬಿಸಿನೀರಲ್ಲೇ ಪಾತ್ರೆ ಚೆನ್ನಾಗಿ ತೊಳೆಯೋಕಾಗೊದು. ಪಾತ್ರೆ ಕ್ಲೀನಾಗಿ ತೊಳೀದೇ ಹೋದ್ರೆ ಪಾತ್ರೇಲೇ ಕುಕ್ತಾಳೆ ಮಾರಾಯಾ!
===
ದಾಂಪತ್ಯದ ಚೆಸ್
ಗಂಡ-ಹೆಂಡ್ತಿ ಅಂದ್ರೆ ಚೆಸ್ ಆಟದ ರಾಜ-ರಾಣಿ ಇದ್ದಂತೆ.
ಹೇಗೆ?
ರಾಜ ಒಂದ್ಸಲಕ್ಕೆ ಒಂದೇ ಹೆಜ್ಜೆ ಇಡಬಹುದು.
ರಾಣಿ ಯಾವ ದಿಕ್ಕಲ್ಲಿ ಎಷ್ಟ್ಹೆಜ್ಜೆ ಬೇಕಾದರೂ ಮನಸಿಗೆ ಬಂದಂತೆ ಓಡಾಡ್ಕೊಬಹುದು. ಹೇಗೆ ಬೇಕಾದರೂ ಅಟ್ಯಾಕ್ ಮಾಡಬಹುದು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.