ನೆಮ್ಮದಿ ಕೇಂದ್ರ
ಸಂಕೋಚ, ಆದ್ರೂ...
ಹುಡುಗಿಯರನ್ನು ಕಂಡರೆ ತುಂಬ ಸಂಕೋಚ. ಒಬ್ಬನೆ ಇದ್ದಾಗ ಮಾತನಾಡಬೇಕು ಎಂಬ ಆಸೆ. ಪರಿಹಾರವೇನು?
- ಗಣೇಶ್, ಶನಿವಾರಸಂತೆ.
ಎಲ್ಲಾ ವಯಸ್ಸಿಗೆ ಬಂದ ಹುಡುಗರಲ್ಲಿ ಮುಜುಗರವಿರುತ್ತದೆ. ಮಾತನಾಡುವುದೇ ಪರಿಹಾರ. ಮೊದಲ ಸಲ ಮಾತ್ರ ಕಷ್ಟದಿಂದ ನುಲಿಯಿರಿ. ನಂತರದ ದಿನಗಳಲ್ಲಿ ನಿಶ್ಚಿತವಾಗಿ ನಲಿಯುತ್ತೀರಿ. ಮೊಂಡು ಧೈರ್ಯ ಮಾಡದೆ ವಿಧಿಯಿಲ್ಲ. ಗೋ ಅಹೆಡ್!
ಹೆಂಡತಿ ಜೀನ್ಸ್ ಹಾಕುವುದಿಲ್ಲ!
ಹೆಂಡತಿಯನ್ನು ಜೀನ್ಸ್ ಡ್ರೆಸ್ನಿಂದ ನೋಡಲು ಇಷ್ಟ. ಆಕೆ ಸೀರೆ ಬಿಟ್ಟು ಬೇರಾವ ಡ್ರೆಸ್ ಹಾಕಲೂ ಒಪ್ಪುತ್ತಿಲ್ಲ. ಜೀನ್ಸ್ ಹಾಕು ಎಂದರೆ ನಿರಾಕರಿಸುತ್ತಾಳೆ. ಅವಳನ್ನು ಜೀನ್ಸ್ ಡ್ರೆಸ್ ಹಾಕುವಂತೆ ಮಾಡುವುದು ಹೇಗೆ?
- ಸಮಂತ್ ಕೆ. ಕುಂದಾಪುರ
ಜೀನ್ಸ್ ಹಾಕಿದಾಗ ಅತ್ಯಂತ ಸುಂದರವಾಗಿ, ಕಾಲೇಜು ಹುಡುಗಿಯಂತೆ ಕಾಣಿಸುತ್ತೀಯ ಎಂದೆಲ್ಲ ವರ್ಣಿಸಿ. ಜೀನ್ಸ್ ಹಾಕಿದ ನಿನ್ನೊಂದಿಗೆ ನಡೆಯುತ್ತಿದ್ದರೆ ನೋಡಿದವರು ನಮ್ಮನ್ನು ಲವರ್ಸ್ ಅಂತಲೇ ಗುರುತಿಸುತ್ತಾರೆ ಅಂತೆಲ್ಲ ಪುಂಗಿ ಊದಿ. ಉಬ್ಬಿ ಜೀನ್ಸ್ ತೊಡುತ್ತಾಳೆ. ನಿಮ್ಮ ಸಂಗಾತಿಯನ್ನು ಇನ್ನು ಹೊಗಳಲು ನಮ್ಮಿಂದ ಸಾಧ್ಯವಿಲ್ಲ!
ಲಿವಿಂಗ್ ಟುಗೆದರ್ನಲ್ಲಿ ಸೆಕ್ಸ್ ಮಾಡಬಹುದೆ?
ನನಗೆ 'ಲಿವಿಂಗ್ ಟುಗೆದರ್'ನಲ್ಲಿ ಹೆಚ್ಚು ಆಸಕ್ತಿ. ನನ್ನೊಡನೆ ಇರುವವನನ್ನು ಸೆಕ್ಸ್ಗೆ ಒತ್ತಾಯಿಸಿದರೆ? ಕಾನೂನು ಇದನ್ನು ಮದುವೆ ಅಂತ ಪರಿಗಣಿಸಿರುವುದರಿಂದ ಸೆಕ್ಸ್ನಲ್ಲಿ ಪಾಲ್ಗೊಳ್ಳಬಹುದೇ?
- ಶ್ರಾವ್ಯ, ಎನ್ ಬೆಂಗಳೂರು
ಮದುವೆ ಆಗುವುದೇ ಸೂಕ್ತ. ಲಿವಿಂಗ್ ಟುಗೆದರ್ನಿಂದ ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುತ್ತೀರಿ. ಸೆಕ್ಸ್ನಲ್ಲಿ ಪಾಲ್ಗೊಳ್ಳುವ ಮುನ್ನ ಮುಂದಿನ ಪರಿಣಾಮ ಅರಿತುಕೊಳ್ಳಿ. ಸೆಕ್ಸ್ ತುಡಿತ ಆರೋಗ್ಯಕರ. ಆದರೆ, ಮದುವೆಗೂ ಮುನ್ನ ಅನಾರೋಗ್ಯಕರ!
ಮದುವೆಗೂ ಬಿಲ್ಡಪ್
ಗೆಳತಿಯರೊಂದಿಗೆ ನಾನು ಹ್ಯಾಂಡ್ಸಮ್ ಹುಡುಗನನ್ನೇ ಮದುವೆ ಆಗುತ್ತೇನೆಂದು ಬಿಲ್ಡಪ್ ಕೊಟ್ಟಿದ್ದೇನೆ. ಇದರಿಂದ ಮನೆಯವರು ನೋಡಿರುವ ಹುಡುಗನನ್ನು ಮದುವೆಯಾಗಲು ಮನಸ್ಸು ಒಪ್ಪುತ್ತಿಲ್ಲ. ನಾನೇನು ಮಾಡಲಿ?
- ಸಿಂಧೂರ ಶರ್ಮ, ವಿಜಯ ನಗರ
ನೀವೇನು ಗೆಳತಿಯರಿಗೋಸ್ಕರ ಬದುಕುತ್ತಿದ್ದೀರ? ಬಿಲ್ಡಪ್ ಕೊಟ್ಟಿರುವುದು ಜಸ್ಟ್ ಉಮೇದಿನಲ್ಲಿ. ಅದನ್ನು ಉಳಿಸಲು ಹೋಗಿ ಅಮೂಲ್ಯ ಜೀವನ ಹಾಳುಗೆಡವಬೇಡಿ. ಸುಸಂಸ್ಕೃತ ಹುಡುಗನಾದರೆ, ನಿಮ್ಮನ್ನು ಚೆನ್ನಾಗಿ ನೋಡಿಕೊಂಡಾನು ಎನಿಸಿದರೆ. ಸಪ್ತಪದಿಯೆಡೆಗೆ ಸಾಗಿ.
- ಡಾ. ನರೇಂದ್ರ ಗಾಂಧಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.