ಲೈಸೆನ್ಸಿಗಾಗಿ ಹಾಗೆ ಕಟಿಂಗ್ ಮಾಡಿಸಿಕೊಂಡ!
ಈತ ಜೋಕರ್ ಅಲ್ಲ. ಕ್ಷೌರ ಪ್ರಪಂಚದ ಹೊಸ ಮಾರ್ಗ ಪ್ರವರ್ತಕ. ಬಲಮುಖದ ಅರ್ಧಭಾಗ ಹಾಗೂ ಎಡ ತಲೆಯ ಅರ್ಧ ಭಾಗವನ್ನು ಮಾತ್ರ ಈತ ನುಣ್ಣಗೆ ಬೋಳಿಸಿಕೊಂಡಿದ್ದಾನೆ. ಎದುರಿನಿಂದ ನೋಡಿದರೆ, ಒಂದು ತೆರನಾಗಿ ಕಾಣುವ ಈತ ಎಡ, ಬಲ ಹಾಗೂ ಹಿಂದಿನಿಂದ ನೋಡಿದರೆ ಬೇರೆ ಬೇರೆ ಬಗೆಯಾಗಿ ಕಾಣಿಸುತ್ತಾನೆ. ಹೀಗೆ ವಿಚಿತ್ರ ಕ್ಷೌರ ಮಾಡಿಸಿಕೊಂಡ ದಿನ, ಆತನಿಗೇ ಹೊರಗೆ ಹೋಗಲು ತೀರಾ ಮುಜುಗರವಾಯಿತಂತೆ.
ಕೆನಡಾ ದೇಶದ ಈತನ ಹೆಸರು ಆ್ಯಡಂ ಬಾರ್ಡ್. 26ರ ಹರೆಯದ ಈತ ಡ್ರೈವ್ಹಿಂಗ್ ಲೈಸೆನ್ಸ್ ಪಡೆಯಲು ಒಂದು ಫೋಟೋ ಕೊಡಬೇಕಾಗಿತ್ತು. ಆ ಫೋಟೋ ವಿಭಿನ್ನವಾಗಿರಬೇಕು. ಎಲ್ಲರ ಗಮನ ತನ್ನೆಡೆಗೆ ಸೆಳೆಯಬೇಕು ಎಂಬ ಯೋಚನೆ ಅವನದಾಗಿತ್ತು. ಅದಕ್ಕಾಗಿ ಬಾರ್ಡ್ ಈ ರೀತಿಯ ಕ್ಷೌರಕ್ಕೆ ಮುಂದಾದ. ಲೈಸೆನ್ಸನ್ನೂ ಪಡೆದುಕೊಂಡ. ಅಷ್ಟಕ್ಕೇ ಆತ ನಿಲ್ಲಲಿಲ್ಲ. ತನ್ನ ಅರೆ ಕ್ಷೌರದ ಕೆಲವು ಫೋಟೋಗಳನ್ನು, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಬಿಟ್ಟ. ಲಕ್ಷಾಂತರ ಜನ ಈ ಚಿತ್ರಗಳನ್ನು ಅತ್ಯಂತ ಕುತೂಹಲದಿಂದ- ಆಸಕ್ತಿಯಿಂದ ವೀಕ್ಷಿಸಿದರು. ಒಂದು ಸಾವಿರ ಜನ ಬಾರ್ಡ್‌ಗೆ ವೈಯಕ್ತಿಕ ಇಮೇಲ್ ಮಾಡಿ ಅಭಿಪ್ರಾಯಗಳನ್ನು ತಿಳಿಸಿದರು. ಅಂತೂ ಬಾರ್ಡ್‌ನ ಉದ್ದೇಶ ಸಫಲವಾಯಿತು.
- ಸುಭಾಸ ಯಾದವಾಡ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.