ಒಂದು ಬೀಜದ ಕಥೆ
ಬಸ್ಸಲ್ಲಿ ಕೂತಿದ್ದ ಯುವಕನಿಗೆ ಪಕ್ಕದಲ್ಲಿ ಕೂತಿದ್ದ ಅಜ್ಜಿ ಬಾದಾಮಿ, ಪಿಸ್ತಾ ಕೊಡ್ತಾಳೆ.
ಯುವಕನಿಗೆ ಖುಷಿ ಆಗುತ್ತೆ. ಬಾಯಿಗೆ ಹಾಕ್ಕೊಂಡು ಅಗಿಯುತ್ತಾ
'ನೀ ತಿನ್ನೋದ್ ಬಿಟ್ಟು ನನಗ್ಯಾಕೆ ಕೊಡ್ತಿದೀಯ ಅಜ್ಜಿ?' ಅಂತ ಕೇಳ್ತಾನೆ.
'ನಂಗೆ ಅಗಿಯೋಕೆ ಹಲ್ಲಿಲ್ವಲ್ಲ ಮಗಾ.. ಹೇಗ್ ತಿನ್ಲಿ...?'
'ಹಲ್ಲಿಲ್ಲ.. ತಿನ್ನೋಕ್ಕಾಗಲ್ಲ ಅಂದಮೇಲೆ ಯಾಕೆ ತಗೊಂಡೆ?'
'ಅಯ್ಯೋ ನಾನ್ಯಾಕೆ ಇದನ್ನ ತಗೊಳ್ಲಿ? ನಾ ತಗೊಂಡ ಚಾಕ್ಲೆಟಲ್ಲಿ ಇತ್ತು ಇದೆಲ್ಲ. ಚಾಕ್ಲೆಟ್ ಚೀಪಾದ ಮೇಲೆ ಉಳ್ಕೊಂಡಿದ್ ಬೀಜ ನಿಂಗ್ ಕೊಟ್ಟೆ ಅಷ್ಟೇ'
ಯುವಕನ ಬಾಯಲ್ಲಿದ್ದ ಬೀಜ ಆಚೆ ಬರೋದು ಬಾಕಿ!
ನಿನ್ ವಯಸ್ಸೆಷ್ಟು ಮರಿ?
ಅಮೆರಿಕದವನೊಬ್ಬ ಇಂಡಿಯನ್ ಹುಡುಗನ ಹತ್ರ ಕೇಳ್ತಾನೆ, 'ನಿನ್ ವಯಸ್ಸೆಷ್ಟು ಮರಿ?'
'ಇಷ್ಟೇ ಅಂತ ಹೇಳಕ್ಕಾಗಲ್ಲ ಅಂಕಲ್... ಮನೇಲಿ ಹನ್ನೊಂದು.. ಸ್ಕೂಲಲ್ಲಿ ಹನ್ನೆರಡು... ಬಸ್ಸಲ್ಲಿ ಹತ್ತು... ರೈಲಲ್ಲಿ ಏಳು... ಫೇಸ್ಬುಕ್ಕಲ್ಲಿ ಹದಿನೆಂಟು..! ಹೀಗೆ ಒಂದೊಂದ್ ಕಡೆ ಒಂದೊಂದ್ ಥರ. ನೀವ್ಯಾಕೆ ಕೇಳ್ತಾ ಇದ್ದೀರಾ ಅಂತ ಹೇಳಿದ್ರೆ... ಅದಕ್ಕೆ ತಕ್ಕಂತೆ ನನ್ನ ವಯಸ್ಸು ಹೇಳ್ತೀನಿ'.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.