ಕುರುಡು
ನಲ್ಲೆ, ಪ್ರೇಮ
ಕುರುಡಂತೆ
ನಿಜವೇ?
ಖಂಡಿತ ನಿಜ
ನಾ ನಿನ್ನ
ನಲ್ಲೆ ಅಲ್ಲ!
- ಕುಮಾರಸ್ವಾಮಿ ಲಕ್ಕೇನಹಳ್ಳಿ
ತೀರ್ಪು
ಸಾಕಷ್ಟು ಸುಳ್ಳು
ಸಾಕ್ಷಿ ಸೃಷ್ಟಿಸಿ
ನಿರಪರಾಧಿ ಎಂದು
ಸಾಬೀತಾದವನ
ಆತ್ಮಸಾಕ್ಷಿ
ನೀನು ಅಪರಾಧಿ
ಎಂದು ತೀರ್ಪಿತ್ತಿತು
- ನಾಗೇಶ ಜೆ.ನಾಯಕ
ಕವನ
ಜೋರಾಗಿ
ಓದಹೊರಟೆ
ನಾ ಬರೆದ
ಕವನ
ಎಲ್ಲರೂ ಎದ್ದು
ಹೊರಟರು
ಮುಚ್ಚಿ ತಮ್ಮ
ಕಿವೀನ
- ತಲಕಾಡು ಶ್ರೀನಿಧಿ
ಲೋಕಪಾಲ
ಲೋಕಪಾಲನಿಗೆ
ರಾಜ್ಯಸಭೆ ಅಸ್ತು
ಇನ್ನು
ಶಿಶುಪಾಲನಿಗೆ
ಸುಸ್ತು!
- ಪಿ.ಜೆ.ರಾಘವೇಂದ್ರ
ನೋ
ನೀ ನೀ
ಅಪ್ಪಟ ಸುಂದರಿ ಎಂದು
ಮದುವೆಯಾಗಲು
ನಾ ನಾ
ಎನ್ನುತ್ತಿದ್ದ ಹುಡುಗರು
ದಕ್ಷಿಣೆ ನೋ ಎಂದಾಗ
ನೋ ನೋ
ಎನ್ನುವುದೆ?
- ಜಯಶ್ರೀ ಅಬ್ಬಿಗೇರಿ
ಕಾಲಕ್ರಮೇಣ
ಮದುವೆಯಾದ
ಹೊಸತರಲ್ಲಿ
ಗಂಡ ಹೆಂಡತಿ
ಒಬ್ಬರನೊಬ್ಬರು
ಬಯಸುತ್ತಾರೆ
ಕ್ರಮೇಣ ಒಬ್ಬರನೊಬ್ಬರು
ನಿಭಾಯಿಸುತ್ತಾರೆ
- ಆರತಿ ಘಟಿಕಾರ್
ಕಂಬಳಿ
ಕಂಬಳಿ ಹೊದ್ದರೂ
ಹೋಗದ ಚಳಿ ನನ್ನವಳು
್ಛ್ಟಟಜ ಕಮ್ ಬಳಿ
ಎಂದಾಗ ಸದ್ದಿಲ್ಲದೆ
ಹೊರಟುಹೋಯಿತು
- ಚೆನ್ನೇಶ್ ಅರಳಬಿಳಚಿ
ಆಭರಣ
ಮೈತುಂಬಾ
ಚಿನ್ನದ ಆಭರಣ
ಹೊತ್ತು
ಮೊದಲ ರಾತ್ರಿಯ
ಕೋಣೆಗೆ ಹೋದ
ಹುಡುಗಿಯ ಮೈತುಂಬಾ
ಮರುದಿನ
ಗಂಡ ಕೊಟ್ಟ
ಪ್ರೇಮದ ಆಭರಣ
- ಫ್ಯಾಶನ್ ಡಿಸೈನರ್ ಮಧು
ಹತ್ತಿರ
ದುಡಿದರೂ ಕುಡಿದರೂ
ಮನುಷ್ಯ ಬೇಗ ಹತ್ತಿರವಾಗುವುದು
ಭೂಮಿಗೇ
- ಸಂತೋಷಕುಮಾರ್ ಎಲ್.ಎಂ
ಭಯದ ಕೂಪ
ಬೆಳೆದು ಬೆಳಕ
ಬೀರಬೇಕಿದ್ದ
ಹರೆಯದ ಹೊಸಬ
ಭಯದ ಕತ್ತಲ
ಕೂಪದಲೇ ಕರಗುತ್ತಾ
ಕೊನೆಯಾದ ಕಸಬ
- ಕವಿತಾ ಮೇಗೂರು