ಅಪರಿಚಿತನೊಬ್ಬನಿಗೆ 'ಹಾಯ್' ಹೇಳಿದೆ. ಎಲ್ಲಿಗೆ ಹೋಗುತ್ತಿದ್ದೀಯಾ ಎಂದೂ ಕೇಳಿದೆ. ಆದರೆ ಆತ ನಾನು ಕನಸಲ್ಲಿ ಕಂಡ ಹುಡುಗನಾಗಿರಲಿಲ್ಲ. ಈಗ ಆತನಿಂದ ಕಣ್ತಪ್ಪಿಸಿಕೊಳ್ಳುತ್ತಿದ್ದೇನೆ.
- ಮಿಸ್ಮಲಿನಿ
'ಪ್ರತಿದಿನ ಆಲ್ಕೋಹಾಲ್ ಉಪಯೋಗಿಸುವುದರಿಂದ ವೈದ್ಯರನ್ನು ದೂರವಿಡಬಹುದು' ಎಂಬ ಸಂಶೋಧನಾ ಲೇಖನ ಪತ್ರಿಕೆಗಳಲ್ಲೇ ಪ್ರಕಟವಾಗಿದೆ. ನಿಮಗೆ ತಿಳಿದಿಲ್ಲವೆ?
- ರೋನಿ ಸ್ಕೃವೆಲ್ಲಾ
ನನ್ನ ಸುಳ್ಳುಗಳ ಪುಸ್ತಕಕ್ಕೆ ನಾನೇ ಸಂಪಾದಕಿ. ನಾನೇ ಲೇಖಕಿ. ಹಾಗಾಗಿ ನನ್ನ ಸಹಿಯನ್ನು ನಕಲು ಮಾಡಿರುವೆ.
- ಗುಲ್ ಪನಾಗ್
ರಜಾ ದಿನಗಳಲ್ಲಿ ವಿಮಾನದಲ್ಲಿ ಕುಳಿತಾಗ ರೋಮಾಂಚನಗೊಂಡು ಹಲ್ಲುಕಿರಿದಿದ್ದೆ. ಸಣ್ಣ ಮಕ್ಕಳು ಕ್ಯಾಂಡಿ ಅಂಗಡಿ ಮುಂದೆ ನಿಂತಂತೆ ಕಾಣಿಸುತ್ತಿದ್ದೆ!
- ಪ್ರೀತಿ ಜಿಂಟಾ
ನನ್ನ 79 ವರ್ಷದ ಅಜ್ಜಿ ಇತ್ತೀಚೆಗೆ ಟ್ವಿಟರ್ ಖಾತೆ ತೆರೆದರು. ಈಗ ನನ್ನ ಬಳಿ ಕೇಳುತ್ತಿದ್ದಾರೆ 'ಯಾರೀ ಅಪರಿಚಿತರು? ನನ್ನನೇಕೆ ಹಿಂಬಾಲಿಸುತ್ತಿದ್ದಾರೆ?'
- ಕರುಣ್ ಚಾಂದೋಕ್
ನಾನು ನಿದ್ರಿಸುವುದೇ ಇಲ್ಲ. ಯಾಕೆಂದರೆ ಎಲ್ಲಿ ಉಸಿರಾಡುವುದನ್ನು ಮರೆತು ಬಿಡುತ್ತೇನೋ ಎಂಬ ಭಯ!!
- ಶಿರೀಸ್ ಕುಂದರ್
(a+b)2= a2+2ab+b2 ಸೂತ್ರ ನನ್ನ ಜೀವನದಲ್ಲಿ ಎಂದು ನಿಜವಾಗುತ್ತದೆ ಎಂದು ಕಾಯುತ್ತಿದ್ದೇನೆ.
- ನಿಖಿಲ್ ಸಿದ್ದಾರ್ಥ್
ಹೆಚ್ಚಿನ ಆತ್ಮವಿಶ್ವಾಸದಿಂದ ಹಲವು ಸಮಸ್ಯೆಗಳಿಗೆ ಒಳಗಾಗಬಹುದು. ಆದರೆ ಸೂಪರ್ ಕಾನ್ಫಿಡೆನ್ಸ್ನಿಂದ ಸಮಸ್ಯೆಗಳ ಸುತ್ತಲೂ ಸುತ್ತಬಹುದು.
- ರಾಮ್ಗೋಪಾಲ್ ವರ್ಮ