ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ನಿಮ್ಹಾನ್ಸ್‌ನಿಂದ ಪ್ರಶ್ನೆ ಬಂದರೂ ಉತ್ತರಿಸ್ತೀರಾ ಸಾರ್?

Vishwanath S
Updated On : 28 Dec 2013, 4:19 am

ಆರ್. ನಾಗರಾಜ್, ಗೊರೂರು
ನಿಮ್ಹಾನ್ಸ್‌ನಿಂದ ಪ್ರಶ್ನೆ ಬಂದರೂ ಉತ್ತರಿಸ್ತೀರಾ ಸಾರ್?
ಇಂತಹ 'ಹುಚ್ಚು ಪ್ರಶ್ನೆ' ಕೇಳಬೇಡಿ!
ಕಾಳೀಹುಂಡಿ ಶಿವಕುಮಾರ್, ಮೈಸೂರು
ಕವಿಗಳು ಹೆಂಡತಿಯನ್ನು ಪ್ರಶ್ನೆಗೆ ಹೋಲಿಸುತ್ತಾರೆ, ಅದೇ ಪ್ರೇಮಿಯನ್ನು?
ಆಶ್ಚರ್ಯಚಕಿತ ಚಿನ್ಹೆಗೆ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಸುಳ್ಳು ಹೇಳುವವರನ್ನೇ ಏಕೆ ಜನ ನಂಬುತ್ತಾರೆ?
ಸುಳ್ಳಲ್ಲಿ ಹೆಚ್ಚು 'ಮಸಾಲೆ' ಇರುತ್ತದೆ!

ಬರ್ಕ್‌ಲಿ ರಮೇಶ್, ಕಿರಗಂದೂರು, ಮಂಡ್ಯ
ಈಗಲೂ ಪಿತೃವಾಕ್ಯ ಪರಿಪಾಲನೆಗಾಗಿ ಕಾಡಿಗೆ ಹೋಗುವವರು ಇದ್ದಾರಾ?
ಕೆಲವು ಮರಗಳ್ಳರ ಮಕ್ಕಳು ಇದ್ದಾರೆ!

ಕೆ.ಎಂ. ಲಿಂಗರಾಜು, ನಂಜನಗೂಡು
ಪ್ರಿಯಕರ ಪಕ್ಕದಲ್ಲಿದ್ದರೂ ಮೊಬೈಲ್‌ನಲ್ಲಿ ಹರಟುವವರದ್ದು ಎಂತಹ ಪ್ರೇಮ?
ಈ ಲೈನಲ್ಲಿ ಒಂದು ಪ್ರೇಮ, ಲೈನ್‌ನಲ್ಲಿ ಒಂದು ಪ್ರೇಮ!
ರವಿಕುಮಾರ್ ಬಿ.ಟಿ. ಬೆಂಗಳೂರು
ಕೈ ಪಕ್ಷದಿಂದ ಸೈಕಲ್ ತುಳಿದ ಬಿದರಿಯವರ ಮುಂದಿನ ಪಕ್ಷ ಯಾವುದು?
ಕಮಲ ಸಿಗುತ್ತೇನೋಂತ ಕೊಳದಲ್ಲಿ ಈಜಾಡ್ತಿದ್ದಾರೆ!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಪ್ರತಿಷ್ಠಿತರಿಗೆ ಬಲಗೈ ಭಂಟರಿರುವಂತೆ ಎಡಗೈ ಭಂಟರೂ ಇರುತ್ತಾರಾ?
ಎಡಪಂಥೀಯರನ್ನು ಕೇಳಿ!

ಸ್ವಾಮಿ ನಿರ್ಮಲಾ, ಉಡಿಗಾಲ
ಮುದಿತನ ವರವೋ ಶಾಪವೋ ಸಾರ್?
ಸಾತ್ವಿಕರಿಗೆ ವರ, ರಸಿಕರಿಗೆ ಶಾಪ!

ಓಂ ಚನ್ನೇಶ್, ಅರಬಿಳಚಿಕ್ಯಾಂಪ್, ಭದ್ರಾವತಿ
ಮದುವೆಗೂ ಮೊದಲು ನನ್ನವಳು ರಸಗುಲ್ಲ, ಈಗ ನುಂಗಲಾರದ ತುಪ್ಪ ಯಾಕೆ ಸಾರ್?
ಹೊಟ್ಟೆ ತುಂಬಿದ ಮೇಲೆ ರಸಗುಲ್ಲನೂ ಆಗೋಲ್ಲ!

ಸರಸ್ವತಿ ರಮೇಶ್, ಹನುಮನಾಳು
ಉತ್ತರಾಧಿಕಾರಿ ನೀನು ಉತ್ತರಿಸಲಾಗದ ಪ್ರಶ್ನೆ ಕೇಳುವೆ ಉತ್ತರಿಸುವೆಯಾ?
ನನ್ನ ಉತ್ತರಾಧಿಕಾರಿಯನ್ನು ಕೇಳಿ ಹೇಳ್ತೀನಿ!

ಆರ್. ನಾಗರಾಜ್, ಗೊರೂರು
ಅವಳೇಕೆ ಇಳಿವಯಸ್ಸಿನಲ್ಲೂ ಪ್ರೇಮಕವನಗಳನ್ನ ಗೀಚುತ್ತಾಳೆ?
ಅದು ಯಾವ ಮಟ್ಟಕ್ಕಾದ್ರೂ 'ಇಳಿಯುವ' ವಯಸ್ಸು!

ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿ ಮಠ
ಲಾಸ್ಟ್ ಮೂವ್‌ಮೆಂಟ್‌ನಲ್ಲೇ ಹುಡುಗಿಯರು ಕೈ ಕೊಡುತ್ತಾರಲ್ಲ ಏಕೆ?
ಅವರಿಗೆ ಅದೇ ಲಾಸ್ಟ್ ಆಪ್‌ಷನ್!

ರವೀಂದ್ರ ಶಿ. ಯಡಹಳ್ಳಿ, ಬೀಳಗಿ
ಹ್ಯಾಟ್ರಿಕ್‌ಗೂ ಮೆಟ್ರಿಕ್‌ಗೂ ವ್ಯತ್ಯಾಸವೇನು?
ಇದು ಮೂರು ಸಾರಿ, ಅದು ಮೂರು ವರ್ಷ!

ಚಿರ್‌ಪ್ರಭ, ನಂಜನಗೂಡು
ಕೈ ಪಕ್ಷದ ಕೈ ಕೆಸರಾದರೆ ಯಾರ ಬಾಯಿಗೆ ಮೊಸರು?
ದೆಹಲಿಯಲ್ಲಿ ಬಿಜೆಪಿ ಬಾಯಿಗೆ ಸಿಗಬೇಕಾದ ಮೊಸರು ಪೊರಕೆಗೆ ಹಿಡಿಯಿತು!

ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
ಎಲ್ಲದರಲ್ಲೂ ಪಾಸ್, ಲವ್‌ನಲ್ಲಿ ಮಾತ್ರ ಫೇಲ್ ಯಾಕೆ?
ಲವ್‌ಗೆ ಟ್ಯೂಷನ್ ಇಲ್ಲ!
ಬರ್ಕ್‌ಲಿ ರಮೇಶ್, ಕಿರಗಂದೂರು , ಮಂಡ್ಯ
ಸೊಂಟವನ್ನು ಬಳಸಿದಾಗ ಬಂಧಿಯಾಗುವವರು ಯಾರು?
ಆ ಕೆಲಸ ಮಾಡಿಯೇ ತೇಜ್‌ಪಾಲ್ ಬಂಧಿಯಾಗಿರುವುದು!ಟಿ
ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
ವಯಸ್ಸಿಗೆ ಬಂದಾಗ ಕತ್ತೆ ಮರಿಯೂ ಸುಂದರವಾಗಿ ಕಾಣುತ್ತೆ, ವಯಸ್ಸಾದ ಮೇಲೆ?
ಅದರ ಕಾಲು ಮಾತ್ರ ಕಾಣುತ್ತೆ!

ಕಾಳಿದಾಸ, ರಾಮಕೃಷ್ಣನಗರ, ಮೈಸೂರು
ಮುದ್ದು ಮಾಡಿದಷ್ಟೂ ಹಠ ಜಾಸ್ತಿ ಮಾಡ್ತಾಳಲ್ಲ?
ಮಕ್ಕಳೇ ಹಾಗೆ ಬಿಡಿ!
ಕಳೆದವಾರದ ಉತ್ತರ
ಪ್ರಶ್ನೆ: ಸಾಹಿತಿಗಳೂ ಸಲಿಂಗಕಾಮವನ್ನು ಬೆಂಬಲಿಸುತ್ತಿದ್ದಾರಂತೆ?
1.    ಸಹ ಬರಹಗಾರರನ್ನು ಹಿಂದಿನಿಂದ ತಿವಿದ ಅಭ್ಯಾಸಬಲ ಇರಬಹುದೆ!?  
    - ದೀಪಕ್ ಜಿ.ಕೆ.
2.    ಸಲಿಂಗಕಾಮಿಗಳ ಮೇಲೆ (ಸ)ರಸಕಾವ್ಯ ಬರೆಯಬಹುದು ಎಂಬ ಮುಂದಾಲೋಚನೆ...! - ಜಿ.ಕೆ. ದಳವಾಯಿ
3.    ಸಲಿಂಗಕಾಮಕ್ಕೆ ಅನುಮತಿ ನೀಡದ ದೇಶದಲ್ಲಿ ನಾನಿರಲಾರೆ!
    - ಶರಣ್ ಎಲ್.ಬಿ.ಡಬ್ಲ್ಯೂ. ಹಾವೇರಿ
4.    ಶ್! 'ಇವರಿಬ್ಬರಿಎಆಘ' ಏನೂ ಅನ್ನೋ ಹಾಗಿಲ್ಲ!!
    - ಗಣೇಶ ದೇಸಾಯಿ, ಬೆಂಗಳೂರು
5.    'ಅವನ ಗಂಡ', 'ಅವಳ ಪ್ರಿಯತಮೆ' ಎಂದೆಲ್ಲ ಹೊಸ ಕೃತಿಗಳನ್ನು ರಚಿಸುವ ಬಯಕೆ ಇರಬಹುದಲ್ಲ!
    - ಬಾಲಕೃಷ್ಣ ಎಂ., ಮೈಸೂರು



-ಎಸ್.ವಿ. ಪದ್ಮನಾಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement