ಪೆಂಟಗಾನಲ್ಲಿ ತಮ್ಮಾ- ತಿಮ್ಮಾ!
ತಿಮ್ಮಾ: ಸರ್ ನಮಸ್ತೆ... ನಾವು ಇಂಟ್ರೊಡ್ಯೂಸ್ ಮಾಡಕೋತೇವಿರಿ...
ಒಬಾಮಾ: ಬೇಡ... ಬೇಡ... i know... ನೀವು ತಿಮ್ಮಾ... ಇವರು ತಮ್ಮಾ... ನಿಮ್ಮ ಮೇಲ್ It khullamkullabevubella@gmail.com... ನಿಮ್ಮ ಫೋನ್ ನಂ. ್ಢ11920110311... ನೀವು ಸಿಲಿಕಾನ್ ವ್ಯಾಲಿಯಲ್ಲಿದಿರಾ... ಅಲ್ವಾ?
ತಮ್ಮಾ: ಎಲ್ಲ ಬರೋಬ್ಬರಿ ಐತಲರಿ... ಹ್ಯಾಂಗ ಗೊತ್ತಾತು?
ಒಬಾಮಾ: ನಮ್ಮ ಏಜನ್ಸಿ ಹಾಗಿದೆ... ಎಲ್ಲ ಗೊತ್ತಾಗುತ್ತೆ!
ತಿಮ್ಮಾ: ಹೌದ ಬಿಡರಿ. ನಮ್ಮ ಅಡ್ಡ ಉದ್ದ ಸೇರಿ ಎಲ್ಲ ಗೊತ್ತಿರಬೇಕು ನಿಮಗಡಡ...
ಒಬಾಮಾ: ya... ya... ನೀವು ಇಂಟರ್ವ್ಯೂ ಶುರುಮಾಡಿ.
ತಮ್ಮಾ: ಥ್ಯಾಂಕ್ಯು ಸರ್...
(ಅಷ್ಟರಲ್ಲೇ ಒಬಾಮಾನ ಅಸಿಸ್ಟೆಂಟೊಬ್ಬ ಬಂದು ಅವರ ಕಿವಿಯಲ್ಲಿ ಏನೋ ಹೇಳುವನು)
ಒಬಾಮ: sorry guys... ಹೋಗಬೇಕು. ಅದ್ಯಾರೋ ನನ್ನ ಫೇಸ್ಬುಕ್ ಅಕೌಂಟ್ ಹ್ಯಾಕ್ ಮಾಡಿದ್ದಾರಂತೆ...
ತಿಮ್ಮಾ: ಹೌದಾ ಸರ್.... ಅಧ್ಯಾಕಂಗ್ ಹ್ಯಾಕ ಮಾಡಿದರು?
ಒಬಾಮ: ಅದನ್ನ ತಿಳಕೊಳ್ಳಬೇಕು ಅಂತ ಹೋಗ್ತಾಯಿದ್ದೆ...
ತಮ್ಮಾ: ಆಗಿದ್ದ ಆಗಿ ಹೋಗಲಿ ಬಿಡ್ರಿ ಸರ್... ಅಷ್ಟ್ಯಾಕ್ ಸೀರಿಯಸ್ ಆಗ್ತಿರಿ?
ಒಬಾಮಾ: ಅಂದ್ರೆ ತಿಳಕೊಳ್ಳೋದು ಬೇಡ ಅಂತೀರಾ?
ತಿಮ್ಮಾ: ಅಲ್ಲ ಸರ್ ಜಗತ್ತಿನಾಗಿರೋ ಎಲ್ಲ ಫೋನು, ಫೇಸ್, ಇಮೇಲ್ ಅಕೌಂಟು ಎಲ್ಲಾನೂ ನಿಮ್ಮ ಮಂದಿ ಟ್ಯಾಪ್ ಮಾಡ್ತಾರ...
ತಮ್ಮಾ: ನಾವು ಅದನ್ನ ನೀವು ಹ್ಯಾಂಗ ಮಾಡ್ತೀರಿ ಅಂತ ತಿಳಕೊಂಡೆವಿರಿ...
ಒಬಾಮಾ: (ಸುಮ್ಮನಿದ್ದು ತಲೆ ಕೆರೆದುಕೊಳ್ಳುವರು)
ತಮ್ಮಾ: ನಮ್ಮಲ್ಲೆ ಹಿರೇರು ಹೇಳ್ಯಾರು, ಆದದ್ದೆಲ್ಲ ಒಳ್ಳೇದಕ್ಕ ಅಂತ...
ತಿಮ್ಮಾ: ಮತ್ತ ನಮ್ಮ ಭಗವತ್ಗೀತಾದಾಗ ಸ್ಪಷ್ಟ ಬರದಾರ ಆಗೋದನ್ನು ತಪ್ಪಿಸಿಲಿಕ್ಕ ಆಗುದಿಲ್ಲ ಅಂತ....
ಒಬಾಮ: ಅಂದ್ರೆ ಏನೇನು worry ಬೇಡವಾ...
ತಮ್ಮಾ: Don't worry ಮಾಡಬ್ಯಾಡರಿ...
ತಿಮ್ಮಾ: ಆದರ ಒಂದು ಹೇಳರಿ ಸರ್... ಇಂಗ್ಲಿಷಿನ್ಯಾಗ ಫೋನ್ ಟ್ಯಾಪ್ ಆಗಿದ್ದನ್ನ ನೀವು, ನಿಮ್ಮ ದೇಶದವರು ತಿಳಕೂಬಹುದು, ನಮ್ಮ ಲೋಕಲ್ ಭಾಷಾದ್ದು ಹ್ಯಾಂಗ್ ತಿಳಕೂತಿರಿ...
ಒಬಾಮಾ: ಓ ಅದಕ್ಕೆಲ್ಲ ಪೆಂಟಗಾನಲ್ಲಿ ಎಕ್ಸ್ಪರ್ಟ್ ಇದಾರೆ...
ತಿಮ್ಮಾ: ಅಂದರ ತೆಲುಗುಕ್ಕ ಒಬ್ಬರು, ಗುಜರಾತಿಗೆ ಒಬ್ಬರು... ಕನ್ನಡಕ್ಕ ಒಬ್ಬರು...
ಒಬಾಮಾ: ಯೆಸ್ ಯೆಸ್...
ತಮ್ಮಾ: ಹವ್ಯಕ ಮಾಣಿ ಭಾಷಾಕ್ಕ ಯಾರಿದ್ದಾರ ಸರ್?
ತಿಮ್ಮಾ: ಅದ್ಯಾಕ ಬೇಕೊಲೆ...?
ತಮ್ಮಾ: ಯಾಕಂದರ ಹೆಚ್ಚು ಕಡಿಮೆ ಕರ್ನಾಟಕದ ಜರ್ನಲಿಸಂನ್ಯಾಗ ಅವರ ಅದಾರಪಾ... ಎಲ್ಲಾದರಾಗೂ ಹೆಡ್ ಅವರಡಡ...
ತಿಮ್ಮಾ: ಹೋಗಲಿ ಬಿಡಲೆ ಯಾರಿದ್ದರೇನು? ನಿಂ... ಹವ್ಯಕ ಹುಡುಗರಿಗೆ ಕನ್ಯಾ ಸಿಗಲೊಲ್ಲವು... any solution ಸರ್...
ಒಬಾಮಾ: ನನ್ನ ಹತ್ರ ಏನೂ ಸಲುಷನ್ ಇಲ್ಲ... ಆದರೆ ಅದನ್ಯಾಕೆ ನನ್ನನ್ನು ಕೇಳ್ತೀರಾ?
ತಮ್ಮಾ: ಯಾಕಂದರ ಸಿಗಲಾರದ್ದನ್ನೆಲ್ಲ ನೀವು ಹುಡುಕಿ ತಗೀತಿರಲಾ... ಒಬಾಮಾನ್ನ ನೀವು ಹುಡುಕಿದಿರಿ...
ತಿಮ್ಮಾ: ಮತ್ತೆ ನಿಮ್ಮ ಸೈನಿಕರು ಒಬಾಮಾ ಬಾಯಿ, ಕಿವಿ, ಮೂಗು ಎಲ್ಲ ಕಡೆ ಬಾಂಬ ಹುಡುಕಿದರು...
ತಮ್ಮಾ: ವಿಡಿಯೋ ನೋಡೆವರಿ ಸರ್... ಭಾರಿ ಪ್ರೊಫೆಷನಲ್ ನಿಮ್ಮ ಮಂದಿ ಅದಕ್ಕ ಹವ್ಯಕ ಹುಡುಗರಿಗೆ ಕನ್ಯಾ ಹುಡುಕತಾರೇನು ಅಂತ!
ಒಬಾಮಾ: I will try my best...
ತಿಮ್ಮಾ: ಸರ್ ಹ್ಯಾಂಗಾ ಮಾಡಿ ಇದನ್ನೊಂದು ಮಾಡಲೇಬೇಕು. ನಿಮಗೆ ಎಲ್ಲ ಗೊತ್ತು ಸರ್... ಟ್ಟಡಡಿ ್ಡಠಜಛಡಿಜಜ ನೀವು...
ತಮ್ಮಾ: ಹೌದು ಸರ್ ದಾವುದ ಎಲ್ಲಿದ್ದಾನೆ ಅಂತ ಗೊತ್ತು. ದೇವಯಾನಿ ಸ್ಟೋರಿ ಫುಲ್ ಗೊತ್ತು. ಮೋದಿಯವರಿಗೆ ವೀಸಾ ಯಾಕ ಕೊಡುದಿಲ್ಲ ಅಂತನೂ ಗೊತ್ತು.
ಒಬಾಮಾ: ಥ್ಯಾಂಕ್ ಯು.... ಥ್ಯಾಂಕ್ ಯು... ನಮ್ಮ ಬಗ್ಗೆನೂ ನೀವು ತುಂಬಾ ತಿಳಕೊಂಡಿದಿರಿ. ಇನ್ನು ನಿಮಗೆ 'ಒಬಾಮಾ ಕೇರ್' ಬಗ್ಗೆ ಹೇಳ್ತೀನಿ.
(ಮತ್ತೊಬ್ಬ ಅಸಿಸ್ಟೆಂಟ್ ಬಂದು ಒಬಾಮಾನ ಕಿವಿಯಲ್ಲಿ ಏನೋ ಹೇಳುವನು)
ಒಬಾಮಾ: ನಮ್ಮ ದೇಶ ಎಷ್ಟು ಮುಂದುವರೆದದ್ದು ಅಂತ ನಿಮಗೆ ತಿಳಿಸಿಕೊಡೋದಕ್ಕೆ ಒಂದು ಡೆಮೋ ಇದೆ. ಬನ್ನಿ ನನ್ನ ಜೊತೆ...
ತಿಮ್ಮಾ: ನಿಮ್ಮ ವೈಟ್ಹೌಸ್ ಅಂಗಳ ಭಾಳ ಮಸ್ತ್ ಐತಿ ಬಿಡ್ರಿ...
ತಮ್ಮಾ: ಆದರ ಇಷ್ಟು ಎತ್ತಎತ್ತರ ಗಿಡಗಳನ್ನ ಯಾಕ್ ಹಚ್ಚಿರಿ... ದೂರಿಂದ ನಿಮ್ಮ ಛಂದ ಬಿಲ್ಡಿಂಗ್ ಕಾಣಂಗಿಲ್ಲ...
ಒಬಾಮಾ: ಅದು ಯಾರಿಗೂ ಕಾಣಿಸಬಾರದು ಅಂತಲೇ ಹೀಗೆ ಮರಗಳನ್ನ ಬೆಳೆಸಿರೋದು...
ತಮ್ಮಾ: ಕಂಡರ ಏನಾಕ್ಕೆತೈತಿ ಸರ್..?
(ಒಬಾಮಾ ಹೇಗೆ ಉತ್ತರಿಸಬೇಕೆಂದು ಯೋಚಿಸುತ್ತಿರುವಾಗಲೇ... ತಿಮ್ಮಾ ಹೇಳಿಬಿಡುತ್ತಾನೆ)
ತಿಮ್ಮಾ: ಕೆಲವು ಮಂದಿ ಇಮಾನ ತಂದು ಹಾಯಿಸಿ ಬಿಡ್ತಾರಲೇ...
ಒಬಾಮಾ: ಸರಿ ಮಿ. ತಿಮ್ಮಾ ಆ್ಯಂಡ್ ತಮ್ಮಾ... ಇದೋ ನೋಡಿ ಈ ಭೂಮಿಯನ್ನು ಅಗೇದಿದೀವಿ.
ತಿಮ್ಮಾ: ಹೌದ ಬಿಡರಿ. ಇರಬೇಕು ಈ ನೂರಡಿ... ಏನೂ ಕಾಣೂದಿಲ್ಲ ಕತ್ತಲಿ ಗವಿ!
ಒಬಾಮಾ: ಲೈಟ್ ಬಿಡ್ತೀವಿ... ನೀವಿಬ್ಬರೂ ಅದರಲ್ಲಿಳಿದು ಅಲ್ಲಿ ಏನಿದೆ ಅಂತ ಹೇಳ್ತೀರಾ?
ತಿಮ್ಮಾ: ಯಾಕಾಗಲೊಲ್ಲದು... ಹೋಗ್ತೀವಿ ಸಾರ್...
(ಇಬ್ಬರೂ ಇಳಿದು ತಳ ತಲುಪಿದರು. ಒಂದೆರಡು ಮೂರು ವೈರ್ ತುಣುಕುಗಳು ಸಿಕ್ಕವು. ಮೇಲೆ ಬಂದು ಹೇಳಿದರು)
ತಮ್ಮಾ: ಈ ಒಂದೆರಡು ವೈರು ಸಿಕ್ಕವು ಸಾರ್... ಹಳೇಕಾಲದಾಗ ಹುಗದದ್ದು ಇರಬೇಕು.
ಒಬಾಮಾ: ನೋಡಿದರಾ... ನೂರು ಅಡಿ ಅಂದರೆ ನೂರು ವರುಷ. ನೂರು ವರುಷದ ಹಿಂದೆನೇ ನಮ್ಮ ದೇಶ ಎಷ್ಟು ಮುಂದುವರಿದಿತ್ತು ಅಂದರೆ ಆಗಲೇ ನಾವು ಕೇಬಲ್ ಬಳಸಿದ್ವಿ.
ತಿಮ್ಮಾ: ಏಯ್, ಹೌದಾ ಬಿಡರಿ ಸರ್... ಭಾಳ ಮುಂದುವರದದ್ದು ನಿಮ್ಮ ದೇಶ...
ಒಬಾಮಾ: ಇದಕ್ಕಿಂತ ಹೆಚ್ಚು ನನಗೇನು ಹೇಳೂದಿಲ್ಲ. ನೀವಿನ್ನು ಹೊರಡಬಹುದು...
ತಮ್ಮಾ/ ತಿಮ್ಮಾ: ಥ್ಯಾಂಕ್ಯು ಬರತೀವಿ. ಆದರ, ನಮ್ಮ ದೇಶಕ್ಕೂ ಬರಬೇಕ ಸರ ನೀವು...
ಒಬಾಮಾ: ಬರತೀನಿ. ಖಂಡಿತಾ. ಐ ವಿಲ್ ಕಮ್, ಆ್ಯಂಡ್ ಕಾಲ್ ಯು ಬೋತ್! ಬೈ...
(ಮುಂದೆ ಕೆಲವು ವರುಷಗಳಲ್ಲಿ ಒಬಾಮಾ ಇಂಡಿಯಾಕ್ಕೆ ಬಂದರು. ತಮ್ಮಾ/ ತಿಮ್ಮನಿಗೆ ಫೋನು ಬಂತು)
ಒಬಾಮಾ: ಹೌ ಆರ್ ಯು ಬಾಯ್ಸ್?
ತಿಮ್ಮಾ: ಫೈನ್ ಸರ್. ನೀವು ಹೇಗಿದ್ದೀರಿ ಸರ್... ಹೆಂಡ್ತಿ ಮಕ್ಕಳು...?
ಒಬಾಮಾ: ಚೆನ್ನಾಗಿದಾರೆ...
ತಿಮ್ಮಾ: ಮೊನ್ನೆ ಮಕ್ಕಳಿಗೆ ಡೇಟಿಂಗ್ ಬಗ್ಗೆ ತಿಳಿಸಿಕೊಟ್ರಿ ಅಂತ ಸುದ್ದಿ ಇತ್ತು ಸರ್...
ಒಬಾಮಾ: ಓ ಅದಾಡಡ... ಹೌದು ಹೌದು. ಮಕ್ಕಳು ಏನೇ ಮಾಡಿದರೂ ಸರಿಯಾಗಿ ಮಾಡ್ಬೇಕಲ್ಲವಾ...?
ತಿಮ್ಮಾ: ಹೌದ ಬಿಡರಿ... ಅವ್ವ ಅಪ್ಪ ಮಾಡಿದ ತಪ್ಪು ಮಕ್ಕಳು ಮಾಡಬಾರದು...
ಒಬಾಮಾ: ನೀವು ಇಂಡಿಯಾಕ್ಕೆ ಬಂದಾಗ ಏನೋ ಹೇಳ್ತೀವಿ ಅಂತ ಹೇಳಿದ್ರಿ...
ತಮ್ಮಾ: ಅದಾಡಡ... ಸರ್... ನಮ್ಮ ದೇಶ ಎಷ್ಟು ಮುಂದವರಿದಿದೆ ಅಂತ ನಿಮಗೆ ಡೆಮೋ ಕೊಡಬೇಕು ಅಂತ ಇದ್ದವಿ ಸರ್...
ಒಬಾಮಾ: ಓ ಅದಾ... ಎಲ್ಲ ರೆಡಿ ಇದೆಯಾ...
ತಿಮ್ಮಾ: ಹೌದು ಸರ್...
(ಬಯಲು ಪ್ರದೇಶಕ್ಕೆ ಬರುವರು)
ಒಬಾಮಾ: ಓ ಸೇಮ್. ನೀವೂ ಡಿಗ್ ಮಾಡಿದಿರಾ? (ಅಂತ ತಮ್ಮ ಪೆನ್ ತೆಗೆದು ಅದರ ಬಟನ್ ಒತ್ತಿದರು. ಅದರಿಂದ ಒಂದು ಲೈಟು ತೆಗ್ಗಿನ ಒಳಗೆ ನುಗ್ಗಿತು. ಪೆನ್ನಿನ ಮೇಲೆ 400 ಫೀಟ್ ಅಂತ ಅಂಕಿ ಮೂಡಿತು) ನಾನೂರು ಫೀಟ್ ಆಳ ಇದೆ...
ತಮ್ಮಾ: ಹೌದು ಸರ್... ನೀವು ದಯವಿಟ್ಟು ಕೆಳಗಿಳಿದು ಪರೀಕ್ಷಿಸಬೇಕು ಸರ್...
(ಒಬಾಮಾ ಇಳಿಯುವರು. ತಳದಲ್ಲಿ ಹುಡುಕುವರು. ಏನೂ ಸಿಗುವುದಿಲ್ಲ. ಸುಮಾರು ಸಮಯದ ನಂತರ ಸುಸ್ತಾಗಿ ಮೇಲೆ ಬರುವರು)
ಒಬಾಮಾ: ಅಲ್ಲಿ ಏನೇನೂ ಇಲ್ಲ.
ತಿಮ್ಮಾ: ಸರ್, ನಾನೂರು ಫೀಟ್ ಅಂದರ...
ಒಬಾಮಾ: 400 ಇಯರ್ಸ್ ಅಂತ ಅರ್ಥ ಅಲ್ಲವೇ?
ತಮ್ಮಾ: ಕರೆಕ್ಟ್ ಸರ್...
ಒಬಾಮಾ: ಆದರೆ, ಅಲ್ಲೇನು ಇಲ್ಲವಲ್ಲ!!
ತಿಮ್ಮಾ: ಅದೇ ನಾನೂರು ವರುಷದ ಹಿಂದೆ ನಮ್ಮ ದೇಶ ಎಷ್ಟು ಮುಂದುವರಿದಿತ್ತು ಅಂದರೆ ಆಗಲೇ ನಮ್ಮದು ವೈರ್ಲೆಸ್ ಸರ್!
(ಒಬಾಮಾ ಏನೂ ಮಾತನಾಡ್ಲಿಲ್ಲ. ತಮ್ಮಾ ತಿಮ್ಮಾ ಗಂಭೀರವಾಗಿದ್ದರು ಅಷ್ಟ... ಬೀಳ್ಕೊಡುಗೆಯಂದು ಹ್ಯಾಪಿ ನ್ಯೂ ಇಯರ್ ಅಂದರು...)
-ಯಶವಂತ ಸರದೇಶಪಾಂಡೆ
allthebest01@gmail.com