ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಮೊಬೈಲಿಲ್ಲದ ಊರಿನಲ್ಲಿ...

Vishwanath S
Updated On : 28 Dec 2013, 4:23 am

ಒಂದೂರಲ್ಲಿ ರಮೇಶ್ ಮತ್ತು ಸುರೇಶ್ ಅಂತ ಇಬ್ಬರು ಗೆಳೆಯರು ದೂರವಾಣಿ ಬೆಲೆ ಹೆಚ್ಚಾಯಿತೆಂದು ಇಬ್ಬರು ಒಂದು ಪಾರಿವಾಳ ಬೆಳೆಸ್ತಾರೆ. ಇವನಿಗೆ ಕಷ್ಟ ಬಂದಾಗ ಅವನು, ಅವನಿಗೆ ಕಷ್ಟ ಬಂದಾಗ ಇವನು ಚೀಟಿ ಬರೆದು ಪಾರಿವಾಳದ ಕಾಲಿಗೆ ಕಟ್ಟಿ ಕಳುಹಿಸುವ ಮೂಲಕ ಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ಒಂದು ದಿನ ರಮೇಶ್‌ನಿಂದ ಪಾರಿವಾಳ ಬಂತು. ಆದರೆ, ಕಾಲಿಗೆ ಯಾವುದೇ ಸಂದೇಶ ಕಟ್ಟಿರಲಿಲ್ಲ. ಅದಕ್ಕೆ ಸುರೇಶ್ ರಮೇಶನಿಗೆ 'ಏನಾಯ್ತು?' ಅಂತ ವಿಚಾರಿಸಿ ಸಂದೇಶ ಕಳುಹಿಸಿದ. ಅದನ್ನು ನೋಡಿ ರಮೇಶ್ ಹೀಗೆ ಸಂದೇಶ್ ಕಳುಹಿಸಿದ; 'ಇಲ್ಲ ನೀನು ಇದ್ಯೋ ಇಲ್ವೋ ಅಂತ ಮಿಸ್ಡ್ ಕಾಲ್ ಕಳುಹಿಸಿದೆ'!
- ಸುಬ್ರಹ್ಮಣ್ಯ ಸ್ವಾಮಿ
ಎಸೆದ ಕಲ್ಲು
ತಮಾಷೆಗೆ ಎಸೆದ ಕಲ್ಲು
ಉದುರಿಸಿತ್ತು ಹುಡುಗಿಯ ಹಲ್ಲು
ಹತ್ತಿರ ಹೋಗಿ ಸಾರಿ ಕೇಳಿದಾಗ
ಆಕೆ ಹೇಳಿದ್ಲು ಪರ್ವಾಗಿಲ್ಲ ಬಿಡಿ
ಅದು ಹುಳುಕ್ಹಲ್ಲು!
=
ಮಂತ್ರವಾದಿ: ಭಕ್ತಾ... ನಾನು ಕೊಟ್ಟ ತಾಯಿತ ಹೇಗಿದೆ?
ಕೋಲ್ಯ: ಸ್ವಾಮಿ... ಹೆಂಡತಿ ನನ್ನ ಪ್ರೀತಿಸುವ ಬದಲು ಪಕ್ಕದ ಮನೆಯವನನ್ನು ಪ್ರೀತಿಸ್ತಿದ್ದಾಳೆ.
ಮಂತ್ರವಾದಿ: ಓಹ್... ಎಲ್ಲೋ ಸೈಡ್ ಎಫೆಕ್ಟ್ ಆಗಿದೆ.
- ಅಬ್ದುಲ್ ಜಮೀರ್
ದಂಡ ಅಂದ್ರೆ
ತಪ್ಪು ಮಾಡಿದ್ದಕ್ಕೆ
ಟ್ಯಾಕ್ಸ್.
ಟ್ಯಾಕ್ಸ್ ಅಂದ್ರೆ
ಏಳಿಗೆ ಹೊಂದಿದ್ದಕ್ಕೆ
ದಂಡ!
- ಎಸ್. ಅರವಿಂದ್
ಹರೀಶ್ ಪುರುಷೋತ್ತಮ್ ಪೋಸ್ಟ್ ಮಾಡಿದ್ದು...
ಫೋಟೋ ಫೈಲ್‌ನೇಮ್- ಝಿಜಟ್ಜ್ಡಿ
=
ಮೇಸ್ಟ್ರು: 'ಕ' ಇರೋದು 'ಕೊ' ಆಗಬೇಕಾದ್ರೆ ಕೊಂಬು ಕೊಡ್ಬೇಕು.
ವಿದ್ಯಾರ್ಥಿ: 'ಚ' ಇರೋದು 'ಚೊ' ಆಗಬೇಕಾದ್ರೆ ಚೊಂಬು ಕೊಡ್ಬೇಕಾ ಟೀಚರ್...?
- ಮಂಜುನಾಥ ವೈ.ಎಚ್.

ಒಬ್ಬ ಕುಂಟ ಭಿಕ್ಷುಕ ದೇಗುಲದೆದುರು 'ಭಗವಂತನ ಹೆಸರಲ್ಲಿ ಏನಾದರೂ ಕೊಡಿ' ಎಂದು ದಿನವಿಡೀ ಬೇಡುತ್ತಿದ್ದ. ದಿನದ ಅಂತ್ಯದಲ್ಲಿ ಆತನಿಗೆ ದಕ್ಕಿದ್ದು, ಐವತ್ತು ಪೈಸೆ, ಒಂದು ರುಪಾಯಿ, ಎರಡು ರುಪಾಯಿ... ಹೀಗೆ ಸುಮಾರು ಇಪ್ಪತ್ತು ರುಪಾಯಿ. ಸಂಜೆಯಾದೊಡನೆ ಬಾರ್ ಎದುರು ಕೂತಾಗ ಆತನಿಗೆ ಸಿಕ್ಕಿದ್ದು, ಹತ್ತು ರುಪಾಯಿ, ಇಪ್ಪತ್ತು ರುಪಾಯಿ, ಐವತ್ತು ರುಪಾಯಿ... ಹೀಗೆ ಹತ್ತಾರು ನೋಟುಗಳು. ಆಗ ಆತ ದೇವರಿಗೆ ಕೈಮುಗಿದು ಪ್ರಾರ್ಥಿಸಿದ: 'ಓ ದೇವರೇ ನಿನ್ನ ವಿಳಾಸ ಒಂದು ಕಡೆ, ನೀನಿರುವುದೇ ಮತ್ತೊಂದು ಕಡೆ'.
=
ಒಂದು ಅಂಗಡಿಯಲ್ಲಿ ಆಫರ್ ಹೀಗಿತ್ತು; '1000 ರುಪಾಯಿಗೆ ಏನೇ ತಗೊಂಡರೂ ವಾಚ್ ಫ್ರೀ'.
ಮರುದಿನ ಅಂಗಡಿಯಲ್ಲಿ ಗಲಾಟೆ. ಪೊಲೀಸರು ಬಂದರು.
ಪೊಲೀಸ್: ಯಾಕೆ ಗಲಾಟೆ?
ಅಂಗಡಿಯವ: ನೋಡಿ ಸಾರ್, ಈ ಕೋಲ್ಯ 1000 ರುಪಾಯಿಗೆ ಚಿಲ್ಲರೆ ತಗೊಂಡ್ ವಾಚ್ ಫ್ರೀ ಕೇಳ್ತಿದ್ದಾನೆ!
=
ಹುಡುಗಿ: ಏನ್ರೀ, ಬುಲ್ಡೋಜರ್ ತಂದಿದ್ದೀರಲ್ಲ? ಏನ್ ವಿಶೇಷ?
ಹುಡುಗ: ಮತ್ತೆ ನೀನೇ ಹೇಳಿದ್ಯಲ್ಲ, ನಾವು ಪ್ರೀತಿಸಿ ಮದುವೆ ಆಗೋಕ್ಕೆ ದೊಡ್ಡ ತಡೆಗೋಡೆ ಇದೆ ಅಂತ. ಎಲ್ಲಿ ತೋರ್ಸು, ಅದನ್ನು ಒಡೆದು ಬಿಡೋಣ...
=

ತಿಮ್ಮ: ದಿನಾ ಹೀಗೆ ಕ್ವಾಟ್ರು ಕುಡೀತಿರ್ತಿಯಲ್ಲ, ಊಟಕ್ಕೆ ಏನ್ ಮಾಡ್ತೀಯ?
ಗುಂಡ: ಒಂದು ತಿಂಗಳಲ್ಲಿ 30 ಖಾಲಿ ಕ್ವಾಟ್ರು ಬಾಟಲಿ ಮಾರಿದರೆ 30 ರುಪಾಯಿ ಬರುತ್ತೆ. ಹೆಂಗೂ ನಮ್ಮ ಸಿದ್ದರಾಮಣ್ಣ 1 ರುಪಾಯಿಗೆ 1 ಕೆ.ಜಿ. ಅಕ್ಕಿ ಕೊಡ್ತಾರೆ... 30 ಕೆ.ಜಿ. ಅಕ್ಕಿ ತಗೋತೀನಿ!
- ರಮೇಶ್ ಆರ್. ಗೌಡ
ಯಾರಿಗೋ ಶಿಕ್ಷೆ!
ಟೀಚರ್: 'ಯಾರದೋ ತಪ್ಪಿಗೆ ಇನ್ನ್ಯಾರಿಗೋ ಶಿಕ್ಷೆ' ಈ ಮಾತಿಗೊಂದು ಉದಾಹರಣೆ ಕೊಡು.
ಕೋಲ್ಯ: ಹುಡುಗಿಗೆ ಲೈನ್ ಹೊಡೆದಿದ್ದು ಕಣ್ಣು, ಉದುರಿದ್ದು ಹಲ್ಲು.

    ಎಷ್ಟೇ ಅಂದವಾಗಿರೋ ಹೂ ಬಾಡಿ ಹೋಗಲೇಬೇಕು, ಎಷ್ಟೇ ಅಂದವಾಗಿರೋ ಫಿಗರ್ ಆಂಟಿ ಆಗಲೇಬೇಕು.
    ನಿದ್ರೆಯಲ್ಲಿ ನಿಮ್ಮನ್ನು ನೆನಪಿಸಿಕೊಳ್ಳುವವಳು ಪ್ರೇಯಸಿ, ನಿದ್ರಿಸದೆ ನಿಮ್ಮನ್ನು ನೆನಪಿಸಿಕೊಳ್ಳುವವಳು ತಾಯಿ!
    ಮದ್ಯದಲ್ಲಿ ಸ್ತ್ರೀ ಹಾರ್ಮೋನುಗಳಿರಬೇಕು. ಕುಡಿದಾಗ ನಾನು ಹೆಚ್ಚು ಮಾತಾಡ್ತೀನಿ!
    ಹುಡ್ಗೀರು ನೋಡೋದಿಕ್ಕೆ ಚೆನ್ನಾಗಿರ್ಬೇಕು. ತೆಳ್ಳಗೇನು ನೋಕಿಯಾ ಚಾರ್ಜರ್ರೂ ಇರುತ್ತೆ!
    ಶೋಕಿಗೆ ಮೂಲ ಹೆಣ್ಣು, ಶೋಕದ ಮೂಲ ಹೆಣ್ಣು.
- ನಾಗರಾಜ್ ಎಚ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement