ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಸಪ್ತಚಕ್ರಗಳ ಚೈತನ್ಯ

Vishwanath S
Updated On : 28 Dec 2013, 4:41 am

ಯೋಗ ಮಾಡಲು ಬಿಡುವಿಲ್ವೇ? ಚಿಂತೆಬಿಡಿ, ಸರಳವಾಸ್ತು ಇದೆ!
ಗುರೂಜಿಯವರ ಪ್ರಕಾರ ಕೇವಲ ತಮ್ಮ ಮನೆ ಅಥವಾ ಉದ್ಯೋಗ ಸ್ಥಳಕ್ಕೆ ಸರಳವಾಸ್ತು ಅಳವಡಿಸಿಕೊಂಡರೆ ಮಾತ್ರ ಸಂಪೂರ್ಣ ಧನಾತ್ಮಕ ಶಕ್ತಿ ಪಡೆಯಬಹುದೆಂದು ತಿಳಿದಿದ್ದಾರೆ. ಹಾಗಾದರೆ ಧನಾತ್ಮಕ ಶಕ್ತಿ ಹೇಗೆ ಪಡೆಯಬಹುದು? ಅದನ್ನು ಪಡೆಯಲು ಜನರು ಏನೇನು ಮಾಡುತ್ತಿದ್ದಾರೆ? ಅದು ಯಾವುದರಿಂದ ದೊರೆಯುತ್ತದೆ ಎಂಬ ಪ್ರಶ್ನೆಗಳಿಗೆ ಈ ವಾರದ ಸಂಚಿಕೆಯಲ್ಲಿ ಉತ್ತರ ಇದೆ.
ಗುರೂಜಿಯವರ ಸರಳವಾಸ್ತುವಿನಲ್ಲಿ ಕಂಡುಬರುವ ಇನ್ನೊಂದು ವಿಶೇಷ ಮನುಷ್ಯನಿಗೆ ಚೈತನ್ಯಗೊಳ್ಳುವ ಏಳು ಚಕ್ರಗಳು. ಪ್ರಸ್ತುತ ಎಷ್ಟೋ ಜನರು ತಮ್ಮ ಸಪ್ತ ಚಕ್ರಗಳನ್ನು ಚೈತನ್ಯಗೊಳಿಸಲು ಮೆಡಿಟೇಶನ್, ಯೋಗ, ಸಿದ್ಧಿ ಸಮಾಧಿಯೋಗ, ರೇಖಿ ಮುಂತಾದವುಳನ್ನು ಮಾಡುತ್ತಾರೆ. ಇವುಗಳನ್ನು ಮಾಡಲು ತಮ್ಮ ಇಡೀ ದಿನದಲ್ಲಿ ಎರಡು ಮೂರು ಗಂಟೆ ಕಳೆಯುತ್ತಾರೆ. ಹೀಗೆ ಚಕ್ರಗಳನ್ನು ಚೈತನ್ಯಗೊಳಿಸಲು ಬಿಡುವಿಲ್ಲದ ಇಂದಿನ ಜಗತ್ತಿನಲ್ಲಿ ತಮ್ಮ ಅಮೂಲ್ಯವಾದ ಸಮಯ ವ್ಯಯಮಾಡುತ್ತಾರೆ. ಆದರೆ, ಸರಳವಾಸ್ತುವಿನ ಮೂಲಕ ಸಮಯದ ವ್ಯಯ ತಡೆಯಬಹುದು. ಅದು ಕೂಡ ಸಪ್ತ ಚಕ್ರಗಳ ಚೈತನ್ಯಗೊಳಿಸುವುದರಿಂದ ಸಾಧ್ಯ.
ಆ ಸಪ್ತ ಚಕ್ರಗಳು...
ಮೂಲಾಧಾರ:  ಆಂಡ್ರಿನಲ್ ಗ್ರಂಥಿಯ ಕಾರ್ಯ ಮಾಡುತ್ತದೆ. ಧೈರ್ಯ, ಮಾನವೀಕ, ಆತ್ಮವಿಶ್ವಾಸದಂಥ ಕಾರ್ಯಗಳಿಗೆ ಉಪಯೋಗವಾಗುವಂತೆ ಮಾಡುತ್ತದೆ.
ಸ್ವಾಧಿಷ್ಠಾನ:  ಅಂಡಾಶಯ ಮತ್ತು ವೃಷಣಗಳ ಕಾರ್ಯವೈಖರಿ ಚೈತನ್ಯಗೊಳ್ಳುವಂತೆ ಮಾಡಿ, ಉತ್ಸಾಹ, ರಚನಾತ್ಮಕ, ಸಂತೋಷದಿಂದ ಇರಲು ಸಹಾಯ ಮಾಡುತ್ತದೆ.
ಮಣಿಪುರ:  ಪಿತ್ತಜನಕಾಂಗ, ಹೊಟ್ಟೆ, ಸಣ್ಣ ಕರುಳಿನ ಕಾರ್ಯ ಚೈತನ್ಯಗೊಳಿಸುತ್ತದೆ. ಆತ್ಮವಿಶ್ವಾಸ, ಉತ್ತಮ ಮನೋಭಾವ ಬೆಳೆಸಲು ಸಹಾಯ ಮಾಡುತ್ತದೆ.
ಅನಹತ:  ಎದೆ ಮತ್ತು ಹೃದಯ ಸಂಬಂಧಿ ಕಾರ್ಯ ಚೈತನ್ಯಗೊಳಿಸುತ್ತದೆ. ಸ್ವ-ನಿಯಂತ್ರಣ, ಸಹಾನುಭೂತಿ ಹೆಚ್ಚಿಸುತ್ತದೆ.
ವಿಶುದ್ಧ:  ಗಂಟಲು ಮತ್ತು ಶ್ವಾಸಕೋಶಕ್ಕೆ ಉಪಯುಕ್ತ. ಸೃಜನಶೀಲತೆ ಹೆಚ್ಚಿಸುತ್ತದೆ.
ಅಜ್ಞ:  ಕಣ್ಣು ಮತ್ತು ಹಿಮ್ಮೆದುಳಿಗೆ ಸಂಬಂಧಿಸಿದಂತೆ ಕಾರ್ಯ ಚೈತನ್ಯಗೊಳಿಸುತ್ತದೆ. ತಲೆನೋವನ್ನು ತಡೆಯುತ್ತದೆ.
ಸಹಸ್ರಾರ: ಇದು ಮೆದುಳನ್ನು ಚೈತನ್ಯಗೊಳಿಸುತ್ತದೆ. ಖಿನ್ನತೆಯ ಬರದಂತೆ ತಡೆಯುವ ಶಕ್ತಿ ನೀಡುತ್ತದೆ.
ಸರಳವಾಸ್ತುವಿನ ಪ್ರಕಾರ ಹುಟ್ಟಿದ ಪ್ರತಿ ಮನುಷ್ಯನು ನಾಲ್ಕು ಒಳ್ಳೆಯ ಹಾಗೂ ಕೆಟ್ಟ ದಿಕ್ಕುಗಳನ್ನು ಹೊಂದಿರುತ್ತಾನೆ. ಅವುಗಳನ್ನು ಪರಿಹಾರದಲ್ಲಿ ತಿಳಿಸಿಕೊಡಲಾಗುವುದು. ಅವುಗಳನ್ನು ಉಪಯೋಗಿಸಿ ತಮ್ಮ ಒಳ್ಳೆಯ ದಿಕ್ಕಿಗೆ ತಲೆ ಮಾಡಿ ಮಲಗಿದಾಗ ರಾತ್ರಿ ಸಮಯದಲ್ಲಿ ಚಕ್ರಗಳು ಸಂಪೂರ್ಣ ಧನಾತ್ಮಕ ಶಕ್ತಿ ನೀಡುತ್ತವೆ. ಅಲ್ಲಿರುವ ಋಣಾತ್ಮಕ ಶಕ್ತಿ ಕಡಿಮೆ ಮಾಡಿ, ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ದಿನವಿಡೀ ಕೆಲಸ ಮಾಡಿ ದಣಿದ ದೇಹಕ್ಕೆ ಸಂಪೂರ್ಣ ಧನಾತ್ಮಕ ಶಕ್ತಿ ಪರಿಚಲನೆಯಾದಾಗ ಇಡೀ ದಿನವೂ ಆಯಾಸವಿಲ್ಲದಂತೆ ಲವಲವಿಕೆಯಿಂದ ಕಾರ್ಯನಿರ್ವಹಿಸಲು ಸಾಧ್ಯ ಎಂದು ಸರಳವಾಸ್ತು ಹೇಳುತ್ತದೆ. ಒಬ್ಬ ಆರೋಗ್ಯವಂತ ಮನುಷ್ಯ ಮಲಗುವ ಎಂಟೋ ಹತ್ತೋ ಗಂಟೆಗಳ ಸಮಯವು ಬಹು ಮುಖ್ಯವಾಗಿದೆ. ಇಡೀ ದಿನ ಸಂತೋಷದಿಂದ ಇರಲು ಧನಾತ್ಮಕ ಶಕ್ತಿಯನ್ನು ಪಡೆಯಲು ದೇಹದಲ್ಲಿ ಇರುವ ಸಪ್ತ ಚಕ್ರಗಳ ಚೈತನ್ಯ ಮುಖ್ಯವಾಗಿದೆ.
ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಯೋಗ, ರೇಖಿ ಮುಂತಾದವುಗಳಲ್ಲಿ ಕೇವಲ ಆರೋಗ್ಯ ಮತ್ತು ಮನಃಶಾಂತಿ ಮಾತ್ರ ಪಡೆಯಬಹುದು. ಆದರೆ, ಡಾ. ಚಂದ್ರಶೇಖರ ಗುರೂಜಿಯವರ ಪ್ರಕಾರ ಸರಳವಾಸ್ತು ಅಳವಡಿಸಿಕೊಂಡರೆ ಕೇವಲ ಆರೋಗ್ಯ ಮಾತ್ರವಲ್ಲದೇ ಶ್ರೀಮಂತಿಕೆ, ನೆಮ್ಮದಿ, ಮಕ್ಕಳ ವಿದ್ಯಾಭ್ಯಾಸ, ಪ್ರವಾಸ, ಕಾರ್ಯ ಕುಶಲತೆ, ಸಂಬಂಧ, ಮದುವೆ, ಆಸ್ತಿ ಸಂಪಾದನೆ, ಸುಖಿ ಸಂಸಾರ ಹೀಗೆ ಜೀವನದ ಪ್ರತಿಯೊಂದು ಅಂಶಗಳಲ್ಲೂ ಯಶಸ್ವಿ ಕಾರಣಬಹುದು. ಜೊತೆಗೆ ಯಶಸ್ವಿ ಕಂಡ ಎಷ್ಟೋ ಕುಟುಂಬಗಳು ತಮ್ಮ ಸಂತೃಪ್ತ ಜೀವನದ ಕುರಿತು ತಿಳಿಸಿದ್ದಾರೆ.



- ಡಾ. ಚಂದ್ರಶೇಖರ ಗುರೂಜಿ
guraji@saralvaastu.com





Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement