ಖುಷಿ

ನೆನಪು

ನೀವು ತೋರಿಸಿದ್ದು ಹಣ್ಣೆನಿಸಲಿಕ್ಕೆ
ನಾನು ಈ ಮೊದಲು ಹಣ್ಣು ನೋಡಿರಬೇಕು
ಮತ್ತು ನೋಡಿದ್ದು ನೆನಪಿರಬೇಕು
ಅದು ಕಿತ್ತಳೆಯಲ್ಲ ಸೇಬೇ ಅನಿಸಲಿಕ್ಕೆ
ನನಗೆ ಎರಡೂ ಗೊತ್ತಿರಬೇಕು
ಹಾಗೆ ನೆನಪಿರಬೇಕು

ಒಂದು ನೋಡುವಾಗ ನೆನಪಾಗಲೂ
ಬಹುದು ಇನ್ನೊಂದು
ನನ್ನನ್ನು ನೋಡಿದಾಗ ನನ್ನ ಅಪ್ಪ
ಅಥವಾ ಹಳೆಯ ಕನ್ನಡ ಸಿನೆಮಾಗಳಲ್ಲಿನ
ವಜ್ರಮುನಿ
ತಪ್ಪನ್ನಲಾಗುವುದಿಲ್ಲ
ನಿಮ್ಮ ನೋಟದ ತಪ್ಪೂ ಅದಲ್ಲ
ನಿಮ್ಮ ನೆನಪಿನದೂ ಅಲ್ಲ

ಹೇಳುತ್ತಾರೆ
ವಿಶ್ಲೇಷಣೆಗೆ ಒಗ್ಗದ ಹತ್ತು ಹಲವು ಸೂಕ್ಷ್ಮ
ಗಳಿವೆ ನಮ್ಮ ಮನಸ್ಸೊಳಗೆ
ಫ್ರಾಯ್ಡಂತಹ ಫ್ರಾಯ್ಡಿಗೂ ನಿಲುಕದ ಅವಿವರಗಳೂ ಇದ್ದಾವು

ಇವೊತ್ತು ಬೆಳಗ್ಗೆ ಟಾಯ್ಲೆಟಿನಲ್ಲಿ
ಪೇಪರುರೋಲಿನ ಸುರುಳಿ ಸೆಳೆದಾಗ
ಏನೋ ಕರ್ಮವೋ ಕಾಣೆ
ಬಳಿಕ ಎಳೆಯದೆಯೂ
ಎಳೆದೆಳೆದು ತಂತಾನೆ ಹೊಮ್ಮಿತು
ಹರಿದೂ ಹರಿಯದೆಯೆ ಹರಿಯತೊಡಗಿತು

ಅದೇ ಕಾಣದ ಕರ್ಮದ ಮೇರೆಗೆ
ಹಿಂದಾನೊಮ್ಮೆ ಆ ಪರಮಾತ್ಮ ದಯಪಾಲಿಸಿದ
ದ್ರೌಪದಿಯ ಸೀರೆ ನೆನಪಾಯಿತು

ತಲೆ ಕೆಡಿಸಿಕೊಳ್ಳುವುದೇನಿಲ್ಲ
ಜಾಸ್ತಿ ಓದಿಕೊಂಡವರು
ಈ ಕುರಿತೊಂದು ತೌಲನಿಕ ಅಧ್ಯಯನ
ಗೈದುಕೊಳ್ಳಲಿ ಬಿಡಿ

=  ನಾಗರಾಜ ವಸ್ತಾರೆ
vastarey@vastareysmdc.co.in


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ

ಬೆಂಗಳೂರಿನಿಂದ ಸಾಗರಕ್ಕೆ ಬರುತ್ತಿದ್ದ ಬಸ್‌ಗೆ ಬೆಂಕಿ; ಚಾಲಕ-ಕ್ಲೀನರ್ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಸೇಫ್, Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್