'ಐ ಲವ್‌ಯೂ' ಅನ್ನೋ ಮೆಸೇಜಿಗಿಂತ ಹೆಚ್ಚು ಕಾತರದಿಂದ ಕಾಯುವ ಇನ್ನೊಂದು ಮೆಸೇಜ್: 'ನಿಮ್ಮ ಅಕೌಂಟಿಗೆ ಸಂಬಳ ಜಮೆಯಾಗಿದೆ'!
ಕೆಲವರಿಗೆ ಬುದ್ಧಿ ಎಂಬುದು ಹಲ್ಲಿನ ರೂಪದಲ್ಲಿ ಮಾತ್ರ ಇರುತ್ತದೆ. ಅದನ್ನು ವಿಸ್‌ಡಮ್ ಟೂತ್ ಎನ್ನುತ್ತಾರೆ.
ಗಲಾಟೆ ಮಾಡಿ ಕಲ್ಲುತೂರಾಟ ನಡೆಸುವವರನ್ನು ನಾಗರೀಕತೆ ಇಲ್ಲದವರು ಅನ್ನುತ್ತಾರೆ. ಇನ್ನೂ ಸಾಫ್ಟಾಗಿ 'ಶಿಲಾಯುಗದವರು' ಅನ್ನಬಹುದು!
'ಏನೋ ಮರೆತೆ' ಎಂಬುದನ್ನು ನೆನಪಿಸೋ ಮೆದುಳು, 'ಏನು ಮರೆತೆ' ಎಂಬುದನ್ನು ಮಾತ್ರ ಯಾಕೆ ನೆನಪಿಸೋದಿಲ್ಲ?