ಖುಷಿ

ಇನ್ನೊಬ್ಬಳು ಅಮೃತಮತಿ

ಎಪ್ಪತ್ತರ ದಶಕದಲ್ಲಿ ಬಂಡಾಯದ ಮುಂಚೂಣಿಯಲ್ಲಿದ್ದ
ಕವಿಮಿತ್ರನೊಬ್ಬನ ಪುತ್ರಿ ಅಮೃತಮತಿ
ಕಾಲೇಜುದಿನಗಳಲ್ಲೇ ಬದಗನಿಗೆ ಒಲಿದದ್ದು ಹಳೆಯಕತೆ.
ಆಪ್ತಸಲಹೆಗೆಂದೇ ಕರೆತಂದ ಹುಡುಗಿಗೆ
ಕೇಳಿದ್ದೆ, ಏನಿದೆ ಅಂಥದ್ದು ಅವನಲ್ಲಿ
ಇರುವೆಲ್ಲವನು ಮೀರಲಿಕ್ಕೆ
ಹುಡುಗಿ ಧಿಮಾಕಿನಲ್ಲೇ
ನೀವು ಕತೆಬರೆವವರು, ನಿಮಗೆ ಗೊತ್ತಾಗದ್ದೇನು?
ಹೇಳಿದ್ದಳು,
ಪ್ರೀತಿಯೆಂದರೆ ಪ್ರೀತಿ. ಅದರಾಚೆ ಮತ್ತೇನು?

ಕವಿ ಮೊದಮೊದಲಿಗೆ ಅಲವತ್ತುಕೊಳ್ಳುತ್ತಿದ್ದ,
ದೇಹದ ಕಾವು ತಗ್ಗಿದಾಗಷ್ಟೆ
ಅರಿವಾಗುತ್ತದೆ, ಹರಿದುಹೋಗುತ್ತದೆ ಭ್ರಮೆಯ ಭಿತ್ತಿ, ಪರಿಪರಿಯಾಗಿ
ಮತ್ತೆ ಮಗಳನ್ನೇ ಮರೆತು ಬಿಟ್ಟ ಅಥವಾ ಮರೆತಂತೆ ಉಳಿದುಬಿಟ್ಟ
ಕಾಲಕ್ಕೆ ತಕ್ಕಂತೆ ದಲಿತ, ದಲಿತೋತ್ತರ, ಕ್ಯಾಸೆಟ್ಟು ಕಾವ್ಯ
ಕವಿತೆಯೊಂದೇ ತನ್ನ ಹಾದಿಯೆಂದ. ಮೊನ್ನೆ
ರಾಜಾಂಗಣದ ಸನ್ಮಾನದಲ್ಲಿ ಬದುಕು ಪಾವನವಾಯಿತೆಂದ.

ನನಗಾದರೋ ಅಮೃತಮತಿ, ಮನಸಿಜನ ಮಾಯೆ
ವಿಧಿವಿಳಸನದ ನೆರಂಬಡೆಯೆ ಹಾದಿಯಲ್ಲೆಲ್ಲೋ ಎದುರಾದವಳು
ಮಗ್ಗುಲಲ್ಲೇ ಕುಳಿತು ಕೇಳಿದಳು
ಬದುಕೆಂದರೆ ನೀವು ಹೇಳಿದಷ್ಟೇ ಇರಬೇಕೆ
ಬದಗನಾಚೆಗೆ ನನ್ನ ಬದುಕಿರಬಾರದೇಕೆ?

ಎಲ್ಲಾತನೆಂದರೆ, ಹೇಳಿದಳು ವಿಷಣ್ಣಳಾಗಿ,
ಹೋಗಿಬಿಟ್ಟ;
ಚಕ್ರವ್ಯೂಹ ಹೊಕ್ಕವರಿಗೆ ಹೊರಬರುವ ಮಂತ್ರೋಪದೇಶವಿಲ್ಲದ್ದಕ್ಕೆ
ಹೊಟ್ಟೆಪಾಡೇ ನಾಯಿಪಾಡು ಆದದ್ದಕ್ಕೆ
ಬದುಕಿದ್ದೇನೆ ಛಲಹಿಡಿದು,
ಸೋತರೆ ಸಂತೋಷಪಡುವವರು ಅಗಣಿತರೆಂಬ ಒಂದೇ ಕಾರಣಕ್ಕೆ.

ನಾನೀಗ ನಂಜಿನ ಲಡ್ಡುಗೆ ಹಿಡಿದು ಕಾಯುತ್ತಿದ್ದೇನೆ
ಭವಾವಳಿಯ ಇನ್ನೊಂದು ಚಕ್ರಕ್ಕೆ.

-ಬೆಳಗೋಡು ರಮೇಶ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)