ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಒಂದು ದೃಷ್ಟಿಕೋನದ ದೋಷ

Lingaraj Badiger
Updated On : 19 Apr 2014, 4:57 am

ಒಬ್ಬ ಅಸಂತೋಷಿ ಯುವಕ,  ತಂದೆಯ ಬಳಿ ಹೋಗಿ ತನಗೆ ಜೀವನದಲ್ಲಿ ಜಿಗುಪ್ಸೆ ಬಂದಿದೆ. ಏನು ಮಾಡಲಿ? ಜೀವನವೆಂದರೆ ಬರೀ ಕಷ್ಟಗಳ ಸರಮಾಲೆಯೇ ಎಂದು ಪ್ರಶ್ನಿಸಿದ. ತಂದೆ ಏನನ್ನೂ ಮಾತನಾಡದೆ ಅರ್ಧ ಲೋಟ ಉಪ್ಪನ್ನು ಒಂದು ಲೋಟಕ್ಕೆ ಸುರುವಿ ಕದಡಿದ. ಈಗ ಮಗನಿಗೆ ಅದನ್ನು ಕುಡಿಯಲು ಹೇಳಿದ. ನಂತರ ರುಚಿ ಹೇಗಿತ್ತೆಂದು ಕೇಳಿದ. 'ಭಯಂಕರ, ಕುಡಿಯಲಾಗುವುದಿಲ್ಲ' ಎಂದ ಮಗ. ಈಗ ತಂದೆ ಅರ್ಧ ಲೋಟ ಉಪ್ಪನ್ನು ಮನೆಯ ಪಕ್ಕದ ಬಾವಿಗೆ ಸುರುವಿದ. ಮತ್ತು ಮಗನಿಗೆ ಬಾವಿ ನೀರನ್ನು ಕುಡಿಯಲು ಹೇಳಿದ. ಈ ಬಾರಿ ಮಗ ನೀರು ಸಿಹಿಯಾಗಿತ್ತು ಎಂದುತ್ತರಿಸಿದ. ನಸುನಕ್ಕ ತಂದೆ, ಜೀವನದಲ್ಲಿ ಕಷ್ಟಗಳು, ನೋವುಗಳು ಉಪ್ಪಿನಷ್ಟೇ. ಅವುಗಳ ಪ್ರಮಾಣ ಎಲ್ಲರ ಬದುಕಿನಲ್ಲೂ ಒಂದೇ ಇರುತ್ತದೆ. ಆದರೆ ನೀನು ಅನುಭವಿಸುವ ಕಷ್ಟದ ಪ್ರಮಾಣ ಅದನ್ನು ನೀನು ಯಾವ ಪಾತ್ರೆಯಲ್ಲಿ ಹಾಕಿ ಅಳೆಯುತ್ತೀ, ಹೇಗೆ ಸ್ವೀಕರಿಸುತ್ತಿ ಎಂಬುದಾಗಿದೆ ಎಂದನು.
ಮಗನಿಗೆ ತನ್ನ ದೃಷ್ಟಿಕೋನದ ದೋಷ ಅರಿವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement