ಒಂದು ಪ್ರಶ್ನೆ
ಅಮ್ಮ ಬೇಗ ಬಾ ಇಲ್ಲಿ
ತಲೆ ಎತ್ತಿ ನೋಡಲ್ಲಿ
ಚಂದಿರನೊಬ್ಬನೆ ಮೇಲಲ್ಲಿ
ಹೆದರಿಕೆಯಾಗದೆ ಹೇಳಮ್ಮ?
ಬೆಟ್ಟ ಉಂಟು ಗುಡ್ಡ ಉಂಟು
ಹಸುರಿನ ಹಾಸಿಗೆ ಹೊದಿಸಿದ್ದುಂಟು
ಜಿಂಕೆ ನವಿಲು ಕೋಗಿಲೆ ಅಲ್ಲುಂಟು
ಅವುಗಳಿನ್ನವ ಅಲ್ಲಲ್ಲೇ ಕೊಡುವನಾರು?
ಹಾವಿಗೆ ಕಾಲು, ಹಕ್ಕಿಗೆ ಹಲ್ಲು
ಬಾನಿಗೆ ಬಟ್ಟೆ ಇಲ್ಲವಲ್ಲ?
ಅಜ್ಜ, ಅಪ್ಪ, ಅಣ್ಣನಿಗಿರೋ
ಮೀಸೆ ನಂಗ್ಯಾಕಿಲ್ಲವೋ ಗೊತ್ತಿಲ್ಲ?
ನಮಗಿರೋ ಶಾಲೆ ಆನೆಗ್ಯಾಕಿಲ್ಲ?
ಹಕ್ಕಿಗೆ ಹಾರೋ ವಿದ್ಯೆ ಕಲಿಸದವನಾರು?
ಮೀನಿಗೆ ಈಜು ಅಂದವರಾರು?
ಹೂ- ಮುಳ್ಳು ಜೊತೆಜೊತೆಗೆ ಇರುವುದೇಕೆ?
ಮನೆಗೆಲಸ ಎಲ್ಲಾ ನಿಂಗೊಬ್ಳಿಗೇ ಏಕೆ?
ಹಗಲು-ರಾತ್ರಿ ಅಪ್ಪನೊಬ್ಬನೆ ಶ್ರಮಿಸಬೇಕೆ?
ಅಮ್ಮ ಅಮ್ಮ ನನ್ನ ಪ್ರಶ್ನೆ ಕೇಳಮ್ಮ?
ಪ್ಲೀಸ್, ಉತ್ತರ ಬೇಗ ಹೇಳಮ್ಮ
-ಸಂತೆಬೆನ್ನೂರು ಫೈಜ್ನಟ್ರಾಜ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.