ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಕರಗುವ ಚಾಕೊಲೆಟಿನ ಕಥೆ

Lingaraj Badiger
Updated On : 19 Apr 2014, 5:13 am

ನಿನ್ನ ಹುಟ್ಟಿದ ಹಬ್ಬಕ್ಕೆ ಹೆಚ್ಚಿನವರು ಚಾಕೊಲೆಟ್ ಕೊಟ್ಟಿರುತ್ತಾರೆ. ಮಧ್ಯಾಹ್ನಕ್ಕೆ, ಸಂಜೆಗೆ ಅಥವಾ ನಾಳೆಗೆ ಎಂದು ಎತ್ತಿಟ್ಟುಕೊಂಡಿರುತ್ತೀಯ. ಆದರೆ ನಂತರ ನೀನು ತಿನ್ನುವಷ್ಟರಲ್ಲಿ ಚಾಕೊಲೆಟ್ ಕರಗಿ ಹೋಗಿರುತ್ತದೆ. 'ಮೆಲ್ಟ್ ಆದ ಚಾಕೊಲೆಟ್ ತಿನ್ಬಾರ್ದು' ಅಂತ ಅಮ್ಮ ಮೊದಲೇ ಹೇಳಿರುತ್ತಾಳೆ. ಕೊನೆಗೆ ಅತ್ತು ಬೇಸರಿಸುತ್ತೀಯ. ಇರಲಿ, ಯಾಕೆ ಚಾಕೊಲೆಟ್ ಅಷ್ಟು ಬೇಗ ಕರಗಿ ಹೋಯಿತು ಅಂತ ತಿಳಿದುಕೊಂಡ್ರೆ ಮುಂದಿನ ಹುಟ್ಟಿದ ಹಬ್ಬದಂದು ಜಾಗ್ರತೆ ವಹಿಸಬಹುದಲ್ವಾ? ಚಾಕೊಲೆಟ್ ಘನದಿಂದ ದ್ರವ ರೂಪಕ್ಕೆ ಯಾವಾಗ ಬದಲಾಗುತ್ತದೆ? ಹೇಗೆ ಬದಲಾಗುತ್ತದೆ ಎಂದು ತಿಳಿಯೋಣ.
ಚಾಕೊಲೆಟ್‌ನ ಸಣ್ಣ ತುಂಡುಗಳನ್ನು ತೆಗೆದುಕೋ. ಎಲ್ಲ ತುಂಡುಗಳು ಸಮ ಪ್ರಮಾಣದಲ್ಲಿರಬೇಕು. ಪೇಪರ್ ಪಾತ್ರೆಗಳಲ್ಲಿ ಚಾಕೊಲೆಟ್ ತುಂಡನ್ನು ಹಾಕು. ಒಂದನ್ನು ನೆರಳಿರುವ ಕಡೆ, ಮತ್ತೊಂದನ್ನು ಬಿಸಿಲಲ್ಲಿ, ತಂಪಿರುವ ಕಡೆ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಇಡು. ಹತ್ತು ನಿಮಿಷ ಕೆಲವು ಬದಲಾವಣೆಯನ್ನು ಗಮನಿಸುತ್ತಿರು. ನಂತರ ಯಾವ ಚಾಕೊಲೆಟ್‌ನ ತುಂಡು ಹೆಚ್ಚು ಕರಗಿದೆ ಎಂಬುದನ್ನು ಬರೆದಿಟ್ಟುಕೋ. ವ್ಯತ್ಯಾಸ ಗಮನಿಸು. ಉಷ್ಣಾಂಶದಲ್ಲಿ ಏರಿಳಿತವಾದಾಗ ವಸ್ತುವಿನ ರೂಪದಲ್ಲೂ ಬದಲಾವಣೆ ಕಂಡುಬರುತ್ತದೆ. ಹೆಚ್ಚು ಉಷ್ಣತೆಯಿದ್ದಾಗ ದ್ರವೀಕರಿಸುತ್ತದೆ. ತಂಪಾದಂತೆ ಘನೀಕರಿಸುತ್ತದೆ. ಅಷ್ಟೇ ಕಣೋ ಪುಟಾಣಿ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement