ಕಲ್ಲೊಳಗೆ ಪ್ರೇಮವಿದೆ!
ಜಗತ್ತಿನ ಅದ್ಭುತಗಳ ಪೈಕಿ ಗುರುತಿಸಿಕೊಂಡಿದ್ದರೂ ಸಾಕಷ್ಟು ವಿವಾದಗಳಿಗೆ ಗುರಿಯಾಗಿರುವ ವಿಸ್ಮಯ ಸ್ಥಳ ಲವ್ ಆಫ್ ವ್ಯಾಲಿ. ಐರ್ಲೆಂಡಿನ ಗಡಿಭಾಗದಲ್ಲಿದೆ. ಕೆಲವು ಶತಮಾನಗಳ ಕಾಲ ಈ ಕಣಿವೆಯನ್ನು ಮರೆಮಾಚಲಾಗಿತ್ತಂತೆ. ನಿಗೂಢ ಬುಡಕಟ್ಟು ಜನಾಂಗವು ಕಣಿವೆಯನ್ನು ನಿರ್ಮಿಸಿರಬಹುದೆಂದು ನಂಬಲಾಗಿದೆ. ಆ ಜನಾಂಗವಿನ್ನೂ ಅಲ್ಲಿ ಜೀವಿಸುತ್ತಿದ್ದಾರೆಂಬ ಊಹಾಪೋಹಗಳಿವೆ. ಇದು 3000 ವರ್ಷಗಳಿಗೂ ಹಿಂದಿನದ್ದಾಗಿದೆ. ಈಜಿಪ್ಟ್ ಪಿರಾಮಿಡ್ಡುಗಳ ನಿರ್ಮಾಣಕ್ಕೂ ಮೊದಲು ವ್ಯಾಲಿ ಆಫ್ ಲವ್ ನಿರ್ಮಾಣವಾಯಿತೆಂದು ಸಂಶೋಧನೆಗಳು ಹೇಳುತ್ತವೆ. 'ಸಂತೋಷದ ಸ್ಮಾರಕ' ಎಂಬುದು ಇದಕ್ಕೆ ಮತ್ತೊಂದು ಹೆಸರು. ಸಂತೋಷದ ಜೀವನಕ್ಕೆ ಸ್ಫೂರ್ತಿ ಒದಗಿಸುವ ಭಾವವನ್ನು ಬಿಂಬಿಸುತ್ತಿದೆ. ಕಲ್ಲಿನಿಂದ ಕೆತ್ತಲಾಗಿರುವ 'ವ್ಯಾಲಿ ಆಫ್ ಲವ್' ಪ್ರೀತಿಯ ಚಿಲುಮೆಯನ್ನು ಪಸರಿಸುತ್ತಿದೆ. ಕಣ್ಮನ ಸೆಳೆಯುತ್ತಿದೆ.