ಖುಷಿ

ಚಿಂತನೆಯ ಸಮಸ್ಯೆ

ನಿಮ್ಮನ್ನೇ ನೀವು ಬೀದಿಯಲ್ಲಿ ಭೇಟಿಯಾದರೆ ಎಷ್ಟು ವಿಚಿತ್ರ!
ಎಷ್ಟು ಸೋಜಿಗ ನಿಮ್ಮನ್ನೇ ನೀವು ಮೋಹಿಸಿದರೆ
ತೋಳಲ್ಲಿ ಆಲಂಗಿಸಿದರೆ, ಮದುವೆಯಾದರೆ
ನಿಮಗಷ್ಟೇ ಗೊತ್ತಿರುವ ತಂತ್ರಗಳಿಗೆ ಸೆರೆಯಾದರೆ
ಮತ್ತೆ ಇನ್ನಷ್ಟು ಜೀವಗಳ ಹುಟ್ಟಿಸಿದರೆ?
ನಿಮ್ಮ ಪ್ರತಿಸೃಷ್ಟಿಗಳೇ ಜಗದ ತುಂಬ
ಅರಬ್ಬರು ಕೆಲವರು, ಕೆಲ ಯಹೂದಿಗಳು.
ಗುಡಾರಗಳಲ್ಲಿ ಹಲವರು.
ನೋಡು ಇದು ಭೀಭತ್ಸ,
ಆದರೆ ನಿನ್ನದೇ ಮೃದುಲ ನಿಷ್ಕಳಂಕ ಸ್ವಯ
ನೆಲದೊಳಲ್ಲಲ್ಲಿ ಹೊರಗಿಣುಕಿದರೆ ಲೇಸು ತಾನೆ?
ಈ ಮೂರ್ಖರಿಗಿಂತ ಕೊಂಬಿನ ಚಂದಿರಗಳಷ್ಟು ಲೇಸು
ನೋಡಿದಲ್ಲೆಲ್ಲ ಉಪ್ಪಿನ ಗೋಪುರಗಳು
ಜನರಿರುವುದಾದರೆ ಇರೋಣ ನಾವೇ
ಎಲ್ಲ ಕಡೆ ಕಾಡುಗಿಡಗಳ ಬೀಜ ಚಿಮುಕಿಸುತ್ತ
ಚಿಲ್ಲರೆ ಅಂಗಡಿಗೆ ಹೋಗುತ್ತ
ಸೂಜಿಗೊಳವೆಯಲ್ಲಿ ಹಕ್ಕಿ ಕೊಲ್ಲುತ್ತ.
ಕಾಡಿನಲ್ಲೇ ನಿನಗೆ ನೆಮ್ಮದಿ, ಹೌದು
ಕೊಂಬೆಗಳ ನಡುವೆ, ಕಣಿವೆಗಳ ತಳದಲ್ಲಿ
ಆದರೆ ನೀನು ಎಲ್ಲದರ ಮೂಲಕ ನೋಡಿರುವೆ
ಹೆಪ್ಪುಗಟ್ಟಿದ ಸರೋವರದ ಮೇಲೆ ಭೀತಿಯಿಂದೋಡಿರುವೆ
ಮರಳ ಮೇಲೆ, ಅರಮನೆಯಲ್ಲಿ, ಸೆರೆಮನೆಯಲ್ಲಿ
ಬಂದರಿನ ಬದಿಯ ಸೂಳೆಮನೆಯಲ್ಲಿ.
ಮತ್ತೆ ಎಷ್ಟೋ ಕಾಲದ ಹಿಂದೆ, ಈ ಇದೇ ಗ್ರಹದಲ್ಲಿ
ನೀನು ಬಂದೆ ಖಾಲಿ ಮನೆಗೆ
ಸುರಿದುಕೊಂಡೆ ಸೋಡಾ ಮದ್ಯ  
ಖಾಲಿ ಖೋಲಿಯಲ್ಲಿ ಆರಾಮ ಕುರ್ಚಿಯ ಮೇಲೆ ಕುಳಿತು
ನನಗೇನಾಯಿತಿದೆಂದು ಗೊಂದಲಿಸುತ್ತ.
(ಕಾವ್ಯಕ್ಕೆ ಪುಲಿಟ್ಝರ್ ಪ್ರಶಸ್ತಿ ಪಡೆದ ಕನ್ನಡಿಗ ವಿಜಯ್ ಶೇಷಾದ್ರಿ ಅವರ ಒಂದು ಕವಿತೆಯ ಅನುವಾದ)

- ಹರೀಶ್ ಕೇರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಅವನನ್ನು ಹಾಳು ಮಾಡಿದ್ದೇ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್'!: ವೈಭವ್ ಸೂರ್ಯವಂಶಿ ಕುರಿತು ಗಂಭೀರ್‌ ವಿರುದ್ಧ ವಿಶ್ವಕಪ್‌ ವಿಜೇತ ಆಟಗಾರ ಕಿಡಿ

ಬಿಹಾರದ ಯುವಕನ ಜೊತೆ ಪ್ರೀತಿ, ಮದುವೆಗೆ ಸಿದ್ಧತೆ; ತಾಯಿ ಸಲಹೆ ಬೆನ್ನಲ್ಲೇ ನಿರ್ಧಾರ ಬದಲಿಸಿದ ಬೆಂಗಳೂರು ಟೆಕ್ಕಿ.. ಆಗಿದ್ದೇನು?