ಖುಷಿ

ಕರ್ವಾಲೋದ ಕಲರವ

ಕನ್ನಡದ ಓದುಗರಿಗೆ 'ಕರ್ವಾಲೋ' ಪದ ಹೊಸದೆನಲ್ಲ. ಆ ಪದದ ಹಿಂದೆಯೇ ನೆನಪಾಗುವುದು ಮಂದಣ್ಣನ ಪಾತ್ರ...

ಕನ್ನಡದ ಓದುಗರಿಗೆ 'ಕರ್ವಾಲೋ' ಪದ ಹೊಸದೆನಲ್ಲ. ಆ ಪದದ ಹಿಂದೆಯೇ ನೆನಪಾಗುವುದು ಮಂದಣ್ಣನ ಪಾತ್ರ. ಒಂದು ಕಾದಂಬರಿಯ ಪಾತ್ರವು ಅಷ್ಟು ಜನಜನಿತವಾಗಬೇಕಾದರೆ ಆ ಪಾತ್ರದ ಪೋಷಣೆಯನ್ನು ಖಂಡಿತ ಗಮನಿಸಬೇಕು. ಕನ್ನಡಿಗರೆದೆಯಲ್ಲಿ ಅಚ್ಚಾಗಿರುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ 'ಕರ್ವಾಲೋ'ವನ್ನು ಅದೇ ಹೆಸರಿನಿಂದ ಅನಾರಾವ್ ಜಾದವ್ ರಂಗರೂಪಕ್ಕೆ ತಂದು ಕೆ.ಎಸ್.ಡಿ.ಎಲ್. ಚಂದ್ರು 'ರೂಪಾಂತರ'ಕ್ಕಾಗಿ ನಿರ್ದೇಶಿಸಿ ನಾಟಕ ಪ್ರಿಯರಿಗೆ ಮಂದಣ್ಣನ ಪಾತ್ರವನ್ನು ನೋಡುವ ಅವಕಾಶವನ್ನು ಮಾಡಿಕೊಟ್ಟಿದ್ದಾರೆ. ಈ ಪ್ರದರ್ಶನವು ಇತ್ತೀಚೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಿತು.
ಜೇನು ಮಾರಾಟ ಮಾಡುವ ಸೊಸೈಟಿಗೆ ಪ್ರವೇಶಿಸುವ ತೇಜಸ್ವಿ ಪಾತ್ರದ ಜೊತೆಗೆ ಅಂಗಡಿಯ ಮಾಲೀಕ ಲಕ್ಷ್ಮಣನಿಂದ ಮಂದಣ್ಣನ ಪಾತ್ರದ ಪರಿಚಯವಾಗುವುದು ಒಬ್ಬ ಮಾಮೂಲಿ ವ್ಯಕ್ತಿಯಂತೆ. ಆದರೆ ನಾಟಕದ ಓಟದ ಜೊತೆ ಜೊತೆಗೆ ಮಂದಣ್ಣನಂಥ ಸಾಮಾನ್ಯ ವ್ಯಕ್ತಿಯಲ್ಲೂ ಅಸಾಮಾನ್ಯ ಶಕ್ತಿಯ ವ್ಯಕ್ತಿತ್ವವು ತೆರೆದುಕೊಳ್ಳುತ್ತಾ ಹೋಗುತ್ತದೆ. ಮಲೆನಾಡಿನಲ್ಲಿನ ಸಾಮಾನ್ಯ ವ್ಯಕ್ತಿಗಳ ಪ್ರತೀಕವಾಗಿ ನಿಲ್ಲುವ ಈ ಮಂದಣ್ಣ ತನಗೇ ತಿಳಿಯದ ಬುದ್ಧಿಶಕ್ತಿಯನ್ನು ಕರ್ವಾಲೋ ಎಂಬ ಜೀವ ವಿಜ್ಞಾನವನ್ನು ಅರೆದು ಕುಡಿದ ಪ್ರೊಫೆಸರ್ ಸಾಹೇಬ್ರು ಗುರುತಿಸುತ್ತಾರೆ. ಅವರಿಗೆ ಈತ ಅಚ್ಚುಮೆಚ್ಚು ಕೂಡ. ಈ ಮಂದಣ್ಣನ ಸುತ್ತ ಸುತ್ತುವ ನಾಟಕ ನೋಡುಗನಿಗೆ ಎಲ್ಲ ರೀತಿಯ ರಸಾನುಭವನ್ನು ನೀಡುತ್ತದೆ. ಕಥೆಯನ್ನು ಕಡಿಮೆ ದೃಶ್ಯಗಳಲ್ಲದೆ ಕಡಿಮೆ ರಂಗಸಜ್ಜಿಕೆಯಲ್ಲಿ ಸರಳವಾಗಿ ಯಾವುದೇ ನೆರಳು ಬೆಳಕಿನ ಚಮತ್ಕಾರಗಳಿಲ್ಲದೇ ನೇರವಾಗಿ ಬಿಂಬಿಸಿದ್ದಾರೆ. ಆದರೆ, ನಾಟಕದ ಅಂತ್ಯದಲ್ಲಿ ಬರುವ ಹಾರುವ ಓತಿಯ ದೃಶ್ಯವನ್ನು ವಿಡಿಯೋ ತಂತ್ರವನ್ನು ಬಳಸಿ ತೇಜಸ್ವಿಯವರ ಅದ್ಭುತ ಕಲ್ಪನೆಯನ್ನು ಇಲ್ಲಿ ಸೆರೆಹಿಡಿದು, ನೋಡುಗರನ್ನು ನಿಬ್ಬೆರಗಾಗಿಸಿದ್ದಾರೆ.
ಮೂಕಾಭಿನಯದ ಮುಖಾಂತರವಾಗಲಿ ಇಲ್ಲವೇ ಸರಳೀಕರಿಸಿ ಪ್ರತಿಬಿಂಬಿಸಬಹುದಾಗಿದ್ದ ಕೋರ್ಟ್ ದೃಶ್ಯದಲ್ಲಿ ಸ್ವಲ್ಪ ನಿಧಾನಗತಿ ಇಣುಕಿದೆ. ಆದರೆ ಮಂದಣ್ಣನ ಮದುವೆ ದೃಶ್ಯದ ಸಂಯೋಜನೆ ಮತ್ತು ಅಲ್ಲಿನ ಪಾತ್ರಗಳ ನಡವಳಿಕೆಗಳಾದ ಜಗಳ, ಹಾಸ್ಯ, ತಟಸ್ಥ (ಫ್ರೀಜ್), ಫೋಟೋಗ್ರಾಫರ್‌ನ ಚಟುವಟಿಕೆಗಳು ನೋಡುಗರನ್ನು ಲವಲವಿಕೆಯಲ್ಲಿಡುತ್ತವೆ. ಅಲ್ಲದೆ ಪೊಲೀಸರು ಮಂದಣ್ಣನ್ನು ಹಿಡಿದೊಯ್ಯುವ ದೃಶ್ಯದಲ್ಲಿನ ಅಳುವ ಸನ್ನಿವೇಶಗಳು ನಗೆಯನ್ನುಕ್ಕಿಸುತ್ತವೆ. ಹಾರುವ ಓತಿಯೇ ಸಿಕ್ಕಿತೆಂದು ಹಗ್ಗ- ಜಗ್ಗಾಡುವ ದೃಶ್ಯದಲ್ಲಿನ ಕಾಡು ಜನರ ಭಾಷೆಯನ್ನು ಬಳಸುವ ಪಾತ್ರಗಳು ಆಕರ್ಷಿಸುತ್ತವೆ. ಕರ್ವಾಲೋ ಪಾತ್ರಧಾರಿಯ ನಡೆ, ಪ್ರಬುದ್ಧ ಮಾತುಗಳು ಪಾತ್ರದ ಪರಕಾಯವೆನಿಸದೆ ಇರದು. ಜೇನಿನ ಗುಣಾವಗುಣಗಳನ್ನು, ಜೇನು ಸಾಕಣೆಯನ್ನು ಚೆನ್ನಾಗಿ ಬಲ್ಲ ಈ 'ಹನಿ ಬೀ' ಪ್ರಿಯನಿಗೆ ತನ್ನ ಹನಿಮೂನ್ ಅನ್ನು ಸರಿಯಾಗಿ ಅನುಭವಿಸಲು ಸಾಧ್ಯವಾಗದ್ದು ವಿಪರ್ಯಾಸವೇ ಸರಿ. ಕಾದಂಬರಿಯ ಓಟವನ್ನು ನಿರ್ದೇಶಕರು ಉಳಿಸಿಕೊಂಡಿದ್ದಲ್ಲದೆ, ತಮ್ಮದೇ ಧಾಟಿಯಲ್ಲಿ ನಿರೂಪಿಸಿದ್ದಾರೆ. ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬುದೇ ಕೊನೆಗೆ ಸಾಬೀತಾಗುತ್ತದೆ.


-ಸಂಕೇತ್ ಗುರುದತ್
gurudattans@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ