ಖುಷಿ

ರಾಜಕೀಯ ಸನ್ಯಾಸ ಸ್ವೀಕರಿಸುವವರಿಗೆ ಧೀಕ್ಷೆ ನೀಡುವವರಾರು?

ಪಿ.ಜೆ. ರಾಘವೇಂದ್ರ, ಮೈಸೂರು
ರಾಜಕೀಯ ಸನ್ಯಾಸ ಸ್ವೀಕರಿಸುವವರಿಗೆ ಧೀಕ್ಷೆ ನೀಡುವವರಾರು?
-ಈಗಾಗಲೇ ರಾಜಕೀಯ ಮಾಡುತ್ತಿರುವ ಸನ್ಯಾಸಿಗಳು!

ವಿ. ಹೇಮಂತ್‌ಕುಮಾರ್, ಬೆಂಗಳೂರು
ಸನ್ಯಾಸಿಗಳ ಹತ್ತಿರ ಮೊಬೈಲ್ ಇರಲು ಕಾರಣ?
ದೇವರು ಮಿಸ್ಡ್ ಕಾಲ್ ಕೊಡಬಹುದು ಎಂಬ ಭ್ರಮೆ!

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ನಮ್ಮ ದೇಶದಲ್ಲಿ ಬೇರೆ ಕ್ರೀಡೆಗಳಿಗಿಂತ ಕ್ರಿಕೆಟ್ಟನ್ನು ಹೆಚ್ಚು ಇಷ್ಟಪಡುವುದೇಕೆ?
-ಅದರಲ್ಲಿ ಚಿಯರ್ ಗರ್ಲ್ಸ್ ಇರುತ್ತಾರಲ್ಲ!

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಇತ್ತೀಚಿನ ದಿನಗಳಲ್ಲಿ ನನ್ನ ಬಾಲ್ಯದ ನೆನಪು ಮರುಕಳಿಸುತ್ತಿದೆಯಲ್ಲ?
-ಯೌವ್ವನದ್ದು ಸರಿಯಾಗಿ 'ಸೇವ್‌' ಆಗಿಲ್ಲಾನ್ಸುತ್ತೆ!

ನೇರಲಗುಡ್ಡ ಶಿವಕುಮಾರ್, ಶಿರಾ
ವಿಚ್ಛೇದನಗಳೂ ಸ್ವರ್ಗದಲ್ಲೇ ನಿಶ್ಚಯವಾಗುತ್ತವೆಯಂತೆ?
-ಆದರೂ ಇಲ್ಲಿ ನೀವು ಕೋರ್ಟ್‌ಗೆ ಅಲೆಯಲೇಬೇಕು!

ಮೊಳಕಾಲ್ಮೂರು ಸುರೇಶ್, ಬಳ್ಳಾರಿ
ವಿದ್ಯಾದಾನ, ಅನ್ನದಾನ, ಕನ್ಯಾದಾನಕ್ಕಿಂತ ಮಿಗಿಲಾದ ದಾನ ಯಾವುದಣ್ಣ?
-'ಮತದಾನ' ಅಂತ ಎಷ್ಟು ಹೇಳಿದ್ರೂ ಬೆಂಗಳೂರಿನ ಬುದ್ಧಿವಂತರಿಗೆ ಅರ್ಥವೇ ಆಗಿಲ್ಲ!

ನೇತ್ರಾ ಆನೆಕೆರೆ, ಮಂಡ್ಯ
ಜೀವನವೆಂಬ ಈರುಳ್ಳಿಯನ್ನು ಬಿಚ್ಚುತ್ತಾ ಹೋದರೆ ಸಿಗುವುದೇನು?
-ಅದನ್ನು ಬಿಚ್ಚುತ್ತಾ ಕುಳಿತರೆ ಕಣ್ಣೀರು ಬರುತ್ತೆ, ಸುಮ್ಮನೆ ಹೋಳುಮಾಡಿ ಸಾಂಬಾರ್ ಮಾಡಿಬಿಡಬೇಕು!

ಲಕ್ಷ್ಮೀ ಬರ್ಕ್‌ಲಿ ರಮೇಶ್, ಮಂಡ್ಯ
ಈ ದೇಶ ಚೆಂದ, ಈ ಮಣ್ಣು ಚೆಂದ, ಆದರೆ ಈ ಜನರು?
-ಕೆಲವರು ಚೆಂದ, ಹಲವರು ಮಂದ!



-  ಎಸ್.ವಿ. ಪದ್ಮನಾಭ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್