ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಊರಿಗೆ ಬಂದವಳು ನೀರಿಗೆ ಬರ್ತಾಳೆ, ಬರದಿದ್ರೆ?

Vishwanath S
Updated On : 1 Feb 2014, 3:04 am

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಊರಿಗೆ ಬಂದವಳು ನೀರಿಗೆ ಬರ್ತಾಳೆ, ಬರದಿದ್ರೆ?
-ನೀವೇ ಬಿಸ್ಲೇರಿ ಬಾಟಲ್ ಹಿಡ್ಕೊಂಡು ಅವರ ಮನೆ ಹತ್ರ ಹೋಗಿ!
ಕಾಳೀಹುಂಡಿ ಶಿವಕುಮಾರ್, ಮೈಸೂರು.
ಕನ್ನಡಿಗೂ ಮುನ್ನುಡಿಗೂ ವ್ಯತ್ಯಾಸವೇನು ಸಾರ್?
-ಕನ್ನಡಿ ಸತ್ಯ, ಮುನ್ನುಡಿಯಲ್ಲಿ ಬಹಳಷ್ಟು ಮಿಥ್ಯ!
ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
ಎಲ್ಲರ ಮನವೂ ಕುರುಡು ಕಾಂಚಾಣಕ್ಕಾಗಿ ಮಿಡಿಯುತ್ತಿದೆಯಲ್ಲ?
-ಇಲ್ಲದಿದ್ರೆ ಜೀವನ ಬರಡು ಅಂತ ಗೊತ್ತಾಗಿದೆ.

ಕಾಳಿದಾಸ, ರಾಮಕೃಷ್ಣನಗರ
ಅಳಿಯನಿಗಿಂತ ಮನೆ ಅಳಿಯನಿಗೆ ಹೆಚ್ಚಿನ ಬೆಲೆ ಕೊಡುತ್ತಾರೇಕೆ?
-ಇಲ್ಲದಿದ್ರೆ ಮನೆಯನ್ನು ತೊಳೆಯುತ್ತಾನೆ!
ಸ್ವಾಮಿ ನಿರ್ಮಲಾ, ಉಡಿಗಾಲ.
ಪ್ರಾಯಕ್ಕೂ ಅಭಿಪ್ರಾಯಕ್ಕೂ ವ್ಯತ್ಯಾಸವೇನು?
-ಪ್ರಾಯ ಬದಲಾಗುತ್ತೆ, ಆದರೆ ಕೆಲವರ ಅಭಿಪ್ರಾಯ ಬದಲಾಗೋಲ್ಲ!
ಬರ್ಕ್‌ಲಿ ರಾಮ್, ಕಿರಗಂದೂರು ಮಂಡ್ಯ.
ಯಮ ಯಾಕೆ ಯಾವಾಗಲೂ ಕೋಣದ ಮೇಲೆಯೇ ಬರ್ತಾನೆ?
-ಕೋಣವನ್ನು ಎಲ್ಲಿ ಬೇಕಾದರೆ ಅಲ್ಲಿ ಪಾರ್ಕಿಂಗ್ ಮಾಡಬಹುದೂಂತ!
ಬಿ.ಎಸ್. ನಾರಾಯಣಸ್ವಾಮಿ, ಬೋಧನಹೊಸಹಳ್ಳಿ.
ಇತ್ತೀಚೆಗೆ ಟಿ.ವಿ. ಧಾರಾವಾಹಿಗಳಲ್ಲಿ ಅತ್ತೆ-ಸೊಸೆಯರ ಜಟಾಪಟಿ ಜಾಸ್ತಿಯಾಗಿದೆಯಲ್ಲ?
-ಅದನ್ನು ನೋಡ್ತಾ ಆದ್ರೂ ಮನೆಯಲ್ಲಿ ಸ್ವಲ್ಪ ಜಟಾಪಟಿ ಕಡಿಮೆ ಆಗಲೀಂತ!
-ಎಸ್.ವಿ. ಪದ್ಮನಾಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement