ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಜಗತ್ತು ಒಂದು ರಹಸ್ಯ ಕೊಠಡಿ

Vishwanath S
Updated On : 1 Feb 2014, 2:21 am

ಜಗತ್ತಿನಾದ್ಯಂತ ಸುಮಾರು 60 ಪ್ರಭೇದಗಳಲ್ಲಿ ಬೆಳೆಯುವ ಗುಲಾಬಿ ಹೂಗಳ ತವರು ನೆಲೆ ಏಷ್ಯಾ ಖಂಡವೇ ಆಗಿದೆ. ಈ ಗುಲಾಬಿ ಹೂವಿನಿಂದ ಪನ್ನೀರನ್ನು ಸಿದ್ಧಪಡಿಸುವ ವಿಧಾನವನ್ನು ಮೊಟ್ಟಮೊದಲಿಗೆ ಕಂಡುಕೊಂಡವರು ತಾಜಮಹಲ್‌ಗೆ ಕಾರಣವಾದ ನೂರ್‌ಜಹಾನ್‌ರ ತಾಯಿ ಸಲೀಮಾ.
    ಮಾನವ ಕುಲದ ಉಗಮದ ಮೂಲ ಮಂಗನೆಂಬುದು ಸರ್ವವಿಧಿತ. ಆದರೆ, ಈ ಮಾನವನಿಗೆ ಸಂತೋಷವನ್ನೂ, ಉಲ್ಲಾಸವನ್ನೂ, ಅಭಿವ್ಯಕ್ತಿಗೊಳಿಸುವ ನಗುವನ್ನು ಬಳುವಳಿಯಾಗಿ ಪಡೆದದ್ದು ಯಾರಿಂದ ಗೊತ್ತೆ? 'ಏಪ್‌' ಎಂಬ ಲಾಂಗೂಲವಿಲ್ಲದ ಮಂಗಗಳ ಸಂತತಿಯಿಂದ.
    ತಲೆಗೆ ಬಂದಂತೆ ಮಾತಾಡುವ ಜೀವಂತ ಬೊಂಬೆಗಳನ್ನು ನೋಡಿರುವ ನಮಗೆ ಜೀವವಿಲ್ಲದ ಆದರೆ ಮಾತಾಡುವ ಬೊಂಬೆಗಳನ್ನು ಪರಿಚಯಿಸಿದವರು ಯಾರು ಗೊತೆ?್ತ ಪ್ರಸಿದ್ಧ ಸಂಶೋಧಕ ಥಾಮಸ್ ಅಲ್ವಾ ಎಡಿಸನ್.
    ಅಂಟಿನಿಂದ ಕೂಡಿದ ಅಂಚೆ ಚೀಟಿಗಳು ಬಳಕೆಗೆ ಬಂದದ್ದು ಸುಮಾರು 1855ರಲ್ಲಿ. ಅದಕ್ಕೂ ಮುಂಚೆ ಅಂಚೆ ಅಧಿಕಾರಿಗಳು ಅಂಚೆ ಚೀಟಿ ಅಂಟಿಸುವ ಜಾಗದಲ್ಲಿ ಸೈನ್ ಹಾಕಿ ಕಳುಹಿಸುತ್ತಿದ್ದರು.
    ಜಗತ್ತಿನ ಅತಿದೊಡ್ಡ ಪುಸ್ತಕದಂಗಡಿ ಇಂಗ್ಲೆಂಡಿನಲ್ಲಿದೆ. ಆ ಅಂಗಡಿಯ ಪುಸ್ತಕದ ಕಪಾಟುಗಳನ್ನು ಉದ್ದುದ್ದವಾಗಿ ಜೋಡಿಸಿದರೆ 40 ಮೈಲಿಯಷ್ಟಾಗುತ್ತದಂತೆ.
    ನಮ್ಮ ಗಣೇಶನ ಚಿತ್ರ ಇಂಡೋನೇಷ್ಯಾದ ಕರೆನ್ಸಿಯಲ್ಲಿದೆ.
    ಎಸ್ಕಿಮೋಗಳೆನಿಸಿಕೊಳ್ಳುವ ಜನ ಹಿಮಪ್ರದೇಶದಲ್ಲಿ ವಾಸಿಸುತ್ತಾರೆ. 'ಎಸ್ಕಿಮೋ' ಎಂದರೇನು ಗೊತ್ತೆ? ಆಹಾರವನ್ನು ಹಸಿಹಸಿಯಾಗಿ ಸೇವಿಸುವವರೆಂದು.
    ಚಿಂಪಾಂಜಿ ಮತ್ತು ಮನುಷ್ಯನ ಹೊರತಾಗಿ ಇನ್ಯಾವ ಜೀವಿಗೂ ಕೆಮ್ಮು- ನೆಗಡಿ ಬರುವುದಿಲ್ಲ. ಆ ಉಳಿದ ಜೀವಿಗಳು ಪುಣ್ಯ ಮಾಡಿರಬೇಕಲ್ಲವೆ?
    ಆಕಾಶದಲ್ಲಿ ಹಾರಾಡುವ ವಿಮಾನ ಚಾಲಕನಿಗೆ ಕಾಮನಬಿಲ್ಲು ವೃತ್ತಾಕಾರವಾಗಿ ಕಾಣುತ್ತದೆ.
    ಇರಾನಿಯರು ಸೂರ್ಯನನ್ನು 'ಮಿತ್ರ' ಎಂದು ಕರೆಯುತ್ತಾರೆ.
    ಒಂದು ಕೆ.ಜಿ. ಜೇನುತುಪ್ಪ ತಯಾರಿಸಲು ಜೇನ್ನೊಣ 40,00,000 ಹೂಗಳಿಂದ ಮಕರಂದ ಕೊಂಡೊಯ್ಯುತ್ತದೆ.
    ಮನುಷ್ಯ ತನ್ನ ತೂಕದ ಎರಡು ಪಟ್ಟು ತೂಕವನ್ನು ಎತ್ತಬಲ್ಲನಾದರೆ, ಇರುವೆ ತನ್ನ ತೂಕದ ಮುನ್ನೂರು ಪಟ್ಟು ತೂಕವನ್ನೆತ್ತಬಲ್ಲದು.
    ಸಂಗೀತ ಕ್ಷೇತ್ರದಲ್ಲಿ ಗಣಿತ ಆಶ್ಚರ್ಯವಾಗುತ್ತಿದೆಯಲ್ಲವೆ? ಹೌದು. ಈ ವಿಷಯವನ್ನ ಎತ್ತಿ ತೋರಿಸಿದವರು ಖ್ಯಾತ ಗಣಿತಜ್ಞ ಪೈಥಾಗೋರಸ್. ಒಂದು ತಂತಿ ವಾದ್ಯವನ್ನು ಮೀಟಿದಾಗ ಹೊರಹೊಮ್ಮುವ ಶಬ್ಧವು ಆ ತಂತಿಯ ಉದ್ದದ ಎರಡು ಪಟ್ಟು ಉದ್ದದ ತಂತಿಯನ್ನು ಮೀಟಿದಾಗ ಹುಟ್ಟುವ ಶಬ್ಧಕ್ಕಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ.
    ಪುಸ್ತಕ ಎಡಗಡೆಯ ಪುಟಗಳನ್ನು 'ರೆಕ್ಟೋ' ಎಂದು ಬಲಬದಿಯ ಪುಟಗಳನ್ನು 'ಪಿಸ್‌ರೋ' ಎಂದು ಕರೆಯುತ್ತಾರೆ.

ರಾಜಾಸಂಗಮೇಶ ಎನ್. ಹಿರೇಮಠ
ಹಿಮಶ್ರೀ. ವಿ. ಜೈನ್, 4 ನೇ ತರಗತಿ, 'ಬಿ' ವಿಭಾಗ,
ಸೈಂಟ್ ಆ್ಯನ್ಸ್ ಪ್ರೈಮರಿ ಸ್ಕೂಲ್, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement