ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಫುಲ್ ಕಾಫಿಯೆದುರು ಖಾಲಿ ಮನಸ್ಸು!

Vishwanath S
Updated On : 1 Feb 2014, 3:31 am

ಕಾಫಿ ಅಂದರೆ, ಪಾಸಿಟಿವ್ ಎನರ್ಜಿ. ಏನೇ ಸುಸ್ತನ್ನೂ, ಎಂಥದ್ದೇ ಟೆನ್ಷನ್ನನ್ನೂ ಓಡಿಸುವ ಶಕ್ತಿ ಈ ಮಾಯಾಪೇಯಕ್ಕಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ನಡೆದ ಸಮೀಕ್ಷೆಯ ವರದಿಯೂ ಹಾಗೆಯೇ ಇದೆ; 'ಆತ್ಮಹತ್ಯೆಯ ದಾರಿ ಹಿಡಿದವನಿಗೆ ಒಂದು ಕಪ್ ಕಾಫಿ ಕೊಟ್ಟರೆ, ಆ ನಿರ್ಧಾರವನ್ನೇ ಕೈಬಿಡುತ್ತಾನೆ'!
ಆದರೆ, ಕೆಲವು ಶತಮಾನಗಳ ಕೆಳಗೆ ಕಾಫಿಯನ್ನು ತುಂಬಾ ಅನುಮಾನಾಸ್ಪದವಾಗಿ ಕಾಣಲಾಗುತ್ತಿತ್ತು. 17ನೇ ಶತಮಾನದಲ್ಲಿ, ಯುರೋಪಿನಲ್ಲಿ ಕಾಫಿಗೆ ವಯಾಗ್ರ ಪಟ್ಟ ಸಿಕ್ಕಿತ್ತು. ಲೈಂಗಿಕ ಭಾವನೆಗಳನ್ನು ಉದ್ರೇಕಿಸುವ ಶಕ್ತಿ ಇದಕ್ಕಿತ್ತು ಅಂತಲೇ ಕಾಫಿಯನ್ನು ಆಗ ಮುದುಕರೂ ಕದ್ದು ಕುಡಿಯುತ್ತಿದ್ದರಂತೆ.
ಅದೇನೇ ಇರಲಿ, ಕಾಫಿ ಬಗ್ಗೆ ಮಾಥ್ಯೂ ಗ್ರೀನ್ ಎಂಬ ಕಾಲಜ್ಞಾನಿ ಹೇಳುವುದೇ ಬೇರೆ. 'ಕಾಫಿಯು ಇಂಗ್ಲೆಂಡಿನ ಸ್ಪೀಡಿನಲ್ಲೇ ತನ್ನ ಖದರ್ರನ್ನು ಬದಲಿಸಿಕೊಂಡಿತು'. ಇಂಗ್ಲೆಂಡಿನಲ್ಲಿ ಅತಿವೇಗದಲ್ಲಿ ಪ್ರಚಾರ ಪಡೆದ ವಸ್ತುಗಳಲ್ಲಿ ಕಾಫಿಯೂ ಒಂದು. 1652ರಲ್ಲಿ 'ಕಾಫಿ ಶಾಕ್‌' ಎಂಬ ಮೊದಲ ಕಾಫಿ ಅಂಗಡಿ ಪ್ರಾರಂಭವಾಯಿತು. ಎರಡೇ ವರ್ಷದಲ್ಲೇ 'ಕಾಫಿ ಶಾಕ್‌', ಕಾಫಿಯಿಂದ ತಯಾರಿಸಿದ ಸುಮಾರು 600 ಉತ್ಪನ್ನಗಳನ್ನು ಮಾರಲು ಶುರುಮಾಡಿತ್ತು.
ಅಂದಿನ ಕಾಫಿ ಅಂಗಡಿ, ಕೇವಲ ಎಂಜಾಯ್ ಶಾಪ್‌ಗಳಾಗಿರಲಿಲ್ಲ. ಅಂದಿನ ಆಗುಹೋಗುಗಳ ಬಗ್ಗೆ ಚರ್ಚಿಸಲು, ಮಾತನಾಡಲು, ಸುದ್ದಿ ಗ್ರಹಿಸಲು ಆ ಶಾಪ್‌ಗಳಲ್ಲಿ ಸೇರುತ್ತಿದ್ದರಂತೆ. 'ಪತ್ರಿಕೆಗಳಿಗೆ ಅಗತ್ಯವಾದ ಗಾಳಿ ಸುದ್ದಿ ಮತ್ತು ಗಾಸಿಪ್‌ಗಳೂ ಅಲ್ಲಿ ವಿನಿಮಯವಾಗುತ್ತಿತ್ತು' ಎನ್ನುತ್ತಾರೆ 'ನ್ಯೂಯಾರ್ಕ್ ಟೈಮ್ಸ್‌'ನ ಪತ್ರಕರ್ತ ಟಾಮ್ ಸ್ಟಾಂಡೇಜ್.
ಅಷ್ಟೇ ಅಲ್ಲ, ಕಾಫಿ ಅಂಗಡಿಗಳಲ್ಲೂ ಅಂದು ಅಂಚೆ ಕಚೇರಿಯ ವ್ಯವಸ್ಥೆಯಿತ್ತಂತೆ. ಜನಪ್ರಿಯ ಲೇಖಕರ ಕೃತಿಗಳನ್ನೂ ಅಲ್ಲೇ ಕೂತು ಓದಬಹುದಿತ್ತಂತೆ. ಇಂದಿನ ಜಾಲತಾಣಗಳಲ್ಲಿ ಎಲ್ಲವೂ ಇವೆಯಾದರೂ, ಕಾಫಿ ಅಂಗಡಿಯಂಥ ವಾತಾವರಣ ಇಲ್ಲ.
ಹಾಗಾದರೆ, ನಾವು ಬಹಳ ಕಳೆದುಕೊಂಡಿದ್ದೇವಾ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement