ಖುಷಿ

ಬೆನ್ನು

ತುಸು ಕತ್ತಲು ಇಣುಕುವಾಗಲೇ ಹೊರಟುಬಿಟ್ಟರೆ ಒಳ್ಳೆಯದು
ಇರುಳು ಗಾಢ ಕವಿಯುವಾಗ ತಲುಪಬಹುದು
ಹೆಚ್ಚೇನೂ ದೂರವಿಲ್ಲ
ಅಬ್ಬಬ್ಬಾ ಎಂದರೆ ನಾಲ್ಕೈದು ಮಾರು
ನೇರರಸ್ತೆಗಳಿಲ್ಲ ಸಂದಿಗೊಂದಿಗಳ ಸರಳಿನಲ್ಲೇ ಹಾದುಹೋಗಬೇಕು
ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಷ್ಟು ತಿರುವುಗಳು
ಎದುರಿನಿಂದ ಬರುವವರ ಕಣ್‌ಡಿಕ್ಕಿ ತಪ್ಪಿಸಿ ನಡೆಯಬೇಕು
ಅಪ್ಪಿತಪ್ಪಿಯೂ ಪಾದಗಳ ಜೋರಾಗಿ ನೆಲಕ್ಕೆ ಊರುವಂತಿಲ್ಲ
ಗುರುತುಗಳು ತಳ ಊರುವುದಕ್ಕೆ ಅಲ್ಲಿ ನಿಷೇಧವಿದೆ
ಹೋಗುವಾಗ ಸಣ್ಣ ಬೆಳಕಿನ ಕಿಡಿಗಳನ್ನೂ ಜೊತೆಗೆ ಕೊಂಡೊಯ್ಯುವಂತಿಲ್ಲ
ಕತ್ತಲು ಜೀವ ಕಳೆದುಕೊಳ್ಳುವುದಕ್ಕೆ ಗಟ್ಟಿ ನಿರ್ಬಂಧವಿದೆ
ಮಾರ್ಜಾಲ ಹೆಜ್ಜೆಯ ಹೂ ಹೆಕ್ಕುತ್ತಾ ಅಂಗಡಿಯ ಬಳಿ ಸಾಗಿ
ಮೆಲ್ಲ ಬಾಗಿಲು ಬಡಿದರೆ ಸಾಕು
ಕಾಣದ ಚಹರೆಯ ಆಪ್ತರು ಸನ್ನೆಯಲಿ ಒಳಕರೆಯುತ್ತಾರೆ
ಬಳಸಿ ಬಂದ ದಾರಿಗಳ ಜಾಡು ಹಿಡಿದು ಕಂಬಳಿ, ರತ್ನಗಂಬಳಿ
ಚಾಪೆ, ಮಣೆಗಳ ಹಾಕಿ ಸತ್ಕರಿಸುತ್ತಾರೆ
ಹೊತ್ತೊಯ್ದ ಬಗಲ ಚೀಲದ ಕಪ್ಪು ಸರಕುಗಳ ಅವರ
ಮುಂದೆ ಹರವಿಟ್ಟರಾಯ್ತು ಮಾತಿಲ್ಲದೆ ಮುಗುಳುನಕ್ಕು ಮಂತ್ರದಂಡದ
ತುದಿಯಿಂದ ಅವುಗಳನ್ನೆಲ್ಲ ಬಿಳಿಯಬಣ್ಣದಲ್ಲಿ ಅದ್ದಿತೆಗೆದು
ಒಳಗಿನ ಮಸಿ ಒಂದಿನಿತೂ ಗೋಚರಿಸದಂತೆ ಹೊಳೆಸುತ್ತಾರೆ...
ಸದ್ದು ಹುಟ್ಟಿ ಊರೆಲ್ಲ ಅಡ್ಡಾಡುವ ಮುನ್ನ ಪಿಸುಗಣ್ಣ ವಿಲೇವಾರಿ ಮುಗಿಸಿ
ಹೋದ ಹಾದಿಯಲೇ ಹಿಂತಿರುಗಿ ಮನೆಯ ಕದವಿಕ್ಕಿಕೊಂಡರಾಯಿತು.
ಬೆಳಕು ಬಾಗಿಲ ಬುಡದಲ್ಲಿ ಬಿದ್ದುಕೊಳ್ಳುತ್ತದೆ ಮಾಸಿದ ತಲೆ ಕೆರೆದುಕೊಳ್ಳುತ.ಟಿ

- ದೀಪ್ತಿ ಭದ್ರಾವತಿ
deepthibdvt@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

'ಮೊದಲು ನಿಮ್ಮ ಅಮೆರಿಕದಲ್ಲಿ ಕೈಗೆಟುಕುವ ದರದಲ್ಲಿ ಸೇವೆ ಒದಗಿಸಿ': ಒತ್ತಡಕ್ಕೆ ಭಾರತ ಮಣಿಯಲ್ಲ; ಎಲಾನ್ ಮಸ್ಕ್ ವಿರುದ್ಧ ನಿಶಿಕಾಂತ್ ದುಬೆ

'ನನ್ನನ್ನಲ್ಲ, ನಿಮ್ ಗಂಡನ ಗುರಾಯಿಸಿ', ಜಯಾ ಬಚ್ಚನ್‌ ಖಡಕ್ ನೋಟಕ್ಕೆ ಫೋಟೋಗ್ರಾಫರ್ ತಿರುಗೇಟು! Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ