ಖುಷಿ

ನೆಮ್ಮದಿ ಕೇಂದ್ರ

ಕತ್ತಲಂದರೆ ಭಯ
ನನ್ನ ಮಗನಿಗೆ ರಾತ್ರಿ ಎಂದರೆ ಭಯ. ಆತ ನಿದ್ರೆ ಹೋದ ಮೇಲಷ್ಟೇ ಲೈಟ್ ಆಫ್ ಮಾಡುತ್ತೇವೆ. ಮಧ್ಯ ರಾತ್ರಿ ಎಚ್ಚರವಾದಾಗ ಕಿರುಚಾಡುತ್ತಾನೆ.
- ಸುಜಾತ ಕೆ. ಐತಾಳ್, ಮೈಸೂರು
ನೀವು ಮಗನನ್ನು ಕೂರಿಸಿಕೊಂಡು ಹಾರಾರ್ ಸಿನಿಮಾ ನೋಡುವ ಚಾಳಿ ಬಿಡಿ. ಚಿಕ್ಕ ವಯಸ್ಸಿನ ಎಲ್ಲ ಮಕ್ಕಳಿಗೂ ರಾತ್ರಿ ಅಂದ್ರೆ ಭಯ. ನೀವು ಅತ್ಯಂತ ಸಮೀಪದಲ್ಲೇ ಇದ್ದೀರಿ ಎಂಬ ಭಾವವನ್ನು ನಿಮ್ಮ ಮಗನಲ್ಲಿ ತುಂಬಿ. ಭೀತಿ ಮೂಡಿಸುವ ಕಥೆ, ಸಿನಿಮಾಗಳಿಂದ ದೂರವಿರಿಸಿ. ರಾತ್ರಿಯನ್ನು ದೇವರು ಸೃಷ್ಟಿಸಿರುವುದು ಹಾಯಾಗಿ ನಿದ್ರಿಸಲು, ದೆವ್ವ, ಭೂತ ಏನೂ ಬರುವುದಿಲ್ಲ ಎಂದು ಧೈರ್ಯ ಹೇಳಿ.

ಕ್ರೈಂ ಸ್ಟೋರಿಯ ಚಟ
ಗಂಡನಿಗೆ ಕ್ರೈಂ ಸುದ್ದಿಗಳನ್ನು ನೋಡುವ ದುರಭ್ಯಾಸವಿದೆ. ಬೆಡ್‌ರೂಮಿಗೆ ಬರುವಾಗ ರೌದ್ರ ಮುಖದವರಾಗಿಯೋ, ಹತಾಶರಾಗಿಯೋ, ದುಃಖಿತಾರಾಗಿಯೋ ಬರುತ್ತಾರೆ. ಇದು ನನಗೆ ಸಮಸ್ಯೆಯಾಗಿದೆ.
- ಹೆಸರು ಬೇಡ, ನೆಲಮಂಗಲ
ಬಹುತೇಕರು ಇಂಥ ಸಮಸ್ಯೆ ಎದುರಿಸುತ್ತಿದ್ದಾರೆ. ಕ್ರೈಂ ಸುದ್ದಿ ಬರುವುದಕ್ಕೂ ಮುಂಚೆ ಗಂಡನೊಂದಿಗೆ ಪ್ರೀತಿಯಿಂದ ಮಾತನಾಡಿ. ಸಾಧ್ಯವಾದಷ್ಟು ಹೊಗಳಿ ರಸಿಕನನ್ನಾಗಿ ಮಾಡಿ. ಅಷ್ಟರಲ್ಲಿ ಕ್ರೈಂ ಸುದ್ದಿಗಿಂತ ಸಂಗಾತಿ ಮುಖ್ಯ ಎಂದು ನಿಮ್ಮ ಸೆರಗು ಹಿಡಿದು ಹಿಂಬಾಲಿಸುತ್ತಾನೆ!
ಜನ್ಮ ಜಾಲಾಡ್ತಾಳಾ?
ನಾನು ಮದುವೆ ಆಗುವ ಹುಡುಗಿಗೆ ಪತ್ತೇದಾರಿ ಕಾದಂಬರಿ ಓದುವ ಅಭ್ಯಾಸ ಇದೆಯಂತೆ. ಮದುವೆ ಆದ ಮೇಲೆ ನನ್ನ ಜನ್ಮವನ್ನು ಎಲ್ಲಿ ಜಾಲಾಡಿಬಿಡುತ್ತಾಳೋ ಎಂಬುದೇ ಚಿಂತೆ ಆಗಿದೆ.
- ವಿನಯ ಪ್ರಸಾದ್, ಶೃಂಗೇರಿ
ಆಕೆ ಕಾದಂಬರಿ ಓದುತ್ತಾಳೆ ಎಂಬುದಕ್ಕಿಂತ ಹಿಂದೆ ಮಾಡಿದ ಕೃತ್ಯಗಳು ಎಲ್ಲಿ ಬಯಲಿಗೆ ಬಂದು ಸಂಬಂಧ ಹಳಸುತ್ತದೋ ಎಂಬ ಭಯ ಕಾಡುತ್ತಿದೆ. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸದೆ ವಿಧಿಯಿಲ್ಲ. ಆಕೆಗೆ ಎಲ್ಲವನ್ನೂ ಹೇಳಿ ಮಾಡಿದ ಕೃತ್ಯಕ್ಕೆ ಪಶ್ಚಾತ್ತಾಪ ಇರುವುದಾಗಿ ಹೇಳಿ. 'ಹೆಣ್ಣು ಕ್ಷಮಯಾಧರಿತ್ರಿ' ಎನ್ನುತ್ತಾರೆ. ಈ ಮಾತು ನಿಜವಾಗಲಿ ಎಂದು ಆಶಿಸುತ್ತೇನೆ. ಮತ್ತೆಂದೂ ಅಂಥ ತಪ್ಪುಗಳಾಗದಂತೆ ನಿಗಾವಹಿಸಿ.

-   ಡಾ. ನರೇಂದ್ರ ಗಾಂಧಿ
nemmadikendra4@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ