ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ನೋಂದಣಿ ಮಾಡಿಸಿಕೊಡಬಹುದು

Vishwanath S
Updated On : 22 Feb 2014, 2:25 am

- ಶಿವಪ್ಪ ಉಪ್ಪಾರ
2006ರಲ್ಲಿ ಬೇರೊಬ್ಬರಿಗೆ ಒಂದು ಎಕರೆ ಜಮೀನು ಖರೀದಿಗೆ ಕೊಟ್ಟು (ಅಂದರೆ ಬಾಯಿಮಾತಿನಲ್ಲಿ) ಹಣ ಪಡೆದಿದ್ದೇನೆ. ಖರೀದಿದಾರ ಈಗ ನೋಂದಣಿ ಮಾಡಿಸಿಕೊಡುವಂತೆ ಕೇಳುತ್ತಿದ್ದಾನೆ, ಮಾಡಿಸಿಕೊಡಬಹುದೇ?
- ಮಾಡಿಸಿ ಕೊಡಬಹುದು. ನೋಂದಣಿ ಕಾಯ್ದೆಯಂತೆ ಅದು ನೋಂದಣಿಯಾಗದಿದ್ದರೆ ಮಾರಾಟ ಸಿಂಧುವಾಗುವುದಿಲ್ಲ. ಒಂದು ವೇಳೆ ನೀವು ಮಾಡಿಕೊಡದಿದ್ದರೆ ಆತ ನ್ಯಾಯಾಲಯದಲ್ಲಿ ದಾವಾ ಹಾಕಿ ಸ್ಪೆಸಿಫಿಕ್ ಪರ್ಫಾರ್ಮನ್ಸ್‌ಗೆ ಆದೇಶ ಪಡೆಯಬಹುದು.

ಅಗತ್ಯ ದಾಖಲೆಗಳನ್ನು ಸಲ್ಲಿಸಿ
- ಹೆಸರು, ಊರು ಬೇಡ
ನಾನೊಬ್ಬ ವಿದುರ. ಮಕ್ಕಳೂ ಇಲ್ಲ. ಈಗ ವಿಚ್ಛೇದನ ಪಡೆದ ಮಹಿಳೆಯೊಬ್ಬಳು ನನ್ನನ್ನು ಮದುವೆಯಾಗಲು ಮುಂದೆ ಬಂದಿದ್ದಾಳೆ. ಇದನ್ನು ನೋಂದಾಯಿಸಲು ಯಾವ ಕಚೇರಿಗೆ ಹೋಗಬೇಕು? ನಂತರ ಒಬ್ಬ ಮಗನನ್ನು ದತ್ತು ತೆಗೆದುಕೊಳ್ಳಲು ಏನು ದಾಖಲೆ ಕೊಡಬೇಕು?
- ನಿಮ್ಮ ಸ್ಥಳೀಯ ಸಬ್‌ರಿಜಿಸ್ಟ್ರಾರ್‌ರವರ ಕಚೇರಿಯಲ್ಲಿ ನೋಂದಣಿ ಮಾಡಿಸಬಹುದು. ನೀವು ನಿಮಗೆ ಹೆಂಡತಿ ಇಲ್ಲವೆಂದೂ, ಆಕೆ ತಾನು ವಿಚ್ಛೇದಿತಳೆಂದೂ ಸಾಬೀತು ಮಾಡಲು ದಾಖಲೆ ಹಾಜರುಪಡಿಸಬೇಕು. ಹಾಗೆಯೇ ದತ್ತು ತೆಗೆದುಕೊಂಡ ಪತ್ರವನ್ನು ಅದೇ ಕಚೇರಿಯಲ್ಲಿಯೇ ದಾಖಲಿಸಬೇಕು(ಕಲಂ 7, 1ರ, 11 ಹಿಂದೂ ದತ್ತಕ ಹಾಗೂ ನಿರ್ವಹಣಾ ಕಾಯ್ದೆ, 1956ರಂತೆ).

ವಿಲ್‌ನಲ್ಲಿದ್ದವರಿಗೆ ಮಾತ್ರ ಹಕ್ಕು
- ಹೆಸರು, ಊರಿಲ್ಲ
ನನ್ನ ತಾಯಿಯ ತಾಯಿ (ನನ್ನ ಅಜ್ಜಿ) ತನ್ನ ಆಸ್ತಿಯೆಲ್ಲವೂ ತನ್ನ ಕಾಲಾನಂತರ ತನ್ನ ಮಕ್ಕಳು, ಮೊಮ್ಮಕ್ಕಳಿಗೆ ಸೇರಬೇಕೆಂದು ವಿಲ್ ಮಾಡಿ ರಿಜಿಸ್ಟರ್ ಮಾಡಿಸಿದ್ದಾರೆ. ಅದಕ್ಕೆ ನನ್ನ ತಾಯಿ ಮತ್ತು ಅವರ ಇಬ್ಬರು ಸಹೋದರಿಯರು ಸಹಿ ಮಾಡಿರುತ್ತಾರೆ. ಅಜ್ಜಿ 1991ರಲ್ಲಿ ಹಾಗೂ ನನ್ನ ತಾಯಿ 1982ರಲ್ಲಿ ತೀರಿಕೊಂಡಿರುತ್ತಾರೆ. 1993ರಲ್ಲಿ ನಾವಿಬ್ಬರು ಸಹೋದರರು ಅಜ್ಜಿಯ ಆಸ್ತಿಯನ್ನು ಹಂಚಿಕೊಂಡಿದ್ದೇವೆ. ಆದರೆ ಈ ಆಸ್ತಿಯಲ್ಲಿ ನಮ್ಮ ಅಕ್ಕ ತಂಗಿಯರಿಗೆ ಯಾವುದೇ ಪಾಲು ಕೊಟ್ಟಿಲ್ಲ. ಈಗ ನಮ್ಮ ಸಹೋದರಿಯರು ತಮಗೂ ಅಜ್ಜಿಯ ಆಸ್ತಿಯಲ್ಲಿ ಪಾಲು ಸಿಗಬೇಕೆಂದು ದಾವಾ ಹಾಕಿದ್ದಾರೆ. ಏನು ಮಾಡಬೇಕು?
- ಹಿಂದೂ ಉತ್ತರಾಧಿಕಾರ ಕಾಯ್ದೆ 1956, ಕಲಂ 14ರ ಪ್ರಕಾರ ಒಬ್ಬ ಮಹಿಳೆಯ ಆಸ್ತಿಯು ಆಕೆಯ ಸ್ವಂತದ್ದಾಗಿದ್ದು ಅದನ್ನು ಅವರು ಯಾರಿಗೆ ಬೇಕಾದರೂ ಬರೆಯುವ ಪರಮಾಧಿಕಾರವಿದೆ. ಆದ್ದರಿಂದ ಅವರು ತಮ್ಮ ವಿಲ್‌ನಲ್ಲಿ ಯಾರ್ಯಾರಿಗೆ ಬರೆದಿದ್ದಾರೋ ಅವರಿಗೆ ಮಾತ್ರ ಹಕ್ಕು ಬರುತ್ತದೆ.

ಈಗ ಅವಧಿ ಮೀರಿಹೋಗಿದೆ
- ಬಿ.ಎನ್. ವೆಂಕಟೇಶ್
ನಮ್ಮ ತಾತನ ಆಸ್ತಿಯನ್ನು (ಅವಿಭಕ್ತ ಕುಟುಂಬ) ಅವರ ಸಹೋದರನ ಮಕ್ಕಳು ಹಾಗೂ ನನ್ನ ತಂದೆ 1954ರಲ್ಲಿ ಮಾರಾಟ ಮಾಡಿದ್ದಾರೆ. ಆಗ ಅವರ ಹೆಸರಿನಲ್ಲಿ ಖಾತೆ ಇರಲಿಲ್ಲ. ಈಗ ಅದನ್ನು ನಾವು ಮರಳಿ ಪಡೆಯಬಹುದೇ?
- ಲಿಮಿಟೇಷನ್ ಕಾಯ್ದೆಯ ಆರ್ಟಿಕಲ್ 65ರಂತೆ ನೀವು 12 ವರ್ಷದೊಳಗೆ ದಾವಾ ಹಾಕಬೇಕಾಗಿತ್ತು. ಆದ್ದರಿಂದ ಈಗ ವಾಯ್ದೆ ಮೀರಿದೆ.


- ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement