ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಪ್ರಕೃತಿ ಪ್ರಮೋದ

Vishwanath S
Updated On : 22 Feb 2014, 2:54 am

ಫೋಟೋಗ್ರಫಿ ಪ್ರಿಯರು, ಪರಿಣತರು ತಮ್ಮ ಸಾಮರ್ಥ್ಯದ ಅನಾವರಣಕ್ಕೆ ಈಗ ವೇದಿಕೆಗೆ ಕಾಯಬೇಕಿಲ್ಲ. ಡಿಜಿಟಲ್ ಕ್ಯಾಮೆರಾದಿಂದ ಕಂಪ್ಯೂಟರ್ ಹೊಕ್ಕುವ ಫೋಟೋಗಳು ಈಗ ಫೇಸ್‌ಬುಕ್‌ಗೆ ನೇರವಾಗಿ ಅಪ್‌ಲೋಡ್ ಆಗುತ್ತವೆ. ಅಲ್ಲಿ ಬೀಳುವ ಲೈಕ್‌ಗಳ ಸಂಖ್ಯೆ ನೋಡಿಯೇ ನಿಮ್ಮ ಫೋಟೋ ಎಷ್ಟು ಜನಪ್ರಿಯವಾಗಿದೆ ಎಂದು ಊಹಿಸಬಹುದು. ಹಾಗೆ ಅಧಿಕ ಲೈಕ್ ಗಳಿಸಿಕೊಂಡ ಒಳ್ಳೆಯ ಛಾಯಾಚಿತ್ರಗಳಿಗಳಿಗಾಗಿಯೇ ಆರಂಭವಾಗಿರುವ ಅಂಕಣ ಇದು...

ಕೃಷಿ ಕೆಲಸದ ನಡುವೆ ಬಿಡುವಾದಾಗಲೆಲ್ಲ ಕ್ಯಾಮೆರಾ ಎತ್ತಿಕೊಂಡು ಕಾಡು ಬೆಟ್ಟ ಸುತ್ತುವ ಪ್ರಮೋದ್ ಪೈಲೂರು, ಕಳೆದ ಮೂರು ವರ್ಷಗಳಿಂದ ಫೋಟೋಗ್ರಫಿಯನ್ನು ಗಾಢವಾಗಿ ನೆಚ್ಚಿದವರು. ಸುಳ್ಯ ತಾಲೂಕಿನ ದೊಡ್ಡತೋಟದಲ್ಲಿ ಪ್ರಗತಿಪರ ಕೃಷಿಕನಾಗಿರುವ ಪ್ರಮೋದ್, ಮನುಷ್ಯನ ಪ್ರವೇಶದಿಂದ ಕಾಡಿಗೂ ಅಲ್ಲಿನ ಜೀವಿಗಳಿಗೂ ಕಿರಿಕಿರಿಯಾಗಬಾರದೆಂಬ ಕಾಳಜಿ ಹೊಂದಿದವರು. ಇಲ್ಲಿರುವ ಬಾದಾಮಿ ದೇವಾಲಯದ ಫೋಟೊಗೆ ಬೀಳುತ್ತಿರುವ ಲೈಕುಗಳ ಸಂಖ್ಯೆ 500 ದಾಟಿ ಮುನ್ನುಗ್ಗುತ್ತಲೇ ಇದೆ. ವನ್ಯಜೀವನ, ಹಳ್ಳಿಜೀವನ ಇವರ ಆಸಕ್ತಿಯ ಕ್ಷೇತ್ರಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement